Sandalwood News : ಇನ್ನು ಫುಲ್ ಹೌಸ್ ಶೋ : ನಾಳೆ ಮೂರು ಚಿತ್ರಗಳು ರಿಲೀಸ್, ಫೆ.19ಕ್ಕೆ ಪೊಗರು ತೆರೆಗೆ

ಕರೋನಾ ನಿಯಮ ಬದಲಾಗಿದೆ. ರಾಜ್ಯದಲ್ಲಿ ಥಿಯೇಟರ್ ಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ

Written by - Ranjitha R K | Last Updated : Feb 4, 2021, 11:05 AM IST
  • ಕರೋನಾ ನಿಯಮ ಬದಲಾಗಿದೆ. ರಾಜ್ಯದಲ್ಲಿ ಥಿಯೇಟರ್ ಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ
  • ಫುಲ್ ಹೌಸ್ ಶೋಗೆ ಅನುಮತಿ ಸಿಗುತ್ತಿದ್ದಂತೆಯೇ ಶುಕ್ರವಾರ ಮೂರು ಚಿತ್ರಗಳು ತೆರೆ ಕಾಣಲಿವೆ.
  • ಫುಲ್ ಹೌಸ್ ಪ್ರದರ್ಶನಕ್ಕೆ ಅವಕಾಶವೇನೋ ಸಿಕ್ಕಿದೆ. ಜೊತೆಗೆ ಹಲವು ಷರತ್ತುಗಳನ್ನೂ ವಿಧಿಸಲಾಗಿದೆ
Sandalwood News : ಇನ್ನು ಫುಲ್ ಹೌಸ್ ಶೋ : ನಾಳೆ ಮೂರು ಚಿತ್ರಗಳು ರಿಲೀಸ್, ಫೆ.19ಕ್ಕೆ ಪೊಗರು ತೆರೆಗೆ title=
ಶುಕ್ರವಾರ ಮೂರು ಚಿತ್ರಗಳು ತೆರೆ ಕಾಣಲಿವೆ (file photo)

ಬೆಂಗಳೂರು : ಕರೋನಾ (Covid 19) ನಿಯಮ ಬದಲಾಗಿದೆ. ರಾಜ್ಯದಲ್ಲಿ ಥಿಯೇಟರ್ ಗಳಲ್ಲಿ (Theater) ಹೌಸ್ ಪುಲ್ ಪ್ರದರ್ಶನಕ್ಕೆ (Houseful show) ಅವಕಾಶ ನೀಡಲಾಗಿದೆ. ಹಾಗಾಗಿ ಇಂಡಸ್ಟ್ರಿಯಲ್ಲಿ ಹೊಸ ಉತ್ಸಾಹ ಸೃಷ್ಟಿಯಾಗಿದೆ. ಫುಲ್ ಹೌಸ್ ಶೋಗೆ ಅನುಮತಿ ಸಿಗುತ್ತಿದ್ದಂತೆಯೇ ಶುಕ್ರವಾರ ಮೂರು ಚಿತ್ರಗಳು ತೆರೆ ಕಾಣಲಿವೆ. 

ಇನ್ಸ್ ಪೆಕ್ಟರ್ ವಿಕ್ರಮ್ (Inspector Vikram), ಶ್ಯಾಡೋ (Shadow), ಮಂಗಳವಾರ ರಜಾದಿನ (Mangalawara Rajadina) -  ಈ ಮೂರು ಚಿತ್ರಗಳು ನಾಳೆ ತೆರೆಕಾಣಲಿವೆ. ಪ್ರಜ್ವಲ್ ದೇವರಾಜ್ (Prajwal Devraj) ನಟನೆಯ ಮಹತ್ವಾಕಾಂಕ್ಷೆಯ ಚಿತ್ರ  ಇನ್ಸ್ ಪೆಕ್ಟರ್ ವಿಕ್ರಮ್.  ಶ್ಯಾಡೋ ಚಿತ್ರದಲ್ಲಿ ನಟಿಸಿದ್ದಾರೆ ವಿನೋದ್ ಪ್ರಭಾಕರ್ (Vinod Prabhakar). ಬಿಗ್ ಬಾಸ್ ಕನ್ನಡ (Bigboss Kannada) ಖ್ಯಾತಿಯ ನಟ ಚಂದನ್ ಆಚಾರ್ ನಾಯಕರಾಗಿ ಅಭಿನಯಿಸಿರುವ ಚಿತ್ರ ಮಂಗಳವಾರ ರಜಾ ದಿನ.  

ಇದನ್ನೂ ಓದಿ : ರಾಜ್ಯ ಸರ್ಕಾರದ ವಿರುದ್ದ ನಟ Dhruva Sarja ಗರಂ

ಫೆ.19ಕ್ಕೆ ಬರಲಿದೆ ಪೊಗರು :
ಸಾಲು ಸಾಲು ಚಿತ್ರಗಳು (Cinema) ಇನ್ನೇನು ಬಿಡುಗಡೆಯಾಗಲಿದೆ. ಈ ನಡುವೆ ದ್ರುವ ಸರ್ಜಾ (Dhruva Sarja) ಮತ್ತು ರಷ್ಮಿಕಾ (Rashmika Mandanna) ಅಭಿನಯದ ಪೊಗರು (Pogaru) ಫೆ. 19ರಂದು ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಟೀಸರ್ ಧೂಳೆಬ್ಬಿಸಿದ್ದು, ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಪೊಗರು ತಮಿಳು ಹಾಗೂ ತೆಲುಗು ಭಾಷೆಗಳಲ್ಲೂ ಬರಲಿದೆ. 

ಕರೋನಾ ಮಾರ್ಗದರ್ಶಿ ಸೂತ್ರ ಪಾಲನೆ ಕಡ್ಡಾಯ : 
ಫುಲ್ ಹೌಸ್ ಪ್ರದರ್ಶನಕ್ಕೆ ಅವಕಾಶವೇನೋ ಸಿಕ್ಕಿದೆ. ಜೊತೆಗೆ ಹಲವು ಷರತ್ತುಗಳನ್ನೂ ವಿಧಿಸಲಾಗಿದೆ.  ಥಿಯೇಟರಿಗೆ ಹೋಗುವುದಾದರೆ ಫೇಸ್ ಮಾಸ್ಕ್ (mask) ಕಡ್ಡಾಯ. ಸಾಮಾಜಿಕಅಂತರ (Social Distance)ಕಾಯ್ದುಕೊಳ್ಳಬೇಕು. ಥಿಯೇಟರ್, ಮಲ್ಟಿಫ್ಲೆಕ್ಸ್ ಗಳಲ್ಲಿ (Multiflex) ಸಾನಿಟೈಸರ್ (Sanitizer) ಕಡ್ಡಾಯ. ಆರೋಗ್ಯ ಸೇತು ಆಪ್ ಬಳಸಬೇಕು. ಥಿಯೇಟರ್ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ಯಾನರ್ ಕಡ್ಡಾಯ.  ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಥಿಯೇಟರ್ ಒಳಗೆ ಸ್ಟಿಕರ್ ಅಳವಡಿಸಬೇಕು. ಹೆಚ್ಚು ಹೆಚ್ಚು ಆನ್ ಲೈನ್ ಬುಕ್ಕಿಂಗ್ ಮಾಡಬೇಕು ಎಂಬ ನಿರ್ದೇಶನಗಳನ್ನು ಥಿಯೇಟರ್ ಮಾಲೀಕರಿಗೆ ನೀಡಲಾಗಿದೆ.

ಇದನ್ನೂ ಓದಿ : Video: ನಿಶ್ಚಿತಾರ್ಥ ಮಾಡಿಕೊಂಡ 'ಕನ್ನಡ ಕೋಗಿಲೆ'ಯ ಅಖಿಲಾ ಪಜಿಮಣ್ಣು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News