ಶುಬ್ಮನ್ ಗಿಲ್ ಪ್ರೇಮ್ ಕಹಾನಿ: ಸಾರಾಳಿಂದ ಸಾರಾ ಅಲಿಖಾನ್ ವರೆಗೆ...

 ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಈಗ ಈ ಇಬ್ಬರು ಜೋಡಿಗಳು ಡೇಟಿಂಗ್ ಮಾಡುತ್ತಿದ್ದಾರಾ ಎನ್ನುವ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿವೆ.

Written by - Zee Kannada News Desk | Last Updated : Aug 30, 2022, 06:38 PM IST
  • ಕಾಫಿ ವಿತ್ ಕರಣ್‌ನ ಪ್ರಸ್ತುತ ಸೀಸನ್‌ನಲ್ಲಿ ಸಾರಾ ಅಲಿ ಖಾನ್ ಅವರನ್ನು "ನೀವು ಇಂದು ಡೇಟ್ ಮಾಡಲು ಬಯಸುತ್ತಿರುವ ಹುಡುಗನ ಹೆಸರು" ಎಂದು ಕೇಳಲಾಯಿತು.
  • ಮೊದಮೊದಲು ತಡಬಡಾಯಿಸಿದ ನಟಿ ಸಾರಾ ನಂತರ ವಿಜಯ ದೇವರಕೊಂಡ ಎಂದು ಹೇಳಿದರು.
ಶುಬ್ಮನ್ ಗಿಲ್  ಪ್ರೇಮ್ ಕಹಾನಿ: ಸಾರಾಳಿಂದ ಸಾರಾ ಅಲಿಖಾನ್ ವರೆಗೆ... title=
file photo

ನವದೆಹಲಿ: ನಟಿ ಸಾರಾ ಅಲಿ ಖಾನ್ ಮತ್ತು ಕ್ರಿಕೆಟಿಗ ಶುಬ್ಮನ್ ಗಿಲ್ ಇಬ್ಬರು ರೆಸ್ಟೋರೆಂಟ್ ನಲ್ಲಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಈಗ ಈ ಇಬ್ಬರು ಜೋಡಿಗಳು ಡೇಟಿಂಗ್ ಮಾಡುತ್ತಿದ್ದಾರಾ? ಎನ್ನುವ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿವೆ.

ಈ ಹಿಂದೆ ಶುಭಂ ಗಿಲ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಏತನ್ಮಧ್ಯೆ, ಸಾರಾ ಅಲಿ ಖಾನ್ ಈ ಹಿಂದೆ ಲವ್ ಆಜ್ ಕಲ್ ಸಹನಟ ಕಾರ್ತಿಕ್ ಆರ್ಯನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳೂ ಇವೆ. 2018 ರಲ್ಲಿ, ಕರಣ್ ಜೋಹರ್ ಅವರ ಕಾರ್ಯಕ್ರಮ ಕಾಫಿ ವಿತ್ ಕರಣ್ 6 ನಲ್ಲಿ ಅವರು ಕಾರ್ತಿಕ್ ಆರ್ಯನ್ ಮೇಲೆ ಕ್ರಷ್ ಹೊಂದಿದ್ದರು ಎಂದು ಒಪ್ಪಿಕೊಂಡರು.

 
 
 
 

 
 
 
 
 
 
 
 
 
 
 

A post shared by Bolly Hollie (@bolly_hollix)

ಇದನ್ನೂ ಓದಿ: ಮಗುವಿಗೆ ಅಪ್ಪು ಹೆಸರಿಡಲು ದೊಡ್ಮನೆಗೆ ಕೋರಿದ ಅಭಿಮಾನಿ

ಕಾಫಿ ವಿತ್ ಕರಣ್‌ನ ಪ್ರಸ್ತುತ ಸೀಸನ್‌ನಲ್ಲಿ ಸಾರಾ ಅಲಿ ಖಾನ್ ಅವರನ್ನು "ನೀವು ಇಂದು ಡೇಟ್ ಮಾಡಲು ಬಯಸುತ್ತಿರುವ ಹುಡುಗನ ಹೆಸರು" ಎಂದು ಕೇಳಲಾಯಿತು. ಮೊದಮೊದಲು ತಡಬಡಾಯಿಸಿದ ನಟಿ ಸಾರಾ ನಂತರ ವಿಜಯ ದೇವರಕೊಂಡ ಎಂದು ಹೇಳಿದರು.

2018 ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸಾರಾ, ಸುಶಾಂತ್ ಸಿಂಗ್ ರಾಜಪೂತ ಅಭಿನಯಿಸಿರುವ ಕೇದಾರನಾಥ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.ಸಾರಾ ಕೊನೆಯದಾಗಿ ಅಕ್ಷಯ್ ಕುಮಾರ್ ಮತ್ತು ಧನುಷ್ ಜೊತೆ ನಟಿಸಿದ ಅತ್ರಾಂಗಿ ರೇ ಚಿತ್ರದಲ್ಲಿ ಕಾಣಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

Trending News