12 ಮಂದಿಯೊಂದಿಗೆ ಡೇಟಿಂಗ್.. 2 ವರ್ಷಗಳಲ್ಲಿ ವಿಚ್ಛೇದನ.. ʼಆʼ ಚಟದಿಂದ ಕರಿಯರ್‌ ನಾಶಮಾಡಿಕೊಂಡ ಖ್ಯಾತ ನಟಿ ಈಕೆ!!

Famous South Actress: ದಕ್ಷಿಣ ಭಾರತದ ಜನಪ್ರಿಯ ನಟಿ ಮನಿಶಾ ಕೊಯಿರಾಲಾ 12 ಜನರೊಂದಿಗೆ ಡೇಟಿಂಗ್ ಮಾಡಿದ ನಂತರ ವಿವಾಹವಾದರು.   

Written by - Savita M B | Last Updated : Apr 25, 2024, 05:48 PM IST
  • ನೇಪಾಳದ ನಟಿ ಮನಿಶಾ ಕೊಯಿರಾಲಾ ರಾಜಮನೆತನಕ್ಕೆ ಸೇರಿದವರು.
  • ಮನಿಶಾ ಕೊಯಿರಾಲಾ ಬಾಲಿವುಡ್ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
12 ಮಂದಿಯೊಂದಿಗೆ ಡೇಟಿಂಗ್.. 2 ವರ್ಷಗಳಲ್ಲಿ ವಿಚ್ಛೇದನ.. ʼಆʼ ಚಟದಿಂದ ಕರಿಯರ್‌ ನಾಶಮಾಡಿಕೊಂಡ ಖ್ಯಾತ ನಟಿ ಈಕೆ!! title=

Famous Actress manisha koirala: ನೇಪಾಳದ ನಟಿ ಮನಿಶಾ ಕೊಯಿರಾಲಾ ರಾಜಮನೆತನಕ್ಕೆ ಸೇರಿದವರು. ನಟನೆಯಲ್ಲಿನ ಆಸಕ್ತಿಯಿಂದಾಗಿ, ಅವರು 1989 ರಲ್ಲಿ ನೇಪಾಳಿ ಭಾಷೆಯ ಚಿತ್ರದಲ್ಲಿ ನಾಯಕಿಯಾಗಿ ತಮ್ಮ ಮೊದಲ ನಟನೆಯನ್ನು ಮಾಡಿದರು. ಇದರ ಬೆನ್ನಲ್ಲೇ ಅವರಿಗೆ 1991ರಲ್ಲಿ ಸೌದಾಗರ್ ಎಂಬ ಹಿಂದಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು.  

ಹಿಂದಿ ಚಿತ್ರಗಳಲ್ಲಿ ನಟಿಸಲು ಸತತ ಅವಕಾಶಗಳನ್ನು ಗಿಟ್ಟಿಸಿಕೊಂಡ ಅವರು ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್ ಅವರಂತಹ ಪ್ರಮುಖ ನಟರೊಂದಿಗೆ ಜೋಡಿಯಾಗಿ ನಟಿಸಿದರು.. 

ಇದನ್ನೂ ಓದಿ-Kiccha sudeep: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಇಬ್ಬರು ಅಕ್ಕಂದಿರು ಹೇಗಿದ್ದಾರೆ ನೋಡಿ!!

ಮನಿಶಾ ಕೊಯಿರಾಲಾ ಬಾಲಿವುಡ್ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರನ್ನು ವಿಶೇಷವಾಗಿ ತಮಿಳಿನಲ್ಲಿ ಪರಿಚಯಿಸಿದ ಕೀರ್ತಿ ನಿರ್ದೇಶಕ ಮಣಿರತ್ನಂ ಅವರಿಗೆ ಸಲ್ಲುತ್ತದೆ. 

ನಂತರ ನಟ ಶಂಕರ್ ಅವರ ಇಂಡಿಯನ್ ಚಿತ್ರದಲ್ಲಿ ಕಮಲ್ ಹಾಸನ್ ಎದುರು ನಟಿಸಿದರು. ಮನೀಷಾಳ ನಟನಾ ಕೌಶಲ್ಯದಿಂದ ಬೆರಗಾದ ಶಂಕರ್ ಅವರು ತಮ್ಮ ಮುಂದಿನ ಚಿತ್ರ ಮುಲ್ತ್ವಾನ್‌ನಲ್ಲಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದರು. ಅದೇ ರೀತಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೂ ಇವರು ನಟಿಸಿದ್ದರು. 

ಇಂತಹ ಲೀಡ್ ಹೀರೋಯಿನ್ 12 ಜನರ ಜೊತೆ ಡೇಟ್ ಮಾಡಿದ್ದಾಳೆ ಎಂಬ ಹೊಸ ಮಾಹಿತಿ ಹೊರಬಿದ್ದಿದೆ. ಹೌದು ಮನಿಷಾ ಅವರ ಡೇಟಿಂಗ್ ಲಿಸ್ಟ್ ನಲ್ಲಿ ಚಿತ್ರರಂಗದ ಸೆಲೆಬ್ರಿಟಿಗಳು ಮಾತ್ರವಲ್ಲದೆ ಉದ್ಯಮಿ ಮತ್ತು ಇತರ ಸೆಲೆಬ್ರಿಟಿಗಳೂ ಇದ್ದಾರೆ. ಅವರು ಚಿತ್ರರಂಗ ಪ್ರವೇಶಿಸಿದಾಗ, ಅವರು ಮೊದಲ ಬಾರಿಗೆ ನಟ ವಿವೇಕ್ ಮುಶ್ರನ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಇತ್ತು. ಅಲ್ಲದೇ 90 ರ ದಶಕದ ಜನಪ್ರಿಯ ಬಾಲಿವುಡ್ ನಟ ಮತ್ತು ರಜನಿಕಾಂತ್ ಚಿತ್ರದ ವಿಲನ್ ನಾನಾ ಪಾಟೇಕರ್ ಅವರೊಂದಿಗೆ ಡೇಟಿಂಗ್ ಮಾಡುವ ವರದಿಗಳು ಬಂದಿದ್ದವು.. 

ಇದನ್ನೂ ಓದಿ-ಕಾಂಗ್ರೆಸ್‌ಗೆ ಮತ ಹಾಕುವಂತೆ ನಟ ರಣವೀರ್ ಮನವಿ..! ವಿಡಿಯೋ ವೈರಲ್‌, ದೂರು ದಾಖಲು

ನಂತರ, ಮನಿಶಾ ಕೊಯಿರಾಲಾ ಡಿಜೆ ಹುಸೇನ್ ಅವರೊಂದಿಗೆ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿ.. ಬಳಿಕ ನೈಜೀರಿಯಾದ ಉದ್ಯಮಿ ಸಿಸಿಲ್ ಆಂಟೋನಿ ಮನಿಷಾ ಜೀವನದಲ್ಲಿ ಬಂದರು. ಮುಂದೆ ನಟ ಆರ್ಯನ್ ವೈತ್ ಜೊತೆ ಡೇಟಿಂಗ್ ಮಾಡಿದರು. ಅದರ ನಂತರ, ಮನೀಶಾ ನೇಪಾಳದ ಆಸ್ಟ್ರೇಲಿಯಾದ ರಾಯಭಾರಿ ಕ್ರಿಸ್ಪಿನ್ ಕಾನ್ರಾಯ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಹೊರಬಂದವು. ಇವರಷ್ಟೇ ಅಲ್ಲ.. ಮನಿಷಾ ಕೊಯಿರಾಲಾ ಅವರನ್ನು ಡೇಟ್ ಮಾಡಿದವರಲ್ಲಿ.. ಉದ್ಯಮಿ ಅಜೀಂ ಪ್ರೇಮ್‌ಜಿ ಪುತ್ರ ತಾರಿಕ್ ಪ್ರೇಮ್‌ಜಿ ಸಹ ಇದ್ದಾರೆ ಎನ್ನಲಾಗಿದೆ.. 

ನಂತರ ನಟಿ ಡೇಟಿಂಗ್ ಲೈಫ್ ಬೇಜಾರಾಗಿ... ಸಾಮ್ರಾಟ್ ದಲ್ಹಾ ಜೊತೆ ಮದುವೆಯಾದಳು. ಆದರೆ ಆಕೆಯ ವೈವಾಹಿಕ ಜೀವನ ಸರಿಯಾಗಿ ನಡೆಯದೆ 2 ವರ್ಷಗಳ ನಂತರ ಪತಿಗೆ ವಿಚ್ಛೇದನ ನೀಡಿದ್ದಾಳೆ. ಒಂದು ಹಂತದಲ್ಲಿ ಮದ್ಯಪಾನ ಮತ್ತು ಧೂಮಪಾನಿಯಾಗಿದ್ದ ಮನೀಶಾ ಕೊಯಿರಾಲ... ಕ್ಯಾನ್ಸರ್ ನಿಂದ ಬಳಲಿ ಚೇತರಿಸಿಕೊಂಡಿದ್ದರು. ಜೀವನದಲ್ಲಿ ಹಲವಾರು ವಿವಾದಗಳನ್ನು ಎದುರಿಸಿದ ಇವರು ಪ್ರಸ್ತುತ 53 ನೇ ವಯಸ್ಸಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಕ್ಯಾನ್ಸರ್ ವಿರೋಧಿ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News