ಗಾಯಕ ಸೋನು ನಿಗಮ್‌ ಮೇಲೆ ʼಶಿವಸೇನಾ ಶಾಸಕನ ಪುತ್ರʼನಿಂದ ಹಲ್ಲೆ..! ಇದೇ ಕಾರಣ..

ಸೋಮವಾರ ರಾತ್ರಿ ಮುಂಬೈನ ಚೆಂಬೂರ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೆಲ್ಫಿ ತೆಗೆದುಕೊಳ್ಳುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಶಿವಸೇನಾ ಉದ್ಧವ್ ಠಾಕ್ರೆ ಬಣದ ಶಾಸಕರೊಬ್ಬರ ಪುತ್ರ ಖ್ಯಾತ ಗಾಯಕ ಸೋನು ನಿಗಮ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಈ ಕುರಿತು ಸೋನು ದೂರು ಕೂಡಾ ನೀಡಿದ್ದಾರೆ. ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷರಾದ ಸೋನು ನಿಗಮ್ ಎಲ್ಲವೂ ಸರಿಯಾಗಿದೆ ಅಂತ ಹೇಳಿದ್ದಾರೆ.

Written by - Krishna N K | Last Updated : Feb 21, 2023, 02:02 PM IST
  • ಶಿವಸೇನಾ ಶಾಸಕನ ಪುತ್ರನಿಂದ ಖ್ಯಾತ ಗಾಯಕ ಸೋನು ನಿಗಮ್‌ ಮೇಲೆ ಹಲ್ಲೆ.
  • ಚೆಂಬೂರ್ ಜಿಮ್ಖಾನಾದಲ್ಲಿ ನಡೆದ ಶಿವಸೇನಾ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಕಾರ್ಯಕ್ರಮದಲ್ಲಿ ಘಟನೆ.
  • ಕಾರ್ಯಕ್ರಮ ಆಯೋಜನೆ ಮಾಡಿದ್ದ ಶಾಸಕನ ಪುತ್ರನಿಂದಲೇ ಹಲ್ಲೆ ಆರೋಪ.
ಗಾಯಕ ಸೋನು ನಿಗಮ್‌ ಮೇಲೆ ʼಶಿವಸೇನಾ ಶಾಸಕನ ಪುತ್ರʼನಿಂದ ಹಲ್ಲೆ..! ಇದೇ ಕಾರಣ.. title=

Attack on Sonu Nigam : ಸೋಮವಾರ ರಾತ್ರಿ ಮುಂಬೈನ ಚೆಂಬೂರ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೆಲ್ಫಿ ತೆಗೆದುಕೊಳ್ಳುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಶಿವಸೇನಾ ಉದ್ಧವ್ ಠಾಕ್ರೆ ಬಣದ ಶಾಸಕರೊಬ್ಬರ ಪುತ್ರ ಖ್ಯಾತ ಗಾಯಕ ಸೋನು ನಿಗಮ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಈ ಕುರಿತು ಸೋನು ದೂರು ಕೂಡಾ ನೀಡಿದ್ದಾರೆ. ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷರಾದ ಸೋನು ನಿಗಮ್ ಎಲ್ಲವೂ ಸರಿಯಾಗಿದೆ ಅಂತ ಹೇಳಿದ್ದಾರೆ.

ಹೌದು.. ನಿನ್ನೆ ಚೆಂಬೂರ್ ಜಿಮ್ಖಾನಾದಲ್ಲಿ ಶಿವಸೇನಾ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಸೋನು ನಿಗಮ್‌ ಸಹ ಭಾಗವಹಿಸಿ ತಮ್ಮ ತಂಡದೊಂದಿಗೆ ಪ್ರದರ್ಶನ ನೀಡಿದ್ದರು. ತಮ್ಮ ಕಾರ್ಯಕ್ರಮ ಪೂರ್ಣಗೊಳಿಸಿ ವೇದಿಕೆಯ ಮೇಲಿಂದ ಕೆಳಗೆ ಇಳಿಯುವ ವೇಳೆ, ಶಾಸಕ ಪ್ರಕಾಶ್ ಫಾಟರ್‌ಪೇಕರ್ ಅವರ ಪುತ್ರ ಸ್ವಪ್ನಿಲ್ ಫಾಟರ್‌ಪೇಕರ್ ಸೆಲ್ಫಿಗಾಗಿ ಬಂದು ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಈ ಇಬ್ಬರಿಗೆ ಅರ್ಪಣೆ ಎಂದ ರಿಷಬ್ ಶೆಟ್ಟಿ

ನಿಗಮ್ ನೀಡಿದ ದೂರಿನ ಆಧಾರದ ಮೇಲೆ, ಚೆಂಬೂರ್ ಪೊಲೀಸರು ಸ್ಥಳೀಯ ಶಿವಸೇನಾ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಅವರ ಪುತ್ರ ಸ್ವಪ್ನಿಲ್ ಫಾಟರ್‌ಪೇಕರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 341 (ತಪ್ಪು ಸಂಯಮ) ಮತ್ತು 337 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. 

ಇವೆಂಟ್‌ ನಂತರ ತಂಡದ ಜೊತೆ ವೇದಿಕೆಯಿಂದ ನಿರ್ಗಮಿಸುತ್ತಿದ್ದಾಗ, ಸ್ವಪ್ನಿಲ್ ಫಾಟರ್‌ಪೇಕರ್ ಹಿಂಬದಿಯಿಂದ ಬಂದು ಗಾಯಕನನ್ನು ಹಿಡಿದಿದ್ದಾರೆ. ಸ್ವಪ್ನಿಲ್‌ ಸೋನು ನಿಗಮ್‌ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದನು. ಈ ವೇಲೆ ನಿಗಮ್ ಸಹೋದ್ಯೋಗಿ ಹರಿ ಪ್ರಕಾಶ್ ಸ್ವಪ್ನಿಲ್‌ ಅವರನ್ನು ತಡೆಯಲು ಯತ್ನಿಸಿ ಪಕ್ಕಕ್ಕೆ ಕರೆದೊಯ್ದಿದ್ದಾರೆ. ಆದರೆ, ಆರೋಪಿಗಳು ಪ್ರಕಾಶ್‌ಗೆ ಹಲ್ಲೆ ನಡೆಸಿದ್ದರಿಂದ ಅವರು ವೇದಿಕೆಯಿಂದ ಕೆಳಗೆ ಬಿದ್ದಿದ್ದಾರೆ. ನಂತರ ಸ್ವಪ್ನಿಲ್‌ ನಿಗಮ್‌ ಅವರನ್ನೂ ತಳ್ಳಿದ್ದರಿಂದ, ಅವರು ಮೆಟ್ಟಿಲುಗಳ ಮೇಲೆ ಬಿದ್ದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಘಟನೆ ಕುರಿತು ಆರೋಪಿ ಸ್ವಪ್ನಿಲ್‌ ಸಹೋದರಿ ಟ್ವೀಟ್‌ ಮಾಡಿದ್ದು, ನಿಗಮ್ ಮತ್ತು ಅವರ ತಂಡಕ್ಕೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ನಿಗಮ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ತಮ್ಮ ಸಹೋದರ ಈ ರೀತಿ ಮಾಡುವುದಾಗಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News