Pooja Hegde: ಮದುವೆಯಾಗದೆ ತಾಯಿಯಾಗಲಿದ್ದಾರಾ ಪೂಜಾ ಹೆಗ್ಡೆ..?

South Actress Pooja Hegde: ಒಂದು ಕಾಲದಲ್ಲಿ ಟಾಪ್‌ ನಟಿಯರಲ್ಲಿ ಒಬ್ಬರಾಗಿದ್ದ ನಟಿ ಪೂಜಾ ಹೆಗ್ಡೆ ಸದ್ಯ ಅವಕಾಶಗಳಿಲ್ಲ ಕಾರಣ ಕಂಗೆಟ್ಟಿದ್ದಾರೆ ಎಂದೇ ಹೇಳಬಹುದು.. ಇದೇ ವೇಳೆ ನಟಿಯ ಕುರಿತಾದ ಶಾಕಿಂಗ್‌ ಸುದ್ದಿಯೊಂದು ಹರಿದಾಡುತ್ತಿದೆ..   

Written by - Savita M B | Last Updated : May 15, 2024, 01:39 PM IST
  • ಪೂಜಾ ಹೆಗ್ಡೆ ಟಾಲಿವುಡ್‌ನ ಬಹುತೇಕ ಎಲ್ಲಾ ಟಾಪ್ ಹೀರೋಗಳ ಎದುರು ನಟಿಸಿದ್ದಾರೆ.
  • ಆದರೆ ಪೂಜಾ ಕೆಲವು ವರ್ಷಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ
Pooja Hegde: ಮದುವೆಯಾಗದೆ ತಾಯಿಯಾಗಲಿದ್ದಾರಾ ಪೂಜಾ ಹೆಗ್ಡೆ..?  title=

Pooja Hegde: ಪೂಜಾ ಹೆಗ್ಡೆ ಟಾಲಿವುಡ್‌ನ ಬಹುತೇಕ ಎಲ್ಲಾ ಟಾಪ್ ಹೀರೋಗಳ ಎದುರು ನಟಿಸಿದ್ದಾರೆ.. ಮಹೇಶ್ ಬಾಬು, ಪ್ರಭಾಸ್, ಎನ್‌ಟಿಆರ್, ಅಲ್ಲು ಅರ್ಜುನ್ ಹೀಗೆ ಹಲವಾರು ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ.. ಆದರೆ ಪೂಜಾ ಕೆಲವು ವರ್ಷಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ 

ಪೂಜಾ ಹೆಗ್ಡೆ ಚಿತ್ರಗಳಾದ ರಾಧೆ ಶ್ಯಾಮ್, ಆಚಾರ್ಯ, ಬೀಸ್ಟ್, ಸರ್ಕಸ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿದ್ದವು. ಆದರೆ ಅದೇ ವೇಳೆ ತೆಲುಗಿನಲ್ಲಿ ಶ್ರೀಲೀಲಾಗೆ ಬೇಡಿಕೆ ಹೆಚ್ಚಾದ ಕಾರಣ ಪೂಜಾ ಅವರನ್ನು ಟಾಲಿವುಡ್ ಸಂಪೂರ್ಣವಾಗಿ ಬದಿಗಿಟ್ಟಿತು. ಮೇಲಾಗಿ ಗುಂಟೂರು ಕರಂ ಸಿನಿಮಾದಿಂದ ಕೂಡ ಹೊರಗುಳಿದಿದ್ದರು.. ತೆಲುಗಿನಲ್ಲಿ ಒಂದೇ ಒಂದು ಸಿನಿಮಾ ಇಲ್ಲದೆ ಪೂಜಾ ಹೆಗಡೆ ಕಂಗಾಲಾಗಿದ್ದರು. ಈ ನಡುವೆ ಪೂಜಾ ಹೆಗಡೆ ಇತ್ತೀಚೆಗಷ್ಟೇ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. 

ಇದನ್ನೂ ಓದಿ-Anchor Anushree: ಕೂಡಿ ಬಂತಾ ಕಂಕಣಭಾಗ್ಯ, ಸದ್ಯದಲ್ಲೇ ನಟಿ, ಆಂಕರ್‌ ಅನುಶ್ರೀ ಮದ್ವೆ!? ಹುಡ್ಗ ಯಾರು ಗೊತ್ತಾ? 

ನಟಿ ಪೂಜಾ ಮದುವೆಯಾಗದೆ ತಾಯಿಯಾಗಬೇಕೆಂದು ಬಯಸಿದ್ದಾಳೆ ಎನ್ನಲಾಗುತ್ತಿದೆ.. ವಿಚಾರ ಏನಪ್ಪಾ ಅಂದ್ರೆ ಇದು ನಿಜ ಜೀವನದಲ್ಲಿ ಅಲ್ಲ.. ಸಿನಿ ಜೀವನದಲ್ಲಿ.. ಹೌದು ಬಾಲಿವುಡ್ ಚಿತ್ರವೊಂದರಲ್ಲಿ ಗರ್ಭಿಣಿಯಾಗಿ ನಟಿಸಲು ಪೂಜಾ ಹೆಗ್ಡೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ವರದಿಗಳಿದ್ದು, ಸ್ಟಾರ್ ಡೈರೆಕ್ಟರ್ ಪೂಜಾಗೆ ಈ ಬಂಪರ್ ಆಫರ್ ಕೊಟ್ಟಿದ್ದಾರೆ ಎನ್ನಲಾಗಿದೆ.. 

ಅವಕಾಶಗಳಿಲ್ಲದೇ ನಿಜಕ್ಕೂ ಚಿಂತಾಕ್ರಾಂತರಾಗಿದ್ದ ಪೂಜಾ ಈ ಚಿತ್ರಕ್ಕೆ ಯೆಸ್ ಅಂದಿದ್ದಾರೆ. ಆದರೆ, ಚಿತ್ರದಲ್ಲಿ ಅವರು ಚಿಕ್ಕ ವಯಸ್ಸಿನ ಪಾತ್ರದಲ್ಲಿ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದನ್ನು ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ಪೂಜಾ ಹೆಗ್ಡೆ ಅವರು ತಾಯಿ ಪಾತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

ಇದನ್ನೂ ಓದಿ-ಆʼ ಕಮಿಟ್‌ಮೆಂಟ್‌ನಿಂದ ಸ್ಟಾರ್‌ ಹಿರೋಯಿನ್‌, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗಿನ ಲವ್ ರಿವೀಲ್ ಮಾಡದಿರಲು ಕಾರಣ ಇದೇ?!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News