ಈ ಕಾರಣಕ್ಕಾಗಿಯೇ ಇನ್ನೂ ಮದುವೆಯಾಗಿಲ್ಲವಂತೆ ಸಲ್ಮಾನ್ ಖಾನ್ ..!

ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ? ಎನ್ನುವ ಪ್ರಶ್ನೆ ಇವತ್ತು ನಿನ್ನೆಯದ್ದಲ್ಲ. ಆದ್ರೆ ಈ ಪಶ್ನೆ ಕೇವಲ ಪ್ರಶ್ನೆಯಾಗಿಯೇ ಉಳಿದಿದೆ. ಸಲ್ಮಾನ್ ಅಭಿಮಾನಿಗಳಂತೂ ಸಲ್ಲು ಜೀವನದ ಈ ಶುಭ ಘಳಿಗೆಗಾಗಿ ಕಾಯುತ್ತಿದ್ದಾರೆ. 

Written by - Ranjitha R K | Last Updated : Dec 27, 2021, 12:53 PM IST
  • ಸಲ್ಮಾನ್ ಖಾನ್ ಗೆ ಹುಟ್ಟುಹಬ್ಬದ ಸಂಭ್ರಮ
  • ಇನ್ನೂ ಮದುವೆಯಾಗದ ಸಲ್ಮಾನ್
  • ಇದೇ ಕಾರಣವಂತೆ ಮದುವೆಯಾಗದಿರಲು
ಈ ಕಾರಣಕ್ಕಾಗಿಯೇ ಇನ್ನೂ ಮದುವೆಯಾಗಿಲ್ಲವಂತೆ ಸಲ್ಮಾನ್ ಖಾನ್ ..! title=
ಇನ್ನೂ ಮದುವೆಯಾಗದ ಸಲ್ಮಾನ್ (file photo)

ನವದೆಹಲಿ : ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ (Salman Khan) ಇಂದು ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಮುನ್ನಾ ದಿನ ಸಲ್ಮಾನ್ ಖಾನ್ ಗೆ ಅವರ ಫಾರ್ಮ ಹೌಸ್ ನಲ್ಲಿ ಹಾವು ಕಚ್ಚಿದ್ದು, ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಅಲ್ಲದೆ, ತಡರಾತ್ರಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಲ್ಲು ಅಭಿಮಾನಿಗಳು ಯಾವಾಗಲೂ, ಅವರು ಬೇಗನೇ ಮದುವೆಯಾಗಳಿ ಎಂದು ಹಾರೈಸುತ್ತಾರೆ. ಆದರೆ, ಸಲ್ಮಾನ್ ಮಾತ್ರ ಇಲ್ಲಿಯವರೆಗೂ ಒಂಟಿಯಾಗಿಯೇ ಇದ್ದಾರೆ. 

ಈ ನಟಿಯಿಂದಾಗಿಯೇ ಇನ್ನೂ ಸಿಂಗಲ್ ಆಗಿದ್ದಾರಂತೆ ಸಲ್ಮಾನ್ : 
ಸಲ್ಮಾನ್ ಖಾನ್ (Salman Khan) ಯಾವಾಗ ಮದುವೆಯಾಗುತ್ತಾರೆ? ಎನ್ನುವ ಪ್ರಶ್ನೆ ಇವತ್ತು ನಿನ್ನೆಯದ್ದಲ್ಲ. ಆದ್ರೆ ಈ ಪಶ್ನೆ ಕೇವಲ ಪ್ರಶ್ನೆಯಾಗಿಯೇ ಉಳಿದಿದೆ. ಸಲ್ಮಾನ್ ಅಭಿಮಾನಿಗಳಂತೂ (Salman khan fans) ಸಲ್ಲು ಜೀವನದ ಈ ಶುಭ ಘಳಿಗೆಗಾಗಿ ಕಾಯುತ್ತಿದ್ದಾರೆ. ಸಲ್ಮಾನ್ ಮದುವೆ ( Salman Khan Marriage) ವಿಳಂಬವಾಗುತ್ತಿರುವುದಕ್ಕೆ ನಾನಾ ಕಾರಣಗಳಿರಬಹುದು.  

ಇದನ್ನೂ ಓದಿ : HD Kumaraswamy: ನಿಖಿಲ್ ನಿನಗೆ ರಾಜಕೀಯ ಬೇಡ ಎಂದ ಎಚ್.ಡಿ.ಕುಮಾರಸ್ವಾಮಿ

2014 ರಲ್ಲಿ ಬಹಿರಂಗವಾಗಿತ್ತು ರಹಸ್ಯ :
ಒಮ್ಮೆ ಸಲ್ಮಾನ್ ತಾವಿನ್ನೂ ಯಾಕೆ ಮದುವೆಯಾಗಿಲ್ಲ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದರು. ಇದು 2014 ರಲ್ಲಿ ಬಿಗ್ ಬಾಸ್ (Bigg boss) ಸೆಟ್‌ನಲ್ಲಿ ನಡೆದಿದ್ದ ಮಾತು. ಆ ವೇಳೆ ರೇಖಾ (Rekha) ತಮ್ಮ ‘ಸೂಪರ್ ನಾನಿ’ ಚಿತ್ರದ ಪ್ರಚಾರಕ್ಕಾಗಿ ಅಲ್ಲಿಗೆ ಆಗಮಿಸಿದ್ದರು. ತನ್ನ ಹದಿಹರೆಯದ ವರ್ಷಗಳಲ್ಲಿ ರೇಖಾ ಅವರಿಂದ ಬಹಳ ಪ್ರಭಾವಿತನಾಗಿದ್ದೆ ಎಂದು ಸಲ್ಮಾನ್ ಆ  ಸಂದರ್ಭದಲ್ಲಿ ಹೇಳಿದ್ದರು.  ಅಲ್ಲದೆ, ಇನ್ನೂ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದರು. ಆ ದಿನಗಳಲ್ಲಿ ರೇಖಾ ಮತ್ತು ಸಲ್ಮಾನ್ ಅಕ್ಕಪಕ್ಕದ ಮನೆಯವರು. ರೇಖಾ ಮಾರ್ನಿಂಗ್ ವಾಕ್ ಹೋಗುವುದನ್ನು ನೋಡಲು ಸಲ್ಮಾನ್ ಬೆಳಗ್ಗೆ 5.30ಕ್ಕೆ ಎದ್ದು ಹೋಗುತ್ತಿದ್ದರಂತೆ. ರೇಖಾಗೆ ಬೇಕಾಗಿ ಯೋಗ ತರಗತಿಗೂ ಸೇರಿಕೊಂಡಿದ್ದಅಂತೆ ಸಲ್ಮಾನ್.

ರೇಖಾ ಅವರಿಗೆ ಈ ಕೆಲಸ ಮಾಡುತ್ತಿದ್ದರು :
 ಆ ಸಮಯದಲ್ಲಿ ನನಗೂ ಯೋಗಾಕ್ಕೂ ಯಾವ ಸಂಬಂಧವೂ ಇರಲಿಲ್ಲ. ಆದರೆ,  ಅಲ್ಲಿ ರೇಖಾ ಯೋಗ (Yoga)   ಕಲಿಸುತ್ತಿದ್ದರಿಂದ, ತಾನು ಮತ್ತು ಸ್ನೇಹಿತ ಅಲ್ಲಿಗೆ ತೆರಳುತ್ತಿದ್ದುದಾಗಿ ಹೇಳಿದ್ದಾರೆ.  ಅಷ್ಟು ಮಾತ್ರವಲ್ಲ ತಾನು ದೊಡ್ಡವನಾದ ಮೇಲೆ ಇಡೀ ಹುಡುಗಿಯನ್ನು ವಿವಾಹವಾಗುವುದಾಗಿಯೂ ತನ್ನ ಮನೆಯಲ್ಲಿ ಹೇಳಿದ್ದರಂತೆ. ಈ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲಿ ಮಾತನಾಡಿದ್ದ ಸಲ್ಮಾನ್ ಬಹುಶಃ ಇದೇ ಕಾರಣಕ್ಕೆ ತಾನಿನ್ನೂ ಮದುವೆಯಾಗಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ನಗು ನಗುತ್ತಲೇ ಉತ್ತರಿಸಿದ ರೇಖಾ, ಬಹುಶಃ ನಾನು ಕೂಡಾ ಇಡೀ ಕಾರಣಕ್ಕೆ ಮದುವೆಯಾಗಿಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ. 

ಇದನ್ನೂ ಓದಿ : ಕಪಿಲ್ ದೇವ್ ಅವರ ಆ ಕ್ಯಾಚ್ ಅನುಕರಿಸಲು 6 ತಿಂಗಳ ತೆಗೆದುಕೊಂಡಿದ್ದ ರಣವೀರ್ ಸಿಂಗ್...!

ಸಲ್ಮಾನ್ ಮುಂದಿನ ಚಿತ್ರಗಳು : 
ಸಲ್ಮಾನ್ ಖಾನ್ ಅವರ ಕೆಲಸದ ಬಗ್ಗೆ ಹೇಳುವುದಾದರೆ,  ಅವರು ಪೂಜಾ ಹೆಗ್ಡೆ (Pooja Hegde) ಅವರೊಂದಿಗೆ 'ಕಭಿ ಈದ್ ಕಭಿ ದೀಪಾವಳಿ' ಮತ್ತು ಜಾಕ್ವೆಲಿನ್ ಫರ್ನಾಂಡಿಸ್ (Jacqueline fernandez) ಅವರೊಂದಿಗೆ 'ಕಿಕ್ 2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲ, ಸಲ್ಮಾನ್ ಖಾನ್ ಅಮೀರ್ ಖಾನ್ (Amir Khan) ಅವರ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರದಲ್ಲಿಯೂ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಖಾನ್ ಸದ್ಯ 'ಟೈಗರ್ 3' ಚಿತ್ರೀಕರಣದಲ್ಲಿದ್ದು, ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News