ಬೆಂಗಳೂರು: ಮಕರ ಸಂಕ್ರಾಂತಿಯ ಪ್ರಯುಕ್ತ ಬಿಡುಗಡೆಯಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭಜರಂಗಿ 2 ಸಿನಿಮಾ ಪೋಸ್ಟರ್ ಈಗ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಪೋಸ್ಟರ್ ನಲ್ಲಿ ಶಿವರಾಜ್ ಕುಮಾರ್ ರೌದ್ರ ಅವತಾರದಲ್ಲಿ ಕಾಣಿಸುತ್ತಾರೆ. ಎಲ್ಲೋ ಒಂದು ಕಡೆ ಈ ಪೋಸ್ಟರ್ ಪೌರಾಣಿಕ ಚಿತ್ರದಂತೆ ಭಾಸವಾಗುತ್ತದೆ. ನಿರ್ದೇಶಕರ ಪ್ರಕಾರ ಈ ಪೋಸ್ಟರ್ ಹುಡುಕಾಟವನ್ನು ಸೂಚಿಸುತ್ತದೆ.ಇದೇ ವೇಳೆ ಈ ಸಿನಿಮಾ ಎಂದಿನಂತೆ ಬರುವ ಶಿವಣ್ಣ ಅವರ ಚಿತ್ರವಲ್ಲ ಮತ್ತು ಈ ಚಿತ್ರದ ಕಥೆ ಇದುವರೆಗೆ ಹೇಳಲಾಗದ್ದು ಎಂದು ಕೂತುಹಲ ಮೂಡಿಸಿದ್ದಾರೆ.
ಈ ಸಿನಿಮಾವನ್ನು ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಮತ್ತು ಇದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ಸತತ ನಾಲ್ಕನೇ ಯೋಜನೆಯಾಗಿದೆ. ಇದು ಹರ್ಷ ಅವರ ಮೂರನೇ ಸಿನಿಮಾವಾಗಿದೆ. ಭಾವನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಹೆಚ್ಚಾಗಿ ರಂಗಭೂಮಿ ಹಿನ್ನೆಲೆಯಿಂದ ಬಂದವರು ಇದ್ದಾರೆ. ಭಜರಂಗಿ 2 ರ ತಾಂತ್ರಿಕ ಸಿಬ್ಬಂದಿಯಲ್ಲಿ ಸಂಗೀತ ನಿರ್ದೇಶಕರಾಗಿ ಅರ್ಜುನ್ ಜನ್ಯಾ, ಛಾಯಾಗ್ರಾಹಕರಾಗಿ ಜೆ ಸ್ವಾಮಿ ಮತ್ತು ಸಂಕಲನಕಾರರಾಗಿ ದೀಪು ಎಸ್ ಕುಮಾರ್ ಸೇರಿದ್ದಾರೆ.
ಪ್ರಸ್ತುತ ಚಿತ್ರದ ಚಿತ್ರೀಕರಣವು ಚುರುಕಾಗಿ ನಡೆಯುತ್ತಿದ್ದು, ಪ್ರಸ್ತುತ ತಂಡವು ಬೆಂಗಳೂರಿನಲ್ಲಿ ಕ್ಲೈಮ್ಯಾಕ್ಸ್ ಭಾಗಗಳನ್ನು ಚಿತ್ರೀಕರಿಸುತ್ತಿದೆ. ನಂತರ ಅವರಿಗೆ ಚಲನಚಿತ್ರವನ್ನು ಪೂರ್ಣಗೊಳಿಸಲು 26 ದಿನಗಳು ಉಳಿದಿವೆ. ನಿರ್ಮಾಣದ ನಂತರದ ಕೆಲಸಗಳೊಂದಿಗೆ ಏಕಕಾಲದಲ್ಲಿ ಪ್ರಾರಂಭಿಸಿರುವ ನಿರ್ದೇಶಕರು ಬೇಸಿಗೆಯಲ್ಲಿ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.