ಕಿರುತೆರೆಗೆ ಎಂಟ್ರಿ ಕೊಟ್ಟ ಖ್ಯಾತ ನಟಿ.. ʻಮೈನಾʼದಲ್ಲಿ ಚಿತ್ರತಾರೆ ಭವ್ಯಾ!

Actress Bhavya: ಖಾಸಗಿ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ʻಮೈನಾʼ ಧಾರಾವಾಹಿಯಲ್ಲಿ ೯೦ರ ದಶಕದ ಬಹುಬೇಡಿಕೆಯ ನಾಯಕಿ, ಚಿತ್ರತಾರೆ ಭವ್ಯಾ ನಟಿಸುತ್ತಿದ್ದಾರೆ. 

Written by - Savita M B | Last Updated : Mar 26, 2024, 03:04 PM IST
  • ದಿಗ್ಗಜ ಕಲಾವಿದರ ಜೊತೆ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಭವ್ಯಾ
  • ಟಿವಿ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಇದೇ ಮೊದಲು.
 ಕಿರುತೆರೆಗೆ ಎಂಟ್ರಿ ಕೊಟ್ಟ ಖ್ಯಾತ ನಟಿ.. ʻಮೈನಾʼದಲ್ಲಿ ಚಿತ್ರತಾರೆ ಭವ್ಯಾ! title=

Mynaa Serial: ಪ್ರೇಮಪರ್ವ, ಪ್ರಳಯಾಂತಕ, ನೀ ಬರೆದ ಕಾದಂಬರಿ, ಕೃಷ್ಣ ನೀ ಬೇಗನೆ ಬಾರೋ, ಕರುಣಾಮಯಿ, ಹೃದಯಗೀತೆ, ಮತ್ತೆ ಹಾಡಿತು ಕೋಗಿಲೆ, ಹೃದಯ ಹಾಡಿತು‌, ಸಾಂಗ್ಲಿಯಾನ ಇತ್ಯಾದಿ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ವಿಷ್ಣುವರ್ಧನ್‌, ಶಂಕರನಾಗ್‌, ಅಂಬರೀಶ್‌, ರವಿಚಂದ್ರನ್ ಮತ್ತಿತರ ದಿಗ್ಗಜ ಕಲಾವಿದರ ಜೊತೆ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಭವ್ಯಾ, ಟಿವಿ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಇದೇ ಮೊದಲು. 

ಇದನ್ನೂ ಓದಿ-Bollywood: ಅನುಷ್ಕಾ ಶರ್ಮಾ ಸೇರಿದಂತೆ ಕ್ರಿಕೆಟಿಗರನ್ನು ಮದುವೆಯಾದ ಬಾಲಿವುಡ್ ನಟಿಯರಿವರು!!

ಭವ್ಯಾ ಅವರದು ʻಮೈನಾʼ ಧಾರಾವಾಹಿಯಲ್ಲಿ ಮಹಿಳಾ ಹಾಸ್ಟೆಲ್‌ ಮುಖ್ಯಸ್ಥೆ ಅರುಂಧತಿಯ ಪಾತ್ರ. ಕಟ್ಟುನಿಟ್ಟಾದರೂ ತಾಯಿ ಹೃದಯಿ. ಊರು ಬಿಟ್ಟು ಪರವೂರಿಗೆ ಬಂದಿರುವ ಹೆಣ್ಣುಮಕ್ಕಳೇ ಹೆಚ್ಚಿರುವ ಜಾಗದಲ್ಲಿ ಎಲ್ಲರನ್ನೂ ನಿಯಂತ್ರಿಸುತ್ತ ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸುತ್ತ ಎಲ್ಲರ ಭಾವನೆಗಳಿಗೂ ಬೆಲೆ ಕೊಡುವ ಅಪರೂಪದ ಪಾತ್ರ. ಮೈನಾ ಜೀವನದಲ್ಲಿ ಹಠಾತ್ತನೆ ಬರುವ ಅನಿರೀಕ್ಷಿತ ತಿರುವು ಕಂಗೆಡಿಸಿದಾಗ ಅವಳಿಗೆ ಆಸರೆಯಾಗಿ ನಿಲ್ಲುತ್ತಾಳೆ ಅರುಂಧತಿ. ಹಾಗೆಯೇ ಇವರ ಮಹಿಳಾ ಹಾಸ್ಟೆಲ್‌ನಲ್ಲಿರುವ ಇತರ ನಾಲ್ಕು ಹೆಣ್ಣುಮಕ್ಕಳೂ ʻಮೈನಾʼ ಧಾರಾವಾಹಿಯ ಮಹತ್ವದ ಪಾತ್ರಗಳಾಗಿ ಬರುತ್ತಾರೆ. ಮಹಿಳಾ ಹಾಸ್ಟೆಲ್‌ ಈ ಧಾರಾವಾಹಿಯಲ್ಲಿ ಒಂದು ಬಹುಮುಖ್ಯ ಅಂಗವೇ ಆಗಿದೆ. 

ʻಮೈನಾʼ ಧಾರಾವಾಹಿ ಪ್ರತಿದಿನ(ಸೋಮವಾರದಿಂದ ಭಾನುವಾರ) ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

ಇದನ್ನೂ ಓದಿ-ಧಾರಾವಾಹಿಯ ಅಣ್ಣ-ತಂಗಿ.. ನಿಜಜೀವನದ ಗಂಡ-ಹೆಂಡ್ತಿ! ‘ಶ್ರೀರಸ್ತು ಶುಭಮಸ್ತು’ ಪೂರ್ಣಿ ರಿಯಲ್‌ ಲೈಫ್ ಪತಿ ಈ ನಟ !!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News