ರವಿಚಂದ್ರನ್‌ ಪುತ್ರನ ʻವಿವಾಹ ಆಹ್ವಾನʼ ಪತ್ರಿಕೆ! ಇಲ್ಲಿದೆ ವೈರಲ್ ಫೋಟೋದ ಅಸಲಿಯತ್ತು

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನೋರಂಜನ್‌ ಹಾಗೂ ನಟಿ ಕೀರ್ತಿ ಕಲ್ಕೇರೆ ಅವರ ‘ವಿವಾಹ ಆಹ್ವಾನʼ ಪತ್ರಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲು ಸಖತ್‌ ವೈರಲ್‌ ಆಗಿದೆ. ಇದನ್ನು ನೋಡಿದವರು ರವಿಚಂದ್ರನ್‌ ತಮ್ಮ ಮಗನ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾರಾ ಎಂದು ಯೋಚಿಸುತ್ತಿದ್ದಾರೆ. 

Written by - Chetana Devarmani | Last Updated : May 4, 2022, 04:48 PM IST
  • ರವಿಚಂದ್ರನ್‌ ಪುತ್ರನ ʻವಿವಾಹ ಆಹ್ವಾನʼ ಪತ್ರಿಕೆ
  • ಇಲ್ಲಿದೆ ವೈರಲ್ ಫೋಟೋದ ಅಸಲಿಯತ್ತು
  • ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನೋರಂಜನ್‌
ರವಿಚಂದ್ರನ್‌ ಪುತ್ರನ ʻವಿವಾಹ ಆಹ್ವಾನʼ ಪತ್ರಿಕೆ! ಇಲ್ಲಿದೆ ವೈರಲ್ ಫೋಟೋದ ಅಸಲಿಯತ್ತು  title=
ಮನೋರಂಜನ್‌

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನೋರಂಜನ್‌ ಹಾಗೂ ನಟಿ ಕೀರ್ತಿ ಕಲ್ಕೇರೆ ಅವರ ‘ವಿವಾಹ ಆಹ್ವಾನʼ ಪತ್ರಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲು ಸಖತ್‌ ವೈರಲ್‌ ಆಗಿದೆ. ಇದನ್ನು ನೋಡಿದವರು ರವಿಚಂದ್ರನ್‌ ತಮ್ಮ ಮಗನ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾರಾ ಎಂದು ಯೋಚಿಸುತ್ತಿದ್ದಾರೆ. ಮನೋರಂಜನ್‌ ಹಾಗೂ ನಟಿ ಕೀರ್ತಿ ಅಭಿನಯಿಸಿರುವ ‘ಪ್ರಾರಂಭʼ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರ ಬಿಡುಗಡೆಯ ಆಹ್ವಾನ ಪತ್ರಿಕೆಯನ್ನು ‘ಮದುವೆ ಆಮಂತ್ರಣʼ ಪತ್ರಿಕೆ ಮಾದರಿಯಲ್ಲಿ  ಚಿತ್ರತಂಡವು ಬಿಡುಗಡೆ ಮಾಡಿದೆ. ಇದು ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ಇದು ನಾನ್‌ಸೆನ್ಸ್.. ಪ್ಯಾನ್ ಇಂಡಿಯಾ ಪದದ ಬಗ್ಗೆ ನಟ ಸಿದ್ಧಾರ್ಥ್ ಹೇಳಿದ್ದೇನು?

ಮದುವೆ ಪತ್ರಿಕೆಯ ಮಾದರಿಯಲ್ಲೇ ‘ಚಿತ್ರಮಂದಿರಕ್ಕೆ ಆಹ್ವಾನʼ ಪತ್ರಿಕೆಯನ್ನು ಸಿದ್ದಪಡಿಸಿರುವುದು ಎಲ್ಲರ ಗಮನ ಸೆಳೆದಿದೆ. ವಧು, ವರರ ಹೆಸರಿರುವ ಸ್ಥಳದಲ್ಲಿ ಮನೋರಂಜನ್‌ ಹಾಗೂ ನಟಿ ಕೀರ್ತಿಯ ಹೆಸರನ್ನು ಮುದ್ರಿಸಲಾಗಿದ್ದು, ನೋಡಲು ದಿಟ್ಟೋ‘ಮದುವೆಯ ಕರೆಯೋಲೆʼ ರೀತಿಯಲ್ಲಿ ಇರುವುದು ವಿಶೇಷವಾಗಿದೆ. 

 

 

ರವಿಚಂದ್ರನ್‌ ಅಶೀರ್ವಾದದೊಂದಿಗೆ ಎಂಬ ಸಾಲನ್ನು ‘ಚಿತ್ರಮಂದಿರಕ್ಕೆ ಆಹ್ವಾನʼ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಹಾಗೇ ನಟ, ನಟಿಯ ಪೋಷಕರ ಹೆಸರುಗಳನ್ನು ಸಹ ಇದರಲ್ಲಿ ಹಾಕಲಾಗಿದೆ. ಚಿತ್ರತಂಡದ ಈ ವಿಭಿನ್ನ ಪ್ರಯತ್ನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಚಿತ್ರತಂಡ ಪ್ರೇಕ್ಷಕರ ಮನಗೆದ್ದಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. 

ಇದನ್ನೂ ಓದಿ:  ಬಾಹುಬಲಿ 2 ಚಿತ್ರಕ್ಕೂ ಸಾಧ್ಯವಾಗದ ಹೊಸ ದಾಖಲೆ ನಿರ್ಮಿಸಿದ ಕೆಜಿಎಫ್ 2..!

ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಜಗದೀಶ್ ಕಲ್ಯಾಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರವಿ ವಡ್ಡೇರಹಳ್ಳಿ ಈ ಚಿತ್ರದ ಸಹ ನಿರ್ಮಾಪಕು. ಪ್ರಜ್ವಲ್ ಪೈ ಸಂಗೀತ ನಿರ್ದೇಶನ, ಸುರೇಶ್ ಬಾಬು ಛಾಯಾಗ್ರಹಣ, ವಿಜಯ್ ಸಂಕಲನ ಹಾಗೂ ಥ್ರಿಲ್ಲರ್ ‌ಮಂಜು, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ‘ಪ್ರಾರಂಭ’ ಚಿತ್ರ ಮೇ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News