ಹೊಸ ಸಿನಿಮಾಗಳಿಗೆ ಸಹಿ ಹಾಕದ ಸಮಂತಾ..! ʼಶಾಕುಂತಲೆʼ ನಿರ್ಧಾರಕ್ಕೆ ಕಾರಣ ಇಲ್ಲಿದೆ..

Samantha Vijay Kushi film : ಸಮಂತಾ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕಾಡಿದೆ. ಏಕೆಂದರೆ ಇದೀಗ ಸ್ಯಾಮ್ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತಿಲ್ಲ. ಈಗಿನ ಸಿನಿಮಾಗಳು ಮುಗಿದ ನಂತರ ದೀರ್ಘ ವಿರಾಮ ತೆಗೆದುಕೊಳ್ಳಲು ಬಯಸಿದ್ದಾಳೆ. ಅದಕ್ಕೆ ಕಾರಣ..      

Written by - Krishna N K | Last Updated : Jul 5, 2023, 03:31 PM IST
  • ಬಹುಭಾಷಾ ನಟಿ ಸಮಂತಾ ಸಿನಿಮಾಗಳಿಂದ ದೂರ ಉಳಿಯಲು ಬಯಸುತ್ತಿದ್ದಾರೆ.
  • ಈಗಿನ ಸಿನಿಮಾಗಳು ಮುಗಿದ ನಂತರ ದೀರ್ಘ ವಿರಾಮ ತೆಗೆದುಕೊಳ್ಳಲಿದ್ದಾರೆ.
  • ಈ ಸುದ್ದಿ ಸ್ಯಾಮ್‌ ಅಭಿಮಾನಿಗಳಿಗೆ ಶಾಕ್‌ ನೀಡಿದ್ದು, ಕಾರಣ ಹುಡುಕುತ್ತಿದ್ದಾರೆ.
ಹೊಸ ಸಿನಿಮಾಗಳಿಗೆ ಸಹಿ ಹಾಕದ ಸಮಂತಾ..! ʼಶಾಕುಂತಲೆʼ ನಿರ್ಧಾರಕ್ಕೆ ಕಾರಣ ಇಲ್ಲಿದೆ.. title=

Samantha Movies updates : ಬಹುಭಾಷಾ ನಟಿ ಸಮಂತಾ ತಮ್ಮ ಚಿತ್ರಗಳಿಂದ ಸುದೀರ್ಘ ವಿರಾಮ ತೆಗೆದುಕೊಳ್ಳುತ್ತಿದ್ದಾರೆ.. ಹೌದು, ಇಂತಹ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಕೇಳಿಬರುತ್ತಿವೆ. ಇದರಿಂದ ಸ್ಯಾಮ್‌ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುವುದನ್ನು ನೋಡೋಣ ಬನ್ನಿ.

ಯಸ್‌.. ನಟ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಮಂತಾ ಅನಾರೋಗ್ಯಕ್ಕೆ ಒಳಗಾದರು. ಧೈರ್ಯ ಕಳೆದುಕೊಳ್ಳದೆ ಬಂದ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತರು. ಮಯೋಸಿಟಿಸ್‌ನಿಂದ ಚೇತರಿಸಿಕೊಂಡ ನಂತರ, ಮತ್ತೆ ಚಲನಚಿತ್ರಗಳಲ್ಲಿ ನಿರತರಾದರು. ಸ್ಯಾಮ್ ಅವರ ಶಾಕುಂತಲಂ ಸಹ ಬಾಕ್ಸ್ ಆಫೀಸ್ ಹಿಟ್ ಆಗಿತ್ತು.

ಇದನ್ನೂ ಓದಿ: ʼBADʼ ಸಿನಿಮಾದ ಫಸ್ಟ್ ಲುಕ್ ರಿಲೀಸ್‌ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್..!

ಇದರೊಂದಿಗೆ, ಅವರು ತಮ್ಮ ಮುಂದಿನ ಪ್ರಾಜೆಕ್ಟ್‌ಗಳತ್ತ ಹೆಜ್ಜೆ ಹಾಕುತ್ತಾರೆ. ಸದ್ಯ ಶಿವ ನಿರ್ವಾಣ ನಿರ್ದೇಶನದ ʼಖುಷಿʼ ಚಿತ್ರದ ಅಂತಿಮ ಶೆಡ್ಯೂಲ್ ನಡೆಯುತ್ತಿದೆ. ಈ ವಾರ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ವಿಜಯ್ ದೇವರಕೊಂಡ ಇನ್‌ಸ್ಟಾಗ್ರಾಮ್‌ನಲ್ಲಿ ಘೋಷಿಸಿದರು. ಅಲ್ಲದೆ ಸ್ಯಾಮ್‌ "ಸಿಟಾಡೆಲ್" ವೆಬ್ ಸರಣಿಯಲ್ಲಿಯೂ ಸಹ ನಟಿಸುತ್ತಿದ್ದಾರೆ.

ಸದ್ಯ ಸ್ಯಾಮ್ ಯಾವುದೇ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತಿಲ್ಲ. ಸದ್ಯದ ಪ್ರಾಜೆಕ್ಟ್‌ಗಳು ಮುಗಿದ ನಂತರ ಸಿನಿಮಾದಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಸಮಂತಾ ತನ್ನ ಆರೋಗ್ಯದ ಕಡೆಗೆ ಹೆಚ್ಚು ಆದ್ಯತೆ ನೀಡಲು ಬಯಸುತ್ತಾರೆ. ಅದಕ್ಕಾಗಿಯೇ ದೀರ್ಘ ವಿರಾಮವನ್ನು ತೆಗೆದುಕೊಳ್ಳಲು ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕೋಟಿಗೊಬ್ಬ’ನ ಹೃದಯವಂತಿಕೆ..ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್!

ಮುಂದಿನ ವರ್ಷ ಅಥವಾ ನಂತರದ ದಿನಗಳಲ್ಲಿ ಅವರು ಮತ್ತೆ ಚಲನಚಿತ್ರಗಳತ್ತ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಆದರೆ ಸ್ಯಾಮ್‌ ಫ್ಯಾನ್ಸ್‌ಗೆ ಒಂದು ಸಂತೋಷದ ವಿಚಾರ ಅಂದ್ರೆ, ʼಖುಷಿʼ ಚಿತ್ರದ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News