Online ನಲ್ಲಿ ಈ ಖರೀದಿ ಶಾರುಖ್'ಗೆ Comfortable ಇಲ್ವಂತೆ!

ಅಮೆಜಾನ್ ಜಾಗತಿಕ ಸಿಇಒ ಜೆಫ್ ಬೆಜೋಸ್ ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಶಾರುಖ್ ಖಾನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಿದ್ದೆ ಮಾಡುವುದರಿಂದ ಸಮಯ ವ್ಯರ್ಥ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿಯೇ ನಾನು ಹೆಚ್ಚು ನಿದ್ರೆ ಮಾಡುವುದನ್ನು ಇಷ್ಟಪಡುವುದಿಲ್ಲ ಎಂದು ಅವರು ಹಂಚಿಕೊಂಡಿದ್ದಾರೆ.

Last Updated : Jan 17, 2020, 02:00 PM IST
Online ನಲ್ಲಿ ಈ ಖರೀದಿ ಶಾರುಖ್'ಗೆ Comfortable ಇಲ್ವಂತೆ!   title=

ಮುಂಬೈ: ಇದು ಆನ್‌ಲೈನ್‌(Online) ಯುಗ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಾವು ಕೂತಲ್ಲಿಯೇ ತಮಗೆ ಬೇಕಾದ್ದನ್ನು ಆನ್‌ಲೈನ್‌ನಲ್ಲಿ ಖರೀದಿಸುತ್ತಾರೆ. ಆದರೆ ನಮ್ಮ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಆನ್‌ಲೈನ್‌ ಖರೀದಿ ಹಿತಕರ(Comfortable) ಆಗಿರುವುದಿಲ್ಲವಂತೆ. ಹೌದು, ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ತಮ್ಮ ಒಳ ಉಡುಪುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ಹಿತಕರವಾಗಿರುವುದಿಲ್ಲ ಎಂದು ಹೇಳಿದ್ದಾರೆ.

"ನಾನು ನನ್ನ ಸ್ವಂತ ಬ್ರಾಂಡ್‌ಗಳನ್ನು ಪ್ಲಗ್ ಮಾಡಲು ಹೋಗುತ್ತೇನೆ. ನನ್ನ ಎಲ್ಲಾ ಪುಸ್ತಕ ಶಾಪಿಂಗ್ ಅನ್ನು ನಾನು ಅಮೆಜಾನ್‌ನಲ್ಲಿ ಮಾಡುತ್ತೇನೆ. ನನ್ನ ದಿನಸಿಗಳು ಬಿಗ್ ಬಾಸ್ಕೆಟ್‌ನಿಂದ ಬರುತ್ತವೆ. ಆದರೆ ಈ ಬಗ್ಗೆ ನಾನು ತಪ್ಪೊಪ್ಪಿಗೆಯನ್ನು ಹೊಂದಿದ್ದೇನೆ ... ಆನ್‌ಲೈನ್ ಒಳ ಉಡುಪುಗಳನ್ನು ಶಾಪಿಂಗ್ ಮಾಡಲು ನಾನು ಇನ್ನೂ ಆರಾಮದಾಯಕನಾಗಿಲ್ಲ.. ಇದು ಹುಡುಗನ ವಿಷಯ(It is a boy thing), " ಎಂದು ಶಾರುಖ್ ಹೇಳಿದರು.

ಅಮೆಜಾನ್ ಜಾಗತಿಕ ಸಿಇಒ ಜೆಫ್ ಬೆಜೋಸ್(Jeff Bezos) ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಎಸ್‌ಆರ್‌ಕೆ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ನಿದ್ದೆ ಮಾಡುವುದರಿಂದ ಸಮಯ ವ್ಯರ್ಥ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿಯೇ ನಾನು ಹೆಚ್ಚು ನಿದ್ರೆ ಮಾಡುವುದನ್ನು ಇಷ್ಟಪಡುವುದಿಲ್ಲ ಎಂದೂ ಸಹ ಶಾರುಖ್ ಅವರ ಬಗೆಗಿನ ಮಾಹಿತಿಯನ್ನು ಹಂಚಿಕೊಂಡಿದ್ದು, "It's a waste of life," ಎಂದು ಅದನ್ನು ಪ್ರತಿಪಾದಿಸಿದ್ದಾರೆ.

ಅವರ ಜೀವನದಲ್ಲಿ ಪ್ರಭಾವಶಾಲಿ ಪಾತ್ರವಹಿಸಿದ ಮಹಿಳೆಯರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟ: "ನಾಲ್ಕು ಜನರಿದ್ದಾರೆ .. ನನ್ನ ತಾಯಿ, ನನ್ನ ಸಹೋದರಿ, ನನ್ನ ಹೆಂಡತಿ ಮತ್ತು ನನ್ನ ಮಗಳು" ಎಂದು ಹೇಳಿದರು.

Trending News