Sapthami Gowda: ಟಾಲಿವುಡ್‌ನತ್ತ ಕಾಂತಾರ ಸುಂದರಿ: ಮೊದಲ ಚಿತ್ರಕ್ಕಾಗಿ ಸಪ್ತಮಿ ಮಾಡಿಕೊಂಡ ತಯಾರಿಗಳೇನು ಗೊತ್ತೇ?

Sapthami Gowda In Tollywood: ಚಂದನವನದ ನಟಿ ಸಪ್ತಮಿ ಗೌಡ ಸ್ಯಾಂಡಲ್‌ವುಡ್‌, ಬಾಲಿವುಡ್‌ ಸಿನಿಮಾಗಳಲ್ಲಿ ಅಭಿನಯಿಸದ ನಂತರ ಟಾಲಿವುಡ್‌ನ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಹಾಗಿದ್ರೇ ಈ ನಟಿ ಏನೆಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಯೋಣ.  

Written by - Zee Kannada News Desk | Last Updated : Apr 15, 2024, 10:47 AM IST
  • ಮೂರು ಕನ್ನಡ ಚಿತ್ರಗಳಲ್ಲಿ ನಟಿಸಿರುವರು, ಇದೀಗ ಟಾಲಿವುಡ್‌ ಕಡೆದೆ ಪ್ರವಾಸ ಕೈಗೊಂಡಿದ್ದಾರೆ. ಮೊದಲ ತೆಲುಗು ಚಿತ್ರವನ್ನ ಒಪ್ಪಿಕೊಂಡಿದ್ದಾರೆ.
  • ಸಪ್ತಮಿ ಗೌಡ ಈ ಸುದ್ದಿಯ ಮೇಲೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ನಟಿ ತಮ್ಮ ಪಾತ್ರದ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ರಿವೀಲ್‌ ಮಾಡಿದ್ದಾರೆ.
  • ಟಾಲಿವುಡ್‌ ನಟ ನಿತಿನ್‌ ಹಾಗೂ ಸಪ್ತಮಿ ಗೌಡ ಅಭಿನಯದ ತಮ್ಮುಡು ಸಿನಿಮಾಗೆ ವಕೀಲ್ ಸಾಬ್ ಚಿತ್ರದ ನಿರ್ದೇಶಕರಾದ ವೇಣು ಶ್ರೀರಾಮ್ ಆಕ್ಷನ್‌ ಕಟ್‌ ಹೇಳಲಿದ್ದಾರೆ.
Sapthami Gowda: ಟಾಲಿವುಡ್‌ನತ್ತ ಕಾಂತಾರ ಸುಂದರಿ: ಮೊದಲ ಚಿತ್ರಕ್ಕಾಗಿ ಸಪ್ತಮಿ ಮಾಡಿಕೊಂಡ ತಯಾರಿಗಳೇನು ಗೊತ್ತೇ? title=

Sapthami Gowda Preparation For Telugu Film: ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಡಾಲಿ ಧನಂಜಯ್‌ ಅಭಿನಯದ ಪಾಪ್‌ ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಫಣೆ ಮಾಡಿದರು. ತದನಂತರ ಕಾಂತಾರ ಚಿತ್ರದ ಮೂಲಕ ಖ್ಯಾತಿ ಪಡೆದ ನಟಿ, ಕಳೆದತಿಂಗಳು ತೆರೆಕಂಡ ಯುವ ಸಿನಿಮಾದಲ್ಲಿಯೂ ನಾಯಕಿಯಾಗಿ ಮಿಂಚಿದ್ದಾರೆ. ಹೀಗೆ ಮೂರು ಕನ್ನಡ ಚಿತ್ರಗಳಲ್ಲಿ ನಟಿಸಿರುವರು, ಇದೀಗ  ಟಾಲಿವುಡ್‌ ಕಡೆದೆ ಪ್ರವಾಸ ಕೈಗೊಂಡಿದ್ದಾರೆ. ಮೊದಲ ತೆಲುಗು ಚಿತ್ರವನ್ನ ಒಪ್ಪಿಕೊಂಡಿದ್ದಾರೆ. 

ಹೌದು.. ನಟಿ ಸಪ್ತಮಿ ಗೌಡ ತೆಲುಗು ಚಿತ್ರರಂಗಕ್ಕೆ ಹೆಜ್ಜೆ ಹಾಕುತ್ತಿದ್ದಾರೆಂಬ ಕಳೆದ ವರ್ಷಾಂತ್ಯದಿಂದಲೇ ಕೇಳಿ ಬರುತ್ತಿದ್ದು. ಈ ನಟಿ ಜಯಂ ಚಿತ್ರದ ಹೀರೋ ನಿತಿನ್‌ ನಟನೆಯ  ತಮ್ಮುಡು ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆಂಬ ವಿಷಯ  ಜಗಜ್ಜಾಹೀರಾತು ಆಗಿತ್ತು. ಆದರೆ ಇದೀಗ ನಟಿ ಸಪ್ತಮಿ ಗೌಡ ಈ ಸುದ್ದಿಯ ಮೇಲೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ನಟಿ ತಮ್ಮ ಪಾತ್ರದ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ರಿವೀಲ್‌ ಮಾಡಿದ್ದಾರೆ.

ಇದನ್ನೂ ಓದಿ: ಶೂಟಿಂಗ್‌ ಮುಗಿಸಿದ ʼಸೇನಾಪತಿʼ..! ಜೂನ್‌ನಲ್ಲಿ ತೆರೆಗೆ ಬರಲಿದೆ ಕಮಲ್ ಹಾಸನ್ ʼಇಂಡಿಯನ್-2ʼ

ನಟಿ ಸಪ್ತಮಿ ಗೌಡ  ತಮ್ಮುಡು ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುವುದಕ್ಕಾಗಿ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ, ಈ ಸಿನಿಮಾಗಾಗಿ ಈ ನಟಿ ತೂಕವನ್ನು ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ. ಇಷ್ಟುಮಾತ್ರವಲ್ಲದೆ ಈ ನಟಿ  ರೇಸ್‌ ಕೋರ್ಸ್ ಮೈದಾನದಲ್ಲಿನ ಜಾಕಿಗಳಿಗೂ ಸೆಡ್ಡು ಹೊಡೆಯುವಂತೆ ಕುದುರೆ ಸವಾರಿಯನ್ನು ಕಲಿತಿದ್ದಾರೆ. ಸಪ್ತಮಿ ಗೌಡ ತೆಲಗು ಸಿನಿರಂಗದಲ್ಲಿ ತಮ್ಮ ಮೊದಲ ಚಿತ್ರದಲ್ಲಿಯೇ ನಿತಿನ್ ಅಂತಹ ಪ್ರತಿಭಾವಂತ ನಟನ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳುತತಿರುಯವುದರ ಬಗ್ಗೆ ಸಿಕ್ಕಾಪಟ್ಟೆ ಖುಷಿ ಇದೆ ಎಂದಿದ್ದಾರೆ.

ಟಾಲಿವುಡ್‌ ನಟ ನಿತಿನ್‌ ಹಾಗೂ ಸಪ್ತಮಿ ಗೌಡ ಅಭಿನಯದ ತಮ್ಮುಡು ಸಿನಿಮಾಗೆ ವಕೀಲ್ ಸಾಬ್ ಚಿತ್ರದ ನಿರ್ದೇಶಕರಾದ ವೇಣು ಶ್ರೀರಾಮ್ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಈ ಸಿನಿಮಾವನ್ನು ಟಾಲಿವುಡ್‌ನ ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ನಟಿ ಸಪ್ತಮಿ ಗೌಡ ಈ ಎಲ್ಲಾ ಕಾರಣಗಳಿಂದ ತಮ್ಮುಡು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ಕನ್ನಡಿಗರ ಮನಗೆದ್ದ ನಟಿ, ಇದೀಗ ಬಾಲಿವುಡ್‌ ಬಳಿಕ ಟಾಲಿವುಡ್‌ ಕಡೆ ಹೊರಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News