ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ : ವಿಚಾರಣೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಶಿಲ್ಪಾ ಶೆಟ್ಟಿ ..!

ವಿಶ್ವಾಸಾರ್ಹ ಮೂಲಗಳ ಪ್ರಕಾರ, ಇಡೀ ವಿಚಾರಣೆಯ ವೇಳೆ, ಶಿಲ್ಪಾ ಶೆಟ್ಟಿ  3 ರಿಂದ 4 ಬಾರಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಇಡೀ ಪ್ರಕರಣದಿಂದಾಗಿ ತನ್ನ ಇಮೇಜ್ ಗೆ ಧಕ್ಕೆಯುಂಟಾಗಿದೆ ಎಂದು,  ಶಿಲ್ಪಾ ಶೆಟ್ಟಿ ಅಪರಾಧ ವಿಭಾಗದ ಅಧಿಕಾರಿಗಳಿಗೆ ಹೇಳಿದ್ದಾರೆ.   

Written by - Ranjitha R K | Last Updated : Jul 24, 2021, 06:50 PM IST
  • ವಿಚಾರಣೆ ವೇಳೆ ಕಣ್ಣೀರಿಟ್ಟ ಶಿಲ್ಪಾ ಶೆಟ್ಟಿ
  • ಪ್ರಕರಣದಿಂದ ತನ್ನ ಇಮೇಜ್ ಗೆ ಧಕ್ಕೆಯಾಗಿದೆ ಎಂದು ಬೇಸರ
  • ಶಿಲ್ಪಾ ಶೆಟ್ಟಿ ಮುಂದೆ ಪ್ರಶ್ನೆ ಗಳ ಸರಮಾಲೆ
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ : ವಿಚಾರಣೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಶಿಲ್ಪಾ ಶೆಟ್ಟಿ ..! title=
ವಿಚಾರಣೆ ವೇಳೆ ಕಣ್ಣೀರಿಟ್ಟ ಶಿಲ್ಪಾ ಶೆಟ್ಟಿ (photo zee news)

ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರ ಬಂಧನದ (Raj Kundra arrest) ನಂತರ ಕ್ರೈಂ ಬ್ರಾಂಚ್ ತಂಡ, ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಕುಂದ್ರಾ ನಿವಾಸದ ಮೇಲೆ ದಾಳಿ ನಡೆಸಿದೆ.  ಈ ವೇಳೆ  ಶಿಲ್ಪಾ ಶೆಟ್ಟಿ ಯನ್ನು (Shilpa Shetty) ಕೂಡಾ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಶಿಲ್ಪ ಅಧಿಕಾರಿಗಳ ಮುಂದೆ, ಹಲವು ಬಾರಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.  

ವಿಚಾರಣೆ ವೇಳೆ ಶಿಲ್ಪಾ ಕಣ್ಣೀರು : 
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಇಡೀ ವಿಚಾರಣೆಯ ವೇಳೆ, ಶಿಲ್ಪಾ ಶೆಟ್ಟಿ  3 ರಿಂದ 4 ಬಾರಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ, ರಾಜ್ ಕುಂದ್ರ (Raj Kundra) ಇಂಥಹ ಕೆಲಸ ಮಾಡಿದ್ದಾರೆಯೇ ಎಂದು  ಕ್ರೈಂ ಬ್ರಾಂಚ್ ಅಧಿಕಾರಿಗಳನ್ನೇ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ : ರಾಜ್ ಕುಂದ್ರ ಬಂಧನದ ಬಗ್ಗೆ ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ

ಕೈ ತಪ್ಪಿದ ಪ್ರಾಜೆಕ್ಟ್ ಗಳು : 
ಅಲ್ಲದೆ, ಇಡೀ ಪ್ರಕರಣದಿಂದಾಗಿ ತನ್ನ ಇಮೇಜ್ ಗೆ ಧಕ್ಕೆಯುಂಟಾಗಿದೆ ಎಂದು,  ಶಿಲ್ಪಾ ಶೆಟ್ಟಿ (Shilpa Shetty) ಅಪರಾಧ ವಿಭಾಗದ ಅಧಿಕಾರಿಗಳಿಗೆ ಹೇಳಿದ್ದಾರೆ. ಅಲ್ಲದೆ, ಅನೇಕ ಬ್ರಾಂಡ್‌ಗಳು ಮತ್ತು ಕಾಂಟ್ರಾಕ್ಟ್ ಗಳು ಕೈ ತಪ್ಪಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.  

ಮುಖಾಮುಖಿಯಾದ ಶಿಲ್ಪಾ ಮತ್ತು ರಾಜ್ :
ಈ ವಿಚಾರಣೆಯ ಸಮಯದಲ್ಲಿ, ಅಪರಾಧ ವಿಭಾಗವು ವಿಯಾನ್ ಇಂಡಸ್ಟ್ರೀಸ್ ನಲ್ಲಿನ ಪಾಲುದಾರಿಕೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಸಂದರ್ಭದಲ್ಲಿ ರಾಜ್ ಕುಂದ್ರಾ (Raj Kundra arrest) ಮತ್ತು ಶಿಲ್ಪಾ ಶೆಟ್ಟಿ ಅವರನ್ನು 2 ರಿಂದ 3 ಬಾರಿ ಮುಖಾಮುಖಿಯಾಗಿ ವಿಚಾರಣೆಗೆ ಒಳಪಡಿಸಲಾಯಿತು. 

ಇದನ್ನೂ ಓದಿ : Pornography Video Case: Raj Kundra ಕರೆದುಕೊಂಡು Shilpa Shetty ನಿವಾಸಕ್ಕೆ ತಲುಪಿದ Crime Branch ತಂಡ, ನೇರಾ-ನೇರ ವಿಚಾರಣೆ ಸಾಧ್ಯತೆ

ಶಿಲ್ಪಾ ಮುಂದೆ ಅಧಿಕಾರಿಗಳ ಪ್ರಶ್ನೆ : 
- ಹಾಟ್‌ಶಾಟ್ (Hotshot) ಬಗ್ಗೆ ನಿಮಗೆ ತಿಳಿದಿದೆಯೇ, ಅದನ್ನು ಯಾರು ನಡೆಸುತ್ತಾರೆ?
- ಹಾಟ್‌ಶಾಟ್‌ನ ವೀಡಿಯೊ ಕಂಟೆಂಟ್ ಬಗ್ಗೆ ನಿಮಗೆ ಏನು ಗೊತ್ತು?
- ನೀವು ಎಂದಾದರೂ ಹಾಟ್‌ಶಾಟ್‌ನ ಕೆಲಸದಲ್ಲಿ ಭಾಗಿಯಾಗಿದ್ದೀರಾ?
-ಹಾಟ್‌ಶಾಟ್ ಬಗ್ಗೆ ನೀವು ಎಂದಾದರೂ ಪ್ರದೀಪ್ ಬಕ್ಷಿ (Pradeep Bakshi) ಜೊತೆ ಸಂಭಾಷಣೆ ನಡೆಸಿದ್ದೀರಾ?
- 2020 ರಲ್ಲಿ ವಿಯಾನ್ ಕಂಪನಿಯಿಂದ ಹೊರ ಬಂದಿದ್ದೇಕೆ? 
- ವಿಯಾನ್ ಮತ್ತು ಕೈಮರಿನ್ ನಡುವಿನ ಹಣದ ವ್ಯವಹಾರದ ಬಗ್ಗೆ ನಿಮಗೆ ತಿಳಿದಿದೆಯೇ?
- ಅಶ್ಲೀಲ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ವಿಯಾನ್ ಕಚೇರಿಯನ್ನು ಹಲವು ಬಾರಿ ಬಳಸಲಾಗಿದೆ. ಈ ಬಗ್ಗೆ ನಿಮಗೆ ಮೈತಿ ಇದೆಯೇ? 
- ರಾಜ್ ಕುಂದ್ರಾ ಅವರ ಎಲ್ಲಾ ವ್ಯವಹಾರಗಳ ಬಗ್ಗೆ ನಿಮಗೆ ತಿಳಿದಿದೆಯೇ?  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News