ಪ್ರಭಾಸ್, ಶಾರುಖ್, ಅಲ್ಲು ಅರ್ಜುನ್ ಮೂವರು ಅಲ್ಲ.. ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ 73 ವರ್ಷದ ಈ ನಟ

Highest paid actor: ಇಲ್ಲಿಯವರೆಗೆ ಪ್ರಭಾಸ್, ಸಲ್ಮಾನ್, ಕಮಲ್ ಹಾಸನ್ ಮತ್ತು ಶಾರುಖ್ ಖಾನ್ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ತಾರೆಗಳು ಎಂದು ಪರಿಗಣಿಸಲಾಗಿತ್ತು.. ಆದರೆ ಈಗ ಆ ಪಟ್ಟಿಯ ಮೊದಲ ಸ್ಥಾನದಲ್ಲಿ  ಯುವ ನಟನಲ್ಲ, 73 ವರ್ಷದ ಹಿರಿಯ ಸೂಪರ್‌ಸ್ಟಾರ್ ಇದ್ದಾರೆ.. ಯಾರು ಆ ಹಿರಿಯ ಸ್ಟಾರ್‌ ನಾಯಕ ಅಂತೀರಾ ಈ ಸ್ಟೋರಿ ಓದಿ.. 

Written by - Savita M B | Last Updated : Dec 15, 2023, 11:11 AM IST
  • ಅಭಿಮಾನಿಗಳು ಪ್ರೀತಿಯಿಂದ ತಲೈವಾ ಎಂದು ಕರೆಯುವ ರಜನಿಕಾಂತ್
  • ಸದ್ಯ ಇವರನ್ನು ಸೌತ್‌ ಸಿನಿರಂಗದಲ್ಲಿ ದೇವರಂತೆ ಪೂಜಿಸುತ್ತರಿದ್ದಾರೆ..
  • ಒಟ್ಟಿನಲ್ಲಿ ‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಅದ್ಭುತವಾಗಿ ನಟಿಸಿದ್ದಾರೆ..
ಪ್ರಭಾಸ್, ಶಾರುಖ್, ಅಲ್ಲು ಅರ್ಜುನ್ ಮೂವರು ಅಲ್ಲ.. ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ 73 ವರ್ಷದ ಈ ನಟ  title=

Rajanikanth Remuneration: ಅಭಿಮಾನಿಗಳು ಪ್ರೀತಿಯಿಂದ ತಲೈವಾ ಎಂದು ಕರೆಯುವ ರಜನಿಕಾಂತ್ ಅವರು ಕೆಲವು ದಿನಗಳ ಹಿಂದೆ ತಮ್ಮ 73 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.. ಸದ್ಯ ಇವರನ್ನು ಸೌತ್‌ ಸಿನಿರಂಗದಲ್ಲಿ ದೇವರಂತೆ ಪೂಜಿಸುತ್ತರಿದ್ದಾರೆ.. ರಜನಿಕಾಂತ್ ವಯಸ್ಸು ಮತ್ತು ಅವರ ಚಲನಚಿತ್ರಗಳ ಯಶಸ್ಸು ಅಭಿಮಾನಿಗಳಲ್ಲಿ ಅವರ ಜನಪ್ರಿಯತೆಯನ್ನು ಹೆಚ್ಚಿಸುತ್ತಲೇ ಇವೆ.. 

2023 ರಲ್ಲಿ ರಜನಿಕಾಂತ್ 'ಜೈಲರ್' ಸಿನಿಮಾ ಮಾಡಿದ್ದರು.. ಈ ಚಿತ್ರ 600 ಕೋಟಿಗೂ ಹೆಚ್ಚು ಗಳಿಕೆ ಮಾಡಿ ತಮಿಳು ಚಿತ್ರರಂಗದ ಚಿತ್ರಣವನ್ನೇ ಬದಲಿಸಿತು.. ಎರಡು ತಮಿಳು ಚಿತ್ರಗಳಿಂದ 500 ರೂಗಿಂತ ಹೆಚ್ಚು ಗಳಿಸಿದ ದಕ್ಷಿಣದ ಏಕೈಕ ನಟ ಎಂದರೇ ಅದು ರಜನಿಕಾಂತ್..

ಇದನ್ನೂ ಓದಿ-'ಭಾಗ್ಯಲಕ್ಷ್ಮೀ' ಧಾರಾವಾಹಿಯ ಸುಷ್ಮಾ ರಾವ್‌ ಅವರ ಪತಿ ಇವರೇ.. ಕನ್ನಡದ ಖ್ಯಾತ ನಿರ್ದೇಶಕ ಇವರು!

ಈ ವಯಸ್ಸಿನಲ್ಲೂ ರಜನಿಕಾಂತ್ ತೆರೆಯ ಮೇಲೆ ನಾಯಕ ನಟನಾಗುವ ಜೊತೆಗೆ ಏಕಾಂಗಿಯಾಗಿ ಚಿತ್ರಕ್ಕೆ ಕಮಾಂಡ್ ಮಾಡಿ ದಾಖಲೆಗಳನ್ನು ನಿರ್ಮಿಸುತ್ತಾರೆ. ‘ಜೈಲರ್’ ಚಿತ್ರದಲ್ಲಿ ನಟಿಸಿದ ರಜನಿಕಾಂತ್ ದಕ್ಷಿಣ ಭಾರತ ಮಾತ್ರವಲ್ಲದೆ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಹೊರಹೊಮ್ಮಿದ್ದಾರೆ.. ಈ ಚಿತ್ರಕ್ಕಾಗಿ ಅವರು 210 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.. 

ವರದಿಗಳ ಪ್ರಕಾರ, 'ಜೈಲರ್' ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ರಜನಿಕಾಂತ್ ಅವರಿಗೆ 210 ಕೋಟಿ ರೂಪಾಯಿ ಸಂಭಾವನೆ ನೀಡಲಾಯಿತು.. ಮತ್ತು ಚಿತ್ರದ ಭಾಗವಾಗಲು ಹೆಚ್ಚುವರಿಯಾಗಿ 100 ಕೋಟಿ ರೂಪಾಯಿ ಸಂಭಾವನೆ ಪಡೆದು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ... ಒಟ್ಟಿನಲ್ಲಿ ‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಅದ್ಭುತವಾಗಿ ನಟಿಸಿದ್ದಾರೆ.. 

ಇದನ್ನೂ ಓದಿ-ಶೂಟಿಂಗ್ ಸೆಟ್’ಗೆ ಬಂದು ಮದುವೆ ಆಗುವಂತೆ ಹಠ ಮಾಡಿದ ಖ್ಯಾತ ಸೀರಿಯಲ್ ನಟಿ: ದಿಕ್ಕುತೋಚದೆ 46ನೇ ವಯಸ್ಸಲ್ಲಿ ತಾಳಿ ಕಟ್ಟಿದ ಹಾಸ್ಯನಟ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News