Salman Khan: ಹೆಂಡತಿ ಇಲ್ಲ, ಮಕ್ಕಳಿಲ್ಲ, ಸಲ್ಮಾನ್ ಅವರ ಕೋಟಿಗಟ್ಟಲೆ ಆಸ್ತಿ ಯಾರಿಗೆ ಸಿಗುತ್ತದೆ?

 Salman Khan Property: ಸಲ್ಮಾನ್ ಖಾನ್ ಆಸ್ತಿ ಹಂಚಿಕೆಯಾಗಿದೆ ಎಂದು ವರದಿಯಾಗಿದೆ. ಅದರ ಪ್ರಕಾರ ಸಲ್ಲು ಬಾಯ್ ಸಂಪತ್ತನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು.

Written by - Savita M B | Last Updated : May 8, 2024, 10:55 AM IST
  • ಬಾಲಿವುಡ್ ನ ದಬಾಂಗ್ ನಟ ಸಲ್ಮಾನ್ ಖಾನ್ ಸದ್ಯ ಸುದ್ದಿಯಲ್ಲಿದ್ದಾರೆ.
  • ಕಳೆದ ತಿಂಗಳು ಮುಂಬೈನಲ್ಲಿರುವ ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ ನಡೆದಿತ್ತು
 Salman Khan: ಹೆಂಡತಿ ಇಲ್ಲ, ಮಕ್ಕಳಿಲ್ಲ, ಸಲ್ಮಾನ್ ಅವರ ಕೋಟಿಗಟ್ಟಲೆ ಆಸ್ತಿ ಯಾರಿಗೆ ಸಿಗುತ್ತದೆ? title=

Salman Khan: ಬಾಲಿವುಡ್ ನ ದಬಾಂಗ್ ನಟ ಸಲ್ಮಾನ್ ಖಾನ್ ಸದ್ಯ ಸುದ್ದಿಯಲ್ಲಿದ್ದಾರೆ. ಕಳೆದ ತಿಂಗಳು ಮುಂಬೈನಲ್ಲಿರುವ ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ, ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಇದಲ್ಲದೇ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಎಲ್ಲಾ ಗಲಾಟೆಯಲ್ಲಿ ಸಲ್ಮಾನ್ ಖಾನ್ ಆಸ್ತಿ ಹಂಚಿಕೆಯಾಗುತ್ತಿದೆ ಎಂದು ವರದಿಯಾಗಿದೆ.  

ಸಲ್ಮಾನ್ ಖಾನ್ ಅವರ 4000 ಕೋಟಿ ರೂಪಾಯಿ ಸಂಪತ್ತು ನಾಲ್ವರಿಗೆ ಹಂಚಿಕೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಕೆಲವು ದಿನಗಳ ಹಿಂದೆ, ಸಲ್ಮಾನ್ ಖಾನ್ ಅವರ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್, ಅರ್ಬಾಜ್ ಅವರ ಮಗನ ಪಾಡ್ಕ್ಯಾಸ್ಟ್ನಲ್ಲಿ ಕಾಣಿಸಿಕೊಂಡರು. ಆ ವೇಳೆ ಸಲ್ಮಾನ್ ಖಾನ್ ಒಂಟಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ- Aishwarya Arjun: ಆಕ್ಷನ್‌ ಕಿಂಗ್‌ ಪುತ್ರಿ ಐಶ್ವರ್ಯಾ ವಿವಾಹ ಮುಹೂರ್ತ ಫಿಕ್ಸ್‌: ಮದುವೆ ಯಾವಾಗ ಗೊತ್ತೇ?

ಸಲ್ಮಾನ್ ಖಾನ್ ಸಿಂಗಲ್. ಅದು ಬಿಟ್ಟರೆ ಮಕ್ಕಳನ್ನೂ ದತ್ತು ತೆಗೆದುಕೊಂಡಿಲ್ಲ. ಹಾಗಾಗಿ ಸಲ್ಮಾನ್ ಆಸ್ತಿ ಯಾರಿಗೆ ಹೋಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ. ವರದಿ ಪ್ರಕಾರ, ಸಲ್ಮಾನ್ ಸಂಪತ್ತು ನಾಲ್ಕು ಭಾಗಗಳಾಗಿ ವಿಭಜನೆಯಾಗಲಿದ್ದು, ಈ ಎಲ್ಲಾ ನಾಲ್ಕು ಷೇರುಗಳನ್ನು ಕುಟುಂಬದ ಸದಸ್ಯರಿಗೆ ಹಂಚಬೇಕು. 

ಅರ್ಬಾಜ್ ಮತ್ತು ಸೊಹೈಲ್ ಹೊರತುಪಡಿಸಿ, ಸಲ್ಮಾನ್ ಖಾನ್ ಅವರಿಗೆ ಅಲ್ವಿರಾ ಖಾನ್ ಮತ್ತು ಅರ್ಪಿತಾ ಖಾನ್ ಎಂಬ ಇಬ್ಬರು ಸಹೋದರಿಯರಿದ್ದಾರೆ. ಈ ಒಡಹುಟ್ಟಿದವರ ನಡುವೆ ತುಂಬಾ ಪ್ರೀತಿ ಇದೆ. ಅಲ್ಲದೇ ಸಲ್ಲು ಬಾಯ್ ಆಸ್ತಿಯ ಮೇಲೆ ಅವನ ಸಹೋದರ ಸಹೋದರಿಯರಿಗೆ ಹಕ್ಕು ಇದೆ ಎಂದು ವರದಿಯಾಗಿದೆ. ಹಾಗಾಗಿ ಒಂದಷ್ಟು ಭಾಗವನ್ನು ಸಲ್ಮಾನ್ ಖಾನ್ ಅವರ ಎನ್ ಜಿಒ ಬೀಯಿಂಗ್ ಹ್ಯೂಮನ್ ಗೆ ದಾನ ಮಾಡುವ ಸಾಧ್ಯತೆ ಇದೆ. ಸಲ್ಮಾನ್ ಖಾನ್ ತನ್ನ NGO ಬೀಯಿಂಗ್ ಹ್ಯೂಮನ್ ಮೂಲಕ ಅನೇಕ ನಿರ್ಗತಿಕರಿಗೆ ಸಹಾಯ ಮಾಡುತ್ತಾರೆ. ಅವರು ಅನೇಕ ಜನರಿಗೆ ಶಸ್ತ್ರಚಿಕಿತ್ಸೆ ಮತ್ತು ಔಷಧಿಗಳಿಗೆ ಸಹಾಯ ಮಾಡಿದ್ದಾರೆ. 

ಇದನ್ನೂ ಓದಿ- ಮರು ಘರ್ಜನೆಗೆ ಮತ್ತೆ ಮರಳುತ್ತಿದೆ RRR : ಬಿಡುಗಡೆಗೆ ಮತ್ತೆ ಸಜ್ಜಾದ ಎಸ್ ಎಸ್ ರಾಜಮೌಳಿ ಚಿತ್ರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News