Yash19 : ರಾಕಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ : ಹೊಸ ಸಿನಿಮಾ ಗುಟ್ಟು ಬಿಚ್ಚಿಟ್ಟ ಯಶ್‌...! 

ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮೆರೆಯುತ್ತಿರುವ ಕನ್ನಡಿಗ ರಾಕಿಭಾಯ್‌, ರಾಕಿಂಗ್‌ ಸ್ಟಾರ್‌ ಯಶ್‌ ಕೆಜಿಎಫ್‌ 2 ನಂತರ ಯಾವುದೇ ಸಿನಿಮಾದ ಕುರಿತು ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಅಲ್ಲದೆ, ರಾಕಿ ಮುಂದಿನ ಸಿನಿಮಾ ಯಾವುದಪ್ಪಾ ಅಂತ ಅವರ ಅಭಿಮಾನಿಗಳು ಬಕಪಕ್ಷಿಗಳ ರೀತಿ ಕಾಯುತ್ತಿದ್ದಾರೆ. ಇದೀಗ ವೆಟಿಂಗ್‌ ಇಸ್‌ ಎಂಡ್‌ ಎನ್ನುವ ಹಾಗೆ ಮ್ಯಾಟರ್‌ ಒಂದು ಲೀಕ್‌ ಆಗಿದ್ದು, ಮಾನ್ಸ್ಟರ್‌ ಬರ್ತ್‌ಡೇಗೆ ಹೊಸ ಸಿನಿಮಾ ಅನೌನ್ಸ್‌ ಆಗಲಿದೆ. ಈ ಕುರಿತು ಸ್ವತಃ ಕಿರಾತಕ ಗುಟ್ಟು ರಟ್ಟು ಮಾಡಿದ್ದಾರೆ. 

Written by - Krishna N K | Last Updated : Dec 24, 2022, 04:17 PM IST
  • ರಾಕಿಂಗ್‌ ಸ್ಟಾರ್‌ ಯಶ್‌ ಕೆಜಿಎಫ್‌ 2 ನಂತರ ಯಾವುದೇ ಸಿನಿಮಾದ ಕುರಿತು ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ.
  • ರಾಕಿ ಮುಂದಿನ ಸಿನಿಮಾ ಯಾವುದಪ್ಪಾ ಅಂತ ಅವರ ಅಭಿಮಾನಿಗಳು ಬಕಪಕ್ಷಿಗಳ ರೀತಿ ಕಾಯುತ್ತಿದ್ದಾರೆ.
  • ಇದೀಗ ವೆಟಿಂಗ್‌ ಇಸ್‌ ಎಂಡ್‌ ಎನ್ನುವ ಹಾಗೆ ಮ್ಯಾಟರ್‌ ಒಂದು ಲೀಕ್‌ ಆಗಿದೆ.
Yash19 : ರಾಕಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ : ಹೊಸ ಸಿನಿಮಾ ಗುಟ್ಟು ಬಿಚ್ಚಿಟ್ಟ ಯಶ್‌...!  title=

Yash19 : ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮೆರೆಯುತ್ತಿರುವ ಕನ್ನಡಿಗ ರಾಕಿಭಾಯ್‌, ರಾಕಿಂಗ್‌ ಸ್ಟಾರ್‌ ಯಶ್‌ ಕೆಜಿಎಫ್‌ 2 ನಂತರ ಯಾವುದೇ ಸಿನಿಮಾದ ಕುರಿತು ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಅಲ್ಲದೆ, ರಾಕಿ ಮುಂದಿನ ಸಿನಿಮಾ ಯಾವುದಪ್ಪಾ ಅಂತ ಅವರ ಅಭಿಮಾನಿಗಳು ಬಕಪಕ್ಷಿಗಳ ರೀತಿ ಕಾಯುತ್ತಿದ್ದಾರೆ. ಇದೀಗ ವೆಟಿಂಗ್‌ ಇಸ್‌ ಎಂಡ್‌ ಎನ್ನುವ ಹಾಗೆ ಮ್ಯಾಟರ್‌ ಒಂದು ಲೀಕ್‌ ಆಗಿದ್ದು, ಮಾನ್ಸ್ಟರ್‌ ಬರ್ತ್‌ಡೇಗೆ ಹೊಸ ಸಿನಿಮಾ ಅನೌನ್ಸ್‌ ಆಗಲಿದೆ. ಈ ಕುರಿತು ಸ್ವತಃ ಕಿರಾತಕ ಗುಟ್ಟು ರಟ್ಟು ಮಾಡಿದ್ದಾರೆ. 

ಹೌದು.. ಫಿಲಂ ಕ್ಯಾಂಪನಿಯನ್‌ ನಡೆಸಿದ ಸಂದರ್ಶನದಲ್ಲಿ ರಾಕಿ ಈ ವಿಚಾರ ಬಿಚ್ಚಿಟ್ಟಿದ್ದಾರೆ. ತಮ್ಮ ಸಿನಿ ಜರ್ನಿ ಕುರಿತು ಯಶ್‌ ಮಾತನಾಡುವಾಗ ನಿರೂಪಕಿ ತಮ್ಮ ಮುಂದಿನ ಸಿನಿಮಾ ಯಾವುದು ಅಂತ ಕೇಳಿದ್ರು. ಅಲ್ಲದೆ, ಯಾವಾಗ ಅಂತಾನೂ ಪ್ರಶ್ನೆ ಮಾಡಿದ್ರು. ಈ ಪ್ರಶ್ನೆ ಕೇವಲ ನಿರೂಪಕಿಯ ಕುತೂಹಲ ಅಷ್ಟೇ ಅಲ್ಲ, ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿರುವ ರಾಕಿಭಾಯ್‌ ಫ್ಯಾನ್ಸ್‌ಗಳ ಹೃದಯಾಳದ ಮಾತಾಗಿತ್ತು. ಅದಕ್ಕೆ ಉತ್ತರಿಸಿ ಯಶ್‌, ಎಲ್ಲರೂ ನನ್ನ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಬಿಡುಗಡೆ ಮಾಡ್ತೀನಿ ಅಂತ ಅಂದುಕೊಂಡಿದ್ದಾರೆ. ಅಭಿಮಾನಿಗಳ ಆಸೆ ಈಡೇರಿಸುವುದು ನನ್ನ ಭಾಗ್ಯ. ಆದ್ರೆ ಪೂರ್ತಿ ಕೆಲಸವಾಗದೇ ನನ್ನಿಂದ ಏನೂ ನಿರೀಕ್ಷಿಸಬೇಡಿ ಅಂತ ಹೇಳಿದ್ರು. 

ಇದನ್ನೂ ಓದಿ: BBK9 : ಡಬಲ್‌ ಎಲಿಮಿನೇಷನ್‌ ಬಿಸಿ.. ಇವತ್ತು ಯಾರ್‌ ಬರ್ತಾರೆ ಮನೆಯಿಂದ ಹೊರಗೆ..?

ಇದೇ ವೇಳೆ ಭಾರತೀಯ ಸಿನಿ ರಂಗದ ಕುರಿತು ಮಾತನಾಡಿದ ಯಶ್‌, ಬಾಲಿವುಡ್‌ನ್ನು ಯಾವುದೇ ಕಾರಣಕ್ಕೂ ಗೇಲಿ ಮಾಡಬಾರದು. ಅವರಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು. ಉತ್ತರ, ದಕ್ಷಿಣ ಎನ್ನುವ ಆಲೋಚನೆಯೇ ನಮ್ಮ ಮೈಂಡ್‌ನಲ್ಲಿ ಇರಬಾರದು ಎಂದರು. ಅಲ್ಲದೆ, ಜಗತ್ತಿಗೆ ಭಾರತ ಸಿನಿಮಾರಂಗ ಏನು ಅನ್ನೋದು ತೋರಿಸೋಣ ಅದೇ ನಮ್ಮ ಗುರಿಯಾಗಿರಬೇಕು ಅಂತ ಒಗ್ಗಟಿನ ಮಂತ್ರ ಜಪಿಸಿದರು.
 
ಅಲ್ಲದೆ, ಹಾಲಿವುಡ್‌ ಸಿನಿಮಾ ಮಾಡುವುದು ನನ್ನ ಗುರಿಯಲ್ಲ, ಭಾರತದತ್ತ ಎಲ್ಲರೂ ತಿರುಗಿ ನೋಡುವಂತಹ ಸಿನಿಮಾ ಮಾಡ್ಬೇಕು ಅಂತ ಹೇಳಿದರು. ಅಲ್ಲದೆ ಸ್ಯಾಂಡಲ್‌ವುಡ್‌ನಿಂದ ಬಿಡುಗಡೆಯಾಗುವ ಪ್ರತಿಯೊಂದು ಸಿನಿಮಾ ಸಹ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ಬೇಕು ಪ್ರತಿ ನಟರೂ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗ್ಬೇಕು ಅಂತ ಹೇಳಿದರು. ಅಲ್ಲದೆ, ಹಣ ಮಾಡೋದು ನನ್ನ ಗುರಿಯಲ್ಲ. ಜನರು ಬಯಸಿದ್ದನ್ನು ನಾನು ಅವರಿಗೆ ನೀಡಬೇಕು. ಅದಕ್ಕಾಗಿಯೇ ಇಷ್ಟು ದಿನ ಯಾವುದೇ ಸಿನಿಮಾ ಹೆಸರು ಘೋಷಣೆ ಮಾಡಿಲ್ಲ. ಸುಮ್ಮನೆಯಾವುದಾದ್ರೂ ಒಂದು ಮಾಡಿ ಅವರಿಗೆ ನಿರಾಸೆ ಮಾಡುವ ಉದ್ದೇಶ ನನಗಿಲ್ಲ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News