ರಾಮಾಯಣದ ಎಲ್ಲ ಪ್ರಶ್ನೆಗಳಿಗೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಉತ್ತರ ನೀಡಿದ್ದು ಹೇಗೆ ಗೊತ್ತೇ?

ರಾಮಾಯಣದ ಬಗ್ಗೆ ಸೋನಾಕ್ಷಿ ಸಿನ್ಹಾ ಅವರ ಜ್ಞಾನದ ಕೊರತೆ ಬಗ್ಗೆ ಬಹಳಷ್ಟು ಹೇಳಲಾಗಿದೆ ಮತ್ತು ಬರೆಯಲಾಗಿದೆ. ಇತ್ತೀಚೆಗೆ, ಇನ್ಸ್ಟಾಗ್ರಾಮ್ನಲ್ಲಿ ತನ್ನ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಅವಧಿಯಲ್ಲಿ ಅವರಿಗೆ ಮತ್ತೊಮ್ಮೆ ಈ ಮಹಾಕಾವ್ಯದ ಬಗ್ಗೆ ಪ್ರಶ್ನೆ ಕೇಳಲಾಯಿತು.

Last Updated : Apr 18, 2020, 01:01 AM IST
ರಾಮಾಯಣದ ಎಲ್ಲ ಪ್ರಶ್ನೆಗಳಿಗೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಉತ್ತರ ನೀಡಿದ್ದು ಹೇಗೆ ಗೊತ್ತೇ? title=

ನವದೆಹಲಿ: ರಾಮಾಯಣದ ಬಗ್ಗೆ ಸೋನಾಕ್ಷಿ ಸಿನ್ಹಾ ಅವರ ಜ್ಞಾನದ ಕೊರತೆ ಬಗ್ಗೆ ಬಹಳಷ್ಟು ಹೇಳಲಾಗಿದೆ ಮತ್ತು ಬರೆಯಲಾಗಿದೆ. ಇತ್ತೀಚೆಗೆ, ಇನ್ಸ್ಟಾಗ್ರಾಮ್ನಲ್ಲಿ ತನ್ನ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಅವಧಿಯಲ್ಲಿ ಅವರಿಗೆ ಮತ್ತೊಮ್ಮೆ ಈ ಮಹಾಕಾವ್ಯದ ಬಗ್ಗೆ ಪ್ರಶ್ನೆ ಕೇಳಲಾಯಿತು.

ಆದರೆ ಇದಕ್ಕೆ ಅವರು ನೀಡಿರುವ ಉತ್ತರ ಮಾತ್ರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸುವಂತಿದೆ.ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಅವರನ್ನು ಈ ವಿಚಾರವಾಗಿ ಕಾಲೆಳೆಯಲಾಗುತ್ತದೆ. ಈಗ ಅವರು ಇದಕ್ಕೆ ಉತ್ತರಿಸುತ್ತಾ "ನಿಮ್ಮಲ್ಲಿ ಬಹಳಷ್ಟು ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆ, ದಯವಿಟ್ಟು ಅದನ್ನು ದೂರದರ್ಶನದಲ್ಲಿ ನೋಡಿ ಮತ್ತು ನಿಮ್ಮ ಎಲ್ಲಾ ಉತ್ತರಗಳನ್ನು ನೀವು ಪಡೆಯುತ್ತೀರಿ. ಜೈ ಭಜರಂಗ್ ಬಲಿ! ಎಂದು ಅವರು ಸಂಜೀವನಿ ಮೂಲಿಕೆ ಪ್ರಶ್ನೆಗೆ ಉತ್ತರವಾಗಿ ಅವರು ಬರೆದಿದ್ದಾರೆ.

ಕಳೆದ ವರ್ಷ ಕೌನ್ ಬನೇಗಾ ಕ್ರೊರಪತಿ ಸಂದರ್ಭದಲ್ಲಿ, ಹನುಮಾನ್ ಸಂಜೀವನಿ ಗಿಡಮೂಲಿಕೆ ಯಾರಿಗಾಗಿ ತಂದರು ಎಂದು ಕೇಳಿದಾಗ ಸೋನಾಕ್ಷಿ ಸಿನ್ಹಾ ಉತ್ತರಿಸಲು ತಡವರಿಸಿದ್ದರು. ವಿಶೇಷವೆಂದರೆ ಅವರ ಬಂಗಲೆ ರಾಮಾಯಣ ಎಂದು ಕರೆಯಲ್ಪಡುತ್ತದೆ, ಆಕೆಯ ತಂದೆ ಶತ್ರುಘನ್ ಸಿನ್ಹಾ ಅವರನ್ನು ಭಗವಾನ್ ರಾಮನ ಸಹೋದರನ ಹೆಸರಿಡಲಾಗಿದೆ, ಮತ್ತು ಆಕೆಯ ಸಹೋದರರಾದ ಲುವ್ ಮತ್ತು ಕುಶ್ ಕೂಡ ತಮ್ಮ ಹೆಸರುಗಳನ್ನು ಭಗವಾನ್ ರಾಮನ ಪುತ್ರರಿಂದ ಪಡೆದಿದ್ದಾರೆ.ಹೀಗಿದ್ದರರೂ ಕೂಡ ಅವರಿಗೆ ಉತ್ತರಿಸಲಾಗಲಿಲ್ಲ ಈ ಹಿನ್ನಲೆಯಲ್ಲಿ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿತ್ತು, ಲಾಕ್ ಡೌನ್ ಸಮಯದಲ್ಲಿ ರಾಮಾಯಣವನ್ನು ಮರುಪ್ರಸಾರ ಮಾಡುವುದರೊಂದಿಗೆ, ಸೋನಾಕ್ಷಿ ಸಿನ್ಹಾ ಈ ವಿಚಾರವಾಗಿ ಉತ್ತರಿಸುತ್ತಾ ಎಲ್ಲ ಟ್ರೋಲ್ ಗಳ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

Trending News