viral video: ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹೆಚ್ಚು ಸುದ್ದಿಯಲ್ಲಿದ್ದಾರೆ. ರಣಬೀರ್ ಮತ್ತು ಆಲಿಯಾ ಅವರ ಪುತ್ರಿ ರಾಹಾ ಕೂಡ ಪಾಪರಾಜಿಗಳ ಫೇವರೆಟ್ ಆಗಿದ್ದಾರೆ.. ಆಕೆಯ ವಿಡಿಯೋಗಳು ಕೂಡ ಸದಾ ವೈರಲ್ ಆಗುತ್ತಿರುತ್ತವೆ. ಆದರೆ ಆಲಿಯಾಗಿಂತ ಹೆಚ್ಚಾಗಿ, ರಣಬೀರ್ ಕಪೂರ್ ಪಾಪರಾಜಿಗಳೊಂದಿಗೆ ಕೋಪಗೊಳ್ಳುವುದು ಅಥವಾ ಫೋಟೋ ತೆಗೆಯಲು ನಿರಾಕರಿಸುವುದು ಕಂಡುಬರುತ್ತದೆ. ಅಂತಹ ಒಂದು ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೋದಲ್ಲಿ ರಣಬೀರ್ ಕಪೂರ್ ಅವರನ್ನು ನೋಡಿದರೇ ಅವರ ಮೂಡ್ ಹದಗೆಟ್ಟಿದೆ ಎನ್ನುವಂತೆ ಕಾಣುತ್ತದೆ.. ಏಕೆಂದರೆ ಅವರು ಪಾಪರಾಜಿಗಳ ಮೇಲೆ ಸಿಟ್ಟಾಗಿ, ಕೋಪದಲ್ಲಿ ಅವರ ಕೈಯನ್ನು ಹಿಡಿದು ಪಕ್ಕಕ್ಕೆ ತಳ್ಳುವುದು ಕಂಡುಬಂದಿದೆ. ವೈರಲ್ ವಿಡಿಯೋದಲ್ಲಿ ರಣಬೀರ್ ಜೊತೆ ಆಲಿಯಾ ಕೂಡ ಕಾಣಿಸಿಕೊಂಡಿದ್ದಾರೆ. ಮೊದಲು ಆಲಿಯಾ ಕಾರಿನಲ್ಲಿ ಕುಳಿತರೆ ನಂತರ ರಣಬೀರ್ ಕುಳಿತುಕೊಳ್ಳಲು ಹೋಗುತ್ತಾರೆ. ಆದರೆ ವೇಳೆ ಆಲಿಯಾ ತುಂಬಾ ಭಾವುಕರಾಗಿ ಕಾಣುತ್ತಾರೆ. ಕೆಲವರು ಆಕೆ ಅಳುತ್ತಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.
ನೆಟಿಜನ್ಗಳು ಹೇಳಿದ್ದೇನು?
ವಾಸ್ತವವಾಗಿ ರಣಬೀರ್ ಮತ್ತು ಆಲಿಯಾ ಅವರ ಈ ವೀಡಿಯೊ ಹಳೆಯದಾಗಿದೆ.. ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕ ನೆಟಿಜನ್ಗಳು ಸಹ ಕಾಮೆಂಟ್ ಮಾಡುತ್ತಿದ್ದಾರೆ. ರಣಬೀರ್ ಕಪೂರ್ನ ಈ ಕೃತ್ಯ ಕೆಲವರಿಗೆ ಇಷ್ಟವಾಗಿಲ್ಲ.. ಒಬ್ಬ ಬಳಕೆದಾರ, "ಕ್ಯಾಮೆರಾಮೆನ್ಗಳು ಅವಕಾಶಗಳಿದ್ದರೇ ಸೆಲೆಬ್ರಿಟಿಗಳ ಬಾಯಿಗೆ ಕ್ಯಾಮೆರಾವನ್ನು ಹಾಕುತ್ತಿದ್ದರು." ಎಂದು ಬರೆದರೆ, ಮತ್ತೊಬ್ಬರು ಆಲಿಯಾಗೆ" ಹೇ ಮೈ ಬ್ಯೂಟಿ" ಎಂದು ಬರೆದಿದ್ದಾರೆ.. ಇನ್ನೂ ಕೆಲವರು ರಣಬೀರ್ ಅವರನ್ನು ಬೆಂಬಲಿಸಿದ್ದಾರೆ. ರಣಬೀರ್ ಮಾಡಿದ್ದು ಸರಿಯೇ.. ಏಕೆಂದರೇ ಯಾರೊಬ್ಬರ ಖಾಸಗಿ ಬದುಕಿನಲ್ಲಿ ಯಾಕೆ ಇಣುಕಿ ನೋಡಬೇಕು ಎಂದು ಪಾಪರಾಜಿಯನ್ನು ಹಲವರು ಟ್ರೋಲ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.