ಆರಾಧ್ಯ ಅಲ್ಲ.. ಮದುವೆಗೂ ಮುನ್ನವೇ ಐಶ್ವರ್ಯ ರೈಗೆ ಒಬ್ಬ ಮಗನಿದ್ದ?! ಇಂಡಸ್ಟ್ರೀಯನ್ನೇ ಬೆಚ್ಚಿ ಬೀಳಿಸುತ್ತಿದೆ ಶಾಕಿಂಗ್‌ ಮ್ಯಾಟರ್‌!!

Aishwarya Rai Son: ಐಶ್ವರ್ಯಾ ರೈಗೆ ಒಬ್ಬಳೇ ಮಗಳು ಆರಾಧ್ಯ. ಆದರೆ ಮದುವೆಗೂ ಮುನ್ನವೇ ಆಕೆಗೆ ಗಂಡು ಮಗು ಹುಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾದ್ರೆ ಆ ಮಗು ಯಾರು? ಈಗ ಎಲ್ಲಿದ್ದಾನೆ?   

Written by - Savita M B | Last Updated : Nov 3, 2024, 08:47 AM IST
  • ತಮಿಳು ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯವಾದರು.
  • ಇದೆಲ್ಲದರ ಮಧ್ಯೆ ಇತ್ತೀಚೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬೇರ್ಪಡುತ್ತಿದ್ದಾರೆ
ಆರಾಧ್ಯ ಅಲ್ಲ.. ಮದುವೆಗೂ ಮುನ್ನವೇ ಐಶ್ವರ್ಯ ರೈಗೆ ಒಬ್ಬ ಮಗನಿದ್ದ?! ಇಂಡಸ್ಟ್ರೀಯನ್ನೇ ಬೆಚ್ಚಿ ಬೀಳಿಸುತ್ತಿದೆ ಶಾಕಿಂಗ್‌ ಮ್ಯಾಟರ್‌!!  title=

Actress Aishwarya Rai: ಐಶ್ವರ್ಯಾ ರೈ.. ವಿಶ್ವ ಸುಂದರಿಯಾಗಿ (ಮಿಸ್ ವರ್ಲ್ಡ್ 1994 ವಿಜೇತೆ) ಎಲ್ಲರನ್ನೂ ಮೆಚ್ಚಿಸಿದರು.. ಆ ನಂತರ ನಿಧಾನವಾಗಿ ಚಿತ್ರರಂಗ ಪ್ರವೇಶಿಸಿದರು. ತಮಿಳು ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯವಾದರು. ಮೊದಲ ಚಿತ್ರದಲ್ಲೇ ಎಲ್ಲರನ್ನೂ ಆಕರ್ಷಿಸಿ.. ಸತತ ಆಫರ್‌ಗಳು ಸಾಲುಗಟ್ಟಿ ಬರುವಂತೆ ಮಾಡಿಕೊಂಡರು... ಐಶ್ವರ್ಯಾ ಹೆಚ್ಚಾಗಿ ಹಿಂದಿಯಲ್ಲಿ ಸಿನಿಮಾ ಮಾಡಿದ್ದಾರೆ. ಅಲ್ಲಿಯೇ ಅವರಿಗೆ ಯಶಸ್ಸು ಸಿಕ್ಕಿತು. ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದರು.. 

 ಕೆಲವು ವರ್ಷಗಳ ಕಾಲ ಬಾಲಿವುಡ್‌ನ್ನೇ ಆಳಿದ ಐಶ್‌ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರೊಂದಿಗೆ ಪ್ರೀತಿಯಲ್ಲಿಬಿದ್ದರು.. ಆದರೆ ಅದಕ್ಕೂ ಮೊದಲು ಆಕೆ ಹಲವು ನಾಯಕರ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಅಭಿಷೇಕ್ ಬಚ್ಚನ್ ಅವರನ್ನು 2007 ರಲ್ಲಿ ವಿವಾಹವಾದರು. 2011ರಲ್ಲಿ ಮಗಳು ಆರಾಧ್ಯ ಜನಿಸಿದರು. ಆ ಮುದ್ದಾದ ಮಗು ಈಗ ದೊಡ್ಡವಳಾಗಿದ್ದಾಳೆ.. ಇತ್ತೀಚೆಗಷ್ಟೇ ಮುಕೇಶ್ ಅಂಬಾನಿ ಮಗನ ಮದುವೆ ಸಮಾರಂಭದಲ್ಲಿ ಐಶ್ವರ್ಯಾ ಮಗಳ ಜೊತೆ ಮಿಂಚಿದ್ದರು. ಇದರಲ್ಲಿ ಆರಾಧ್ಯ ಅವರನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದರು. ಆರಾಧ್ಯ ತನ್ನ ತಾಯಿಯನ್ನು ಮೀರಿಸುವ ಸೌಂದರ್ಯವತಿ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದರು..

ಇದನ್ನೂ ಓದಿ- ದೀಪಾವಳಿ ಹಿನ್ನಲೆ ಹುಟ್ಟೂರಿಗೆ ಶಿವಣ್ಣ ಭೇಟಿ..! ಅಣ್ಣಾವ್ರು ಹುಟ್ಟಿದ ಹಳೇ ಮನೆ.. ಫೊಟೋಸ್‌ ಇಲ್ಲಿವೆ..

ಇದೆಲ್ಲದರ ಮಧ್ಯೆ ಇತ್ತೀಚೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬೇರ್ಪಡುತ್ತಿದ್ದಾರೆ ಎಂಬ ವದಂತಿಗಳಿವೆ. ಅಂಬಾನಿ ಮದುವೆಯಲ್ಲಿ ಐಶ್ ಹಾಗೂ ಬಚ್ಚನ್‌ ಫ್ಯಾಮಿಲಿ ಒಬ್ಬರಿಗೊಬ್ಬರು ಸಂಬಂಧವೇ ಇಲ್ಲ ಎನ್ನುವಂತೆ ನಡೆದುಕೊಂಡರು.. ಇದರಿಂದಾಗಿ ಈ ರೀತಿಯ ವದಂತಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಐಶ್ ಅಥವಾ ಅಭಿಷೇಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  

ಈ ಹಿನ್ನಲೆಯಲ್ಲಿ ಇದೀಗ ಸೆನ್ಸೇಷನಲ್ ಸುದ್ದಿಯೊಂದು ವೈರಲ್ ಆಗಲಿದೆ. ಮದುವೆಗೂ ಮುನ್ನ ಐಶ್ವರ್ಯಾಗೆ ಮಗನಿದ್ದಾನೆ ಎನ್ನಲಾಗ್ತಿದೆ.. ಹೌದು ಮೂರು ವರ್ಷಗಳ ಹಿಂದೆ ಸಂಗೀತ್ ಕುಮಾರ್ ಎಂಬ ವ್ಯಕ್ತಿ ತಾನು ಐಶ್ವರ್ಯಾ ರೈ ಅವರ ಮಗ ಎಂದು ಮಾಧ್ಯಮದ ಮುಂದೆ ಬಂದಿದ್ದರು.. ಆಗ ಅವರ ವಯಸ್ಸು 32. ಐಶ್ವರ್ಯಾ ರೈ ಅವರು 15 ವರ್ಷದವರಾಗಿದ್ದಾಗ ಆತ ಜನಿಸಿದ್ದಾನಂತೆ.. ಅಲ್ಲದೇ ಅವನು ಲಂಡನ್‌ನಲ್ಲಿ `ಐವಿಎಫ್-ಇನ್ ವಿಟ್ರೊ ಫರ್ಟಿಲೈಸೇಶನ್' (ಲ್ಯಾಬ್‌ನಲ್ಲಿ ಜನನ) ಮೂಲಕ ಜನಿಸಿದ್ದಾನೆ ಎನ್ನಲಾಗ್ತಿದೆ.. ಸದ್ಯ ಐಶ್ವರ್ಯಾ ರೈ ನನ್ನ ತಾಯಿ ಎಂದು ಆತ ಆರೋಪಿಸಿದ್ದಾನೆ.. 

ಇದನ್ನೂ ಓದಿ- ಮಾರ್ಷಲ್ ಆರ್ಟ್ಸ್‌ನಲ್ಲಿ ಚಾಂಪಿಯನ್‌, ಗ್ಲಾಮರ್‌ ಶೋನಲ್ಲಿ ಕ್ವೀನ್‌..! ಅಬ್ಬಬ್ಬಾ.. ಭೂಸ್ವರ್ಗ ಈಕೆ ಬ್ಯೂಟಿ..

ಐಶ್ ತಂದೆ ತಾಯಿಯೇ ತನ್ನನ್ನು ಸಾಕಿದ್ದರು.. ಆದರೆ ನನ್ನ ಜನ್ಮದ ಎಲ್ಲಾ ಪುರಾವೆಗಳು ನಾಶವಾಗಿದ್ದು, ಈಗ ನನ್ನ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.. ಸದ್ಯ ಈ ಮ್ಯಾಟರ್‌ ಇಡೀ ಇಂಡಸ್ಟ್ರೀಯಲ್ಲೇ ಸಂಚಲನ ಸೃಷ್ಟಿಸುತ್ತಿದೆ..   

ಇನ್ನು ಐಶ್ವರ್ಯಾ ರೈ ಸಿನಿಮಾ ಮಾಡುತ್ತಿಲ್ಲ. ಕೊನೆಯದಾಗಿ ಅವರು ಪೊನ್ನಿಯಿನ್‌ ಸೆಲ್ವನ್‌ನಲ್ಲಿ ನಂದಿನಿ ಪಾತ್ರವನ್ನು ನಿರ್ವಹಿಸಿದರು. ಕಥೆಗೆ ತಿರುವು ನೀಡುವ ಪಾತ್ರದಲ್ಲಿ ಅವರು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಅದಕ್ಕೂ ಮುನ್ನ ಅವರು `ಫ್ಯಾನಿ ಖಾನ್' ಎಂಬ ಬಾಲಿವುಡ್ ಸಿನಿಮಾ ಮಾಡಿದ್ದರು. ಈಗ ಆಕೆಯ ಕೈಯಲ್ಲಿ ಯಾವುದೇ ಚಿತ್ರಗಳಿಲ್ಲ ಎಂಬುದು ಸ್ಪಷ್ಟವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News