ನನಗೂ ಕೆಟ್ಟ ಮೆಸೇಜ್‌ಗಳು ಬಂದಿವೆ.. ಕಾನೂನಿನ ಮೇಲೆ ಜನರ ಭರವಸೆ ಉಳಿಸುತ್ತಾರೆ ಅಂತ ನಂಬಿದ್ದೇನೆ: ನಟಿ ರಮ್ಯಾ ಪೋಸ್ಟ್‌ ವೈರಲ್‌

Darshan Arrest in Renukaswamy Murder Case: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಈಗ ಇದು ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಅದರಲ್ಲೂ ಕನ್ನಡ ಇಂಡಸ್ಟ್ರಿಯಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. 

Written by - Chetana Devarmani | Last Updated : Jun 14, 2024, 10:07 AM IST
  • ಕೊಲೆ ಪ್ರಕರಣದಲ್ಲಿ ದರ್ಶನ್‌ ಅರೆಸ್ಟ್‌
  • ದರ್ಶನ್‌ ಬಂಧನದ ಬಗ್ಗೆ ರಮ್ಯಾ ಪೋಸ್ಟ್‌!?
  • ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆದ ದರ್ಶನ್‌
ನನಗೂ ಕೆಟ್ಟ ಮೆಸೇಜ್‌ಗಳು ಬಂದಿವೆ.. ಕಾನೂನಿನ ಮೇಲೆ ಜನರ ಭರವಸೆ ಉಳಿಸುತ್ತಾರೆ ಅಂತ ನಂಬಿದ್ದೇನೆ: ನಟಿ ರಮ್ಯಾ ಪೋಸ್ಟ್‌ ವೈರಲ್‌ title=

Ramya On Darshan Arrest: ಸ್ಯಾಂಡಲ್‌ವುಡ್‌ನ ಸ್ಟಾರ್‌ ಹೀರೋ ದರ್ಶನ್‌ ಈ ಹಿಂದೆಯೂ ಹಲವು ವಿವಾದಗಳಲ್ಲಿ ಸಿಲುಕಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಈಗ ಇದು ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಅದರಲ್ಲೂ ಕನ್ನಡ ಇಂಡಸ್ಟ್ರಿಯಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ದರ್ಶನ್ ಅವರನ್ನು ಸಿನಿಮಾದಿಂದ ಬ್ಯಾನ್ ಮಾಡುವಂತೆ ಕೆಲವರು ಒತ್ತಾಯಿಸುತ್ತಿದ್ದಾರೆ. 

ಈ ಮಧ್ಯೆ ನಟಿ ರಮ್ಯಾ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್‌ ಹಾಕಿದ್ದು, ಖಾಕಿ ಖದರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಮ್ಯಾ ಪರೋಕ್ಷವಾಗಿ ಕೊಲೆಯನ್ನು ಖಂಡಿಸಿದ್ದು, ಶಿಕ್ಷೆಯಾಗಲೇ ಬೇಕು ಎಂದು ಒತ್ತಾಯಿಸಿದಂತೆ ಪೋಸ್ಟ್‌ ಮಾಡಿದ್ದಾರೆ. ಇಂತಹ ಅಶ್ಲೀಲ ಸಂದೇಶಗಳಿಂದ ನನಗೂ ತೊಂದರೆಯಾಗಿದೆ ಎಂದಿದ್ದಾರೆ ನಟಿ ರಮ್ಯಾ.

ಇದನ್ನೂ ಓದಿ: ಎಣ್ಣೆ ಹೊಡೆದ್ರೆ ದರ್ಶನ್ ಆಗ್ತಾರಂತೆ ʼಡೆವಿಲ್‌ʼ..! ಸಿಕ್ಕಸಿಕ್ಕವರಿಗೆ ಬಾರಿಸುತ್ತಾನಂತೆ ʼದಾಸʼ

ನಾನು ಸಹ ಅಶ್ಲೀಲ ಸಂದೇಶಗಳು ಮತ್ತು ಟ್ರೋಲ್‌ಗಳಿಗೆ ಒಳಗಾಗಿದ್ದೇನೆ. ಬ್ಲಾಕ್‌ ಮಾಡುವ ಆಯ್ಕೆ ಇದೆ. ಅದನ್ನೂ ಮೀರಿ ಹೆಚ್ಚು ಟ್ರೋಲ್‌ಗಳಾದರೆ ದೂರು ನೀಡಬಹುದು. ನನ್ನನ್ನೂ ಕೆಟ್ಟ ಪದಗಳಿಂದ ಟ್ರೋಲ್ ಮಾಡಲಾಯಿತು. ನನಗಷ್ಟೇ ಅಲ್ಲ ಅನೇಕರು ಟ್ರೋಲ್‌ಗೆ ಒಳಗಾಗಿದ್ದಾರೆ. ಬೇರೆಯವರ ಹೆಂಡತಿ ಮಕ್ಕಳನ್ನು ಟ್ರೋಲ್ ಮಾಡುವವರು ಬಹಳ ಮಂದಿ ಇದ್ದಾರೆ. ನಾವು ಕೆಟ್ಟ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಬರೆದಿದ್ದಾರೆ. 

ಪ್ರತಿಯೊಬ್ಬ ಕಾನೂನು ಪಾಲಿಸುವ ನಾಗರಿಕರಂತೆ ನಾನು ದೂರು ದಾಖಲಿಸಿದ್ದೇನೆ. ಪೊಲೀಸರು ಅಂತಹವರಿಗೆ ಎಚ್ಚರಿಕೆ ನೀಡಿದ್ದರಿಂದ ಪ್ರಕರಣವನ್ನು ಹಿಂಪಡೆಯಲಾಗಿದೆ. ಟ್ರೋಲ್‌ಗಳನ್ನು ಮಾಡುವವರಿಗೂ ಭವಿಷ್ಯವಿದೆ. ಕೆಲವರು ನಕಲಿ ಖಾತೆಗಳ ಮೂಲಕ ಟ್ರೋಲ್ ಮಾಡಿ ತಮ್ಮ ಜೀವನವನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ರಮ್ಯಾ ಬರೆದಿದ್ದಾರೆ.

ಯಾರೂ ಕಾನೂನಿಗಿಂತ ಮೇಲಲ್ಲ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ. ಜನರನ್ನು ಹೊಡೆದು ಸಾಯಿಸಬೇಡಿ. ಒಂದು ಸರಳ ದೂರು ಸಾಕು. ಪೊಲೀಸರ ಮೇಲೆ ನನಗೆ ನಂಬಿಕೆ ಇದೆ. ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯುವುದಿಲ್ಲ. ಕಾನೂನಿನ ಮೇಲೆ ಜನರ ಭರವಸೆಯನ್ನು ಉಳಿಸುತ್ತಾರೆ ಎಂದು ನಂಬುತ್ತೇನೆ ಎಂದು ರಮ್ಯಾ ತಮ್ಮ ಇನ್ ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದಿದ್ದಾರೆ.  

ಇದನ್ನೂ ಓದಿ: ಸೋದರ ಮಾವನನ್ನೇ ಬೀದಿಗಟ್ಟಿದ್ರಂತೆ ಡೆವಿಲ್ : ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಸಾಕ್ಷಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News