ಖ್ಯಾತ ಕಲಾವಿದ ಖಾಸಿಂ ಕನ್ಸಾವಿ ನಿಧನ... ಸಚಿವ ಶಿವರಾಜ ತಂಗಡಗಿ ಸಂತಾಪ

Qasim Kansavi Death News: ಖ್ಯಾತ ಕಲಾವಿದ ಖಾಸಿಂ ಕನ್ಸಾವಿ ಅವರ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ಸಂತಾಪ ಸೂಚಿಸಿದ್ದಾರೆ.

Written by - Prashobh Devanahalli | Last Updated : May 18, 2024, 01:22 PM IST
  • ಖ್ಯಾತ ಕಲಾವಿದ ಖಾಸಿಂ ಕನ್ಸಾವಿ
  • ಖಾಸಿಂ ಕನ್ಸಾವಿ ನಿಧನ
  • ಸಚಿವ ಶಿವರಾಜ ತಂಗಡಗಿ ಸಂತಾಪ
ಖ್ಯಾತ ಕಲಾವಿದ ಖಾಸಿಂ ಕನ್ಸಾವಿ ನಿಧನ... ಸಚಿವ ಶಿವರಾಜ ತಂಗಡಗಿ ಸಂತಾಪ  title=

ಬೆಂಗಳೂರು: ಖ್ಯಾತ ಕಲಾವಿದ ಖಾಸಿಂ ಕನ್ಸಾವಿ ಅವರ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ಸಂತಾಪ ಸೂಚಿಸಿದ್ದಾರೆ. ನಾಡಿನ ಖ್ಯಾತ ಚಿತ್ರ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖಾಸಿಂ ಕನ್ಸಾವಿ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  

ಇಳಕಲ್ ಮೂಲದ ಕಾಸಿಂ ಕನ್ಸಾವಿ ಈ ನಾಡು ಕಂಡ ಅತ್ಯಂತ ಪ್ರತಿಭಾನ್ವಿತ ಕಲಾವಿದರಲ್ಲಿ ಒಬ್ಬರಾಗಿದ್ದರು. ಚಿಕ್ಕವಯಸ್ಸಿನಲ್ಲೇ ಅಕಾಲಿಕ ಸಾವಿಗೆ ಗುರಿಯಾದ ಅವರ ನಿಧನ ನನಗೆ ತೀವ್ರ ನೋವುಂಟು ಮಾಡಿದೆ.

ಇದನ್ನೂ ಓದಿ:  ಆರ್‌ಟಿಐ ಅಡಿ ಮಾಹಿತಿ ನೀಡದ ಆರೋಪ.. ತಾಲೂಕು ಆಡಳಿತದ ವಿರುದ್ದ ಏಕಾಂಗಿ ಪ್ರತಿಭಟನೆ 

ಹಂಪಿ ವಿಶ್ವವಿದ್ಯಾಲಯದ ಫೈನಲ್ ವಿಭಾಗದಿಂದ ಡಿಪ್ಲೋಮೋ ಪದವಿ ಪಡೆದು ಆನಂತರ ಬೆಂಗಳೂರಿನ ಕೆಂ ಕಲಾ ಶಾಲೆಯಲ್ಲಿ ಕಲಿತು ತಮ್ಮದೇ ಆದ ಶೈಲಿಯಲ್ಲಿ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಂಡಿದ್ದರು. ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿಯೂ ಸಹ ಅವರು ಸೇವೆ ಸಲ್ಲಿಸಿದ್ದಾರೆ. ದೇಶಾದ್ಯಂತ ಅನೇಕ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದ ಅವರು ಸರ್ಕಾರಿ ಶಾಲೆಯ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. 

ಚಿತ್ರಕಲಾ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಸ್ಮರಣೀಯ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ ಹಾಗೂ ಅವರ ಕುಟುಂಬಕ್ಕೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ರಣ ಮಳೆಗೆ ತತ್ತರಿಸಿದ ಕರುನಾಡು... ಜನಶತಾಬ್ದಿ ರೈಲಿನ ಬೋಗಿಯಲ್ಲಿ ನೀರು ಸೋರಿಕೆ, ಜನಜೀವನ ಅಸ್ತವ್ಯಸ್ತ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News