ನಟಿ ಊರ್ವಶಿ ರೌಟೆಲಾಗೆ ಕಾಟ ಕೊಟ್ಟಿದ್ದ ರಿಶಬ್ ಪಂತ್...!

ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ನಂತರ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಿರಾಮ ತೆಗೆದುಕೊಳ್ಳುತ್ತಿದ್ದಾರೆ.ಮುಂದಿನ ತಿಂಗಳು ಅವರು ಏಷ್ಯಾಕಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Written by - Zee Kannada News Desk | Last Updated : Aug 11, 2022, 05:08 PM IST
  • 2018 ರಲ್ಲಿ ಅವರಿಬ್ಬರೂ ಔತಣಕೂಟಗಳಲ್ಲಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಹರಡಿದ್ದವು
ನಟಿ ಊರ್ವಶಿ ರೌಟೆಲಾಗೆ ಕಾಟ ಕೊಟ್ಟಿದ್ದ ರಿಶಬ್ ಪಂತ್...! title=
file photo

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ನಂತರ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಿರಾಮ ತೆಗೆದುಕೊಳ್ಳುತ್ತಿದ್ದಾರೆ.ಮುಂದಿನ ತಿಂಗಳು ಅವರು ಏಷ್ಯಾಕಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಸಂದರ್ಶನವೊಂದರಲ್ಲಿ ಆರ್ಪಿ ಎಂದು ಪ್ರಸ್ತಾಪಿಸುವುದರ ಮೂಲಕ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಸಂದರ್ಶನವೊಂದರಲ್ಲಿ ಆರ್ಪಿ ಯಾರು ಎಂದು ಕೇಳಿದ್ದಕ್ಕೆ ಅವರು ಅದಕ್ಕೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ. ಪ್ರಸ್ತುತ ರಿಶಬ್ ಪಂತ್ ಅವರು ಇಶಾ ನೇಗಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳಿವೆ, ಆದಾಗ್ಯೂ ಅವರು ಈ ಹಿಂದೆ ಊರ್ವಶಿ ರೌಟೆಲಾ ಅವರನ್ನು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವಿನ ದುಬೈನಲ್ಲಿ ನಡೆದ ಟಿ 20 ವಿಶ್ವಕಪ್ 2021 ಪಂದ್ಯದಲ್ಲಿ ಭಾಗವಹಿಸಿದ್ದಾಗ ಊರ್ವಶಿ ರೌಟೇಲಾ ಅವರನ್ನು ಟ್ರೋಲ್ ಮಾಡಲಾಗಿತ್ತು.

ಇದನ್ನೂ ಓದಿ: ಕೋವಿಡ್‌ ಲಸಿಕೆಯ ಮೂರನೇ ಡೋಸ್‌ ಪಡೆದವರು 17% ಮಾತ್ರ : ಸಚಿವ ಸುಧಾಕರ್‌

2018 ರಲ್ಲಿ ಅವರಿಬ್ಬರೂ ಔತಣಕೂಟಗಳಲ್ಲಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಹರಡಿದ್ದವು, ಆದರೆ ಇದಾದ ನಂತರ ವಾಟ್ಸಪ್ ನಲ್ಲಿ ರಿಷಬ್ ಪಂತ್ ಊರ್ವಶಿ ಅವರನ್ನು ಬ್ಲಾಕ್ ಮಾಡಿದ್ದರು ಎನ್ನುವ ಸುದ್ದಿಗಳು ಹರಡಿದ್ದವು.ಬಾಲಿವುಡ್ ಹಂಗಾಮಾಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಊರ್ವಶಿ ರೌಟೆಲಾ “ನಾನು ವಾರಣಾಸಿಯಲ್ಲಿ ಶೂಟಿಂಗ್ ಮಾಡುತ್ತಿದ್ದೆ, ಮತ್ತು ಆಗ ನನಗೆ ನವದೆಹಲಿಯಲ್ಲಿ ಕಾರ್ಯಕ್ರಮ ಇದ್ದಿದ್ದರಿಂದ ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿ ಬಂತು, ದೆಹಲಿಯಲ್ಲಿ 10ಗೆ ಗಂಟೆ ಶೂಟಿಂಗ್ ಮುಗಿಸಿ ವಾಪಸ್ ರೆಡಿಯಾಗಬೇಕಿತ್ತು, ಹುಡುಗಿಯರು ತಯಾರಾಗಲು ತುಂಬಾ ಸಮಯ ತೆಗೆದುಕೊಳ್ಳ್ತಾರೆ ಅನ್ನೋದು ಗೊತ್ತೇ ಇದೆ.ಆರ್.ಪಿ ಬಂದರು, ಅವರು ಲಾಬಿಯಲ್ಲಿ ಕುಳಿತು ನನ್ನನ್ನು ಭೇಟಿಯಾಗಲು ಬಯಸಿದ್ದರು. ನಾನು ಆಗ ತುಂಬಾ ದಣಿದಿದ್ದೆ, ನಾನು ನಿದ್ರೆಗೆ ಜಾರಿದೆ, ಈ ಸಂದರ್ಭದಲ್ಲಿ ನನಗೆ ಹಲವಾರು ಕರೆಗಳು ಬಂದಿವೆ ಎನ್ನುವುದು ತಿಳಿದಿರಲಿಲ್ಲ" ಎಂದು ಊರ್ವಶಿ ಹೇಳಿದರು.

ಇದನ್ನೂ ಓದಿ: ವೀರಪ್ಪನ್ ತಾಣವಾಗಿದ್ದ ಈ ಊರು ಇಂದು ಯೋಧರ ಗ್ರಾಮ.. ಇಲ್ಲಿದೆ ಸೇನಾ ತರಬೇತಿ ಅಕಾಡೆಮಿ

ಈಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರ್ ಪಿ ಅಂದ್ರೆ ರಿಶಬ್ ಪಂತ್ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಸಿದ್ದಾರೆ.ಆದರೆ ಆರ್.ಪಿ.ಯಾರು ಎಂದು ಅವರನ್ನು ಸಂದರ್ಶನದಲ್ಲಿ ಕೇಳಿದಾಗ ಇದಕ್ಕೆ ಊರ್ವಶಿ ರೌಟೆಲಾ ಉತ್ತರಿಸಲು ನಿರಾಕರಿಸಿದ್ದಾರೆ. ಇನ್ನೊಂದೆಡೆಗೆ ರಿಶಬ್ ಪಂತ್ ಈ ವಿಚಾರವಾಗಿ ಸಾಮಾಜಿಕ ಮಾಧ್ಯಮದ ಸ್ಟೋರಿಯೊಂದರಲ್ಲಿ  ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಸ್ಟೋರಿಯನ್ನು ಕೆಲವೇ ಘಂಟೆಗಳಲ್ಲಿ ಅಳಸಿ ಹಾಕಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News