ರಿಯಲ್‌ ಗನ್‌ ಹಿಡಿದು ಶೂಟರ್‌ ಲೆವೆಲ್‌ಗೆ ಫೈಯರ್‌ ಮಾಡಿದ ರಾಕಿಭಾಯ್‌..!

ಕೆಜಿಎಫ್‌ 2 ಯಶಸ್ಸಿನ ನಂತರ ರಾಕಿಂಗ್‌ ಸ್ಟಾರ್‌ ಯಶ್‌ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ, ಯಶ್‌ ಕೆಜಿಎಫ್‌ 3 ತಯಾರಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ರಾಕಿ ಭಾಯ್‌ ರಿಯಲ್‌ ಗನ್‌ ಹಿಡಿದು ಶೂಟರ್‌ಗಳ ರೀತಿಯಲ್ಲಿ ಫೈಯರ್‌ ಮಾಡಿರುವ ವಿಡಿಯೋ ಹಂಚಿಕೊಂಡಿದ್ದು, ಫ್ಯಾನ್ಸ್‌ಗೆ ಸಖತ್‌ ಇಷ್ಟವಾಗಿದೆ.

Written by - Krishna N K | Last Updated : Sep 29, 2022, 02:14 PM IST
  • ರಾಕಿಂಗ್‌ ಸ್ಟಾರ್‌ ಯಶ್‌ ಮುಂದಿನ ಸಿನಿಮಾ ಯಾವುದು..?
  • ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ ರಾಕಿ ಭಾಯ್‌ ಗನ್‌ ಫೈರಿಂಗ್ ವಿಡಿಯೋ
  • ರಿಯಲ್‌ ಗನ್‌ ಹಿಡಿದು ಶೂಟರ್‌ಗಳ ರೀತಿಯಲ್ಲಿ ಫೈಯರ್‌ ಮಾಡಿ ಕೆಜಿಎಫ್‌ ಸುಲ್ತಾನ
ರಿಯಲ್‌ ಗನ್‌ ಹಿಡಿದು ಶೂಟರ್‌ ಲೆವೆಲ್‌ಗೆ ಫೈಯರ್‌ ಮಾಡಿದ ರಾಕಿಭಾಯ್‌..! title=

ಬೆಂಗಳೂರು : ಕೆಜಿಎಫ್‌ 2 ಯಶಸ್ಸಿನ ನಂತರ ರಾಕಿಂಗ್‌ ಸ್ಟಾರ್‌ ಯಶ್‌ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ, ಯಶ್‌ ಕೆಜಿಎಫ್‌ 3 ತಯಾರಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ರಾಕಿ ಭಾಯ್‌ ರಿಯಲ್‌ ಗನ್‌ ಹಿಡಿದು ಶೂಟರ್‌ಗಳ ರೀತಿಯಲ್ಲಿ ಫೈಯರ್‌ ಮಾಡಿರುವ ವಿಡಿಯೋ ಹಂಚಿಕೊಂಡಿದ್ದು, ಫ್ಯಾನ್ಸ್‌ಗೆ ಸಖತ್‌ ಇಷ್ಟವಾಗಿದೆ. 

ಯಶ್‌ ಹಾಗೂ ರಾಧಿಕಾ ದಂಪತಿ ಸದ್ಯ ಹಾಲಿಡೇ ಮೂಡಲ್ಲಿ ಇದ್ದಾರೆ.  ಸದ್ಯ ಅಮೆರಿಕದಲ್ಲಿರುವ ಸ್ಟಾರ್‌ ಜೋಡಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಲವಾರು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಪೈಕಿ ಗನ್​ ಹಿಡಿದು ಫೀಲ್ಡ್​ಗೆ ಇಳಿದ ಯಶ್‌, ಶೂಟರ್‌ಗಳ ರೀತಿಯಲ್ಲಿ  ಪೈಯರ್‌ ಮಾಡಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ ಜೊತೆಗೆ ʼʼ ಗುರಿ ತಲುಪಲು ಮಾರ್ಗ ಇದ್ದೆ ಇರುತ್ತದೆ. ಅದನ್ನು ಗುರುತಿಸುವುದೇ ಸವಾಲು!! ಧನ್ಯವಾದಗಳು ಜೆಜೆ ಪೆರ್ರಿ ಎಂತಹ ಅದ್ಭುತ ದಿನ!! ಮುಂದಿನ ಬಾರಿ ಅದು ಕಲಾಶ್ನಿಕೋವ್ ಆಗಿರಬೇಕುʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಪ್ರತಿ ವ್ಯಾಪಾರ ಮತ್ತು ಪ್ರತಿಯೊಂದು ವಹಿವಾಟಿಗೆ ಪೇಟಿಎಂ ಆಲ್-ಇನ್-ಒನ್ POS!

ಸದ್ಯ ಯಶ್‌ ಫೈರಿಂಗ್ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಿನಿಮಾ ಲೋಕದಲ್ಲಿ ಮತ್ತೊಮ್ಮೆ ಕಲಾಶ್ನಿಕೋವ್‌ ಸದ್ದು ಮಾಡುತ್ತಾ ಎಂಬ ಅನುಮಾನ ಮೂಡುವಂತೆ ಮಾಡಿದೆ. ಅಲ್ಲದೆ, ಯಶ್​ ಮುಂದಿನ ಸಿನಿಮಾ KGF 3 ಗಾಗಿ ಫೈಯರಿಂಗ್‌ ಅಭ್ಯಾಸ ಮಾಡುತ್ತಿದ್ದಾರಾ..? ಎಂಬ ಮಾತು ಕೇಳಿಬರುತ್ತಿವೆ. ಇನ್ನು ಓರ್‌ಮ್ಯಾಕ್ಸ್‌ ಸಂಸ್ಥೆ ಬಿಡುಗಡೆ ಮಾಡಿದ್ದ ಇಂಡಿಯಾ ಟಾಪ್ 10 ಹೀರೋಗಳ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದಿಂದ ಸ್ಥಾನ ಪಡೆದ ಏಕೈಕ ನಟ ಎಂಬ ಹೆಗ್ಗಳಿಕೆ ರಾಕಿಂಗ್ ಸ್ಟಾರ್​ಗೆ ಸಿಕ್ಕಿದೆ.

ಇನ್ನು ಮುಂದಿನ ಸಿನಿಮಾದ ಬಗ್ಗೆ ರಾಕಿಭಾಯ್‌ ಎಲ್ಲಿಯೂ ಗುಟ್ಟನ್ನು ಮಾತ್ರ ರಟ್ಟು ಮಾಡಿಲ್ಲ. ಜೊತೆಗೆ ಹಾಲಿವುಡ್ ನಿರ್ದೇಶನ ಜೆಜೆ ಪೆರ್ರಿ (JJ Perry) ಜೊತೆ ಯಶ್‌ ಕಂಡು ಬಂದಿದ್ದು ಮುಂದಿನ ಕೆಜಿಎಫ್‌ ಸುಲ್ತಾನನ ಮುಂದಿನ ನಡೆ ಏನು ಎನ್ನುವ ಅನುಮಾನ ಮೂಡುವಂತೆ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News