25ರ ಹರೆಯದ ನಟಿಯ ಹಿಂಬದಿ ಜೇಬಿನಲ್ಲಿ ಕೈಯಿಟ್ಟ 56 ವರ್ಷದ ನಟ..! ವಿಡಿಯೋ ವೈರಲ್‌

Mister Bachchan video song : ಇತ್ತೀಚಿಗೆ ಬಿಡುಗಡೆಯಾದ ಮಿಸ್ಟರ್‌ ಬಚ್ಚನ್‌ ಚಿತ್ರದ ಲಿರಿಕಲ್‌ ಸಾಂಗ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಹಾಡಿನಲ್ಲಿ ನಟಿಯ ಹಿಂಬಾಗ ಜೇಬಿನಲ್ಲಿ ನಟ ಕೈಯಿಟ್ಟ ಸೀನ್‌ ಅಂತೂ.. ಹಾಟ್‌ ಟಾಪಿಕ್‌ ಆಗಿದೆ.. ಈ ಕುರಿತು ಇಂಟ್ರಸ್ಟಿಂಗ್‌ ಮ್ಯಾಟರ್‌ ಇಲ್ಲಿದೆ..

Written by - Krishna N K | Last Updated : Jul 11, 2024, 04:26 PM IST
    • ಮಿಸ್ಟರ್‌ ಬಚ್ಚನ್‌ ಚಿತ್ರದ ಲಿರಿಕಲ್‌ ಸಾಂಗ್‌ ವೈರಲ್‌
    • ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ ಸಾಂಗ್‌
    • ರವಿತೇಜ್‌ ಭಾಗ್ಯಶ್ರೀ ನಟನೆಯ ಮುಂಬರುವ ಸಿನಿಮಾ
25ರ ಹರೆಯದ ನಟಿಯ ಹಿಂಬದಿ ಜೇಬಿನಲ್ಲಿ ಕೈಯಿಟ್ಟ 56 ವರ್ಷದ ನಟ..! ವಿಡಿಯೋ ವೈರಲ್‌ title=
Ravitej

Ravi Teja Bhagyashri : ಮಿಸ್ಟರ್‌ ಬಚ್ಚನ್‌ ಸಿನಿಮಾ ಹಾಡಿನಲ್ಲಿ ರವಿತೇಜ ಮತ್ತು ಭಾಗ್ಯಶ್ರೀ ಅವರ ಕೆಮಿಸ್ಟ್ರಿ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ ಭಾಗ್ಯಶ್ರೀ ಡ್ರೆಸ್ ಹಿಂಬದಿಯ ಜೇಬಿನಲ್ಲಿ ಕೈ ಹಾಕಿ ರವಿತೇಜ ಮಾಡುವ ಡ್ಯಾನ್ಸ್ ನೆಟ್ಟಿಗರ ಗಮನ ಸೆಳೆಯುತ್ತಿದೆ.. ಟೈಗರ್ ನಾಗೇಶ್ವರ್ ರಾವ್ ನಂತರ ಟಾಲಿವುಡ್ ಮಾಸ್ ಮಹಾರಾಜ್ ರವಿತೇಜ ನಟಿಸುತ್ತಿರುವ ಸಿನಿಮಾ ಮಿಸ್ಟರ್ ಬಚ್ಚನ್.

ಹರೀಶ್ ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿತೇಜ ಅಭಿನಯದ ಮಿಸ್ಟರ್ ಬಚ್ಚನ್ ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಇದೇ ವೇಳೆ ಈ ಸಿನಿಮಾದ ಪ್ರಚಾರಕ್ಕೆ ಚಾಲನೆ ನೀಡಿರುವ ಹರೀಶ್ ಶಂಕರ್, ಇತ್ತೀಚೆಗಷ್ಟೇ ಈ ಚಿತ್ರಕ್ಕೆ ಸಂಬಂಧಿಸಿದ ಪವರ್ ಫುಲ್ ಟೀಸರ್ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ಈ ರೀತಿ ಮಾಡೋಕೆ ಈ ನಟಿ ಪಡೆಯುವ ಸಂಭಾವನೆ ಎಷ್ಟು ಗೊತ್ತೆ..? ತಿಳಿದ್ರೆ ಎದೆ ನಡುಗುತ್ತೆ..!

ಅಲ್ಲದೆ, ಈ ಚಿತ್ರದ ಮೊದಲ ಲಿರಿಕಲ್ ಸಾಂಗ್ ಸಹ ಬಿಡುಗಡೆಯಾಗಿದೆ. ಕೆಲವು ದಿನಗಳ ಹಿಂದೆ ರಿಲೀಸ್‌ ಆದ ಈ ಹಾಡಿನ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಾಯಕಿಯ ಗ್ಲಾಮರ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಸಾಂಗ್ ನಲ್ಲಿ ಭಾಗ್ಯಶ್ರೀ ಬೊರಸೆ ಅವರ ಗ್ಲಾಮರ್‌ ನೋಡಿ ಸಿನಿ ಫ್ಯಾನ್ಸ್‌ ಥ್ರಿಲ್ ಆಗಿದ್ದಾರೆ. ಮಿಕ್ಕಿ ಜೆ ಮೇಯರ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. 

ಈ ಹಾಡಿನಲ್ಲಿ ರವಿತೇಜ ಮತ್ತು ಭಾಗ್ಯಶ್ರೀ ಅವರ ಕೆಮಿಸ್ಟ್ರಿ ಎಲ್ಲರ ಗಮನ ಸೆಳೆದಿತ್ತು. ಇಬ್ಬರೂ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅದರಲ್ಲೂ ಭಾಗ್ಯಶ್ರೀ ಬೊರಸೆ ಅವರ ಹಿಂಬದಿಯ ಜೇಬಿನಲ್ಲಿ ಕೈ ಹಾಕಿ ರವಿತೇಜ್‌ ಡಾನ್ಸ್‌ ಮಾಡಿರುವ ದೃಶ್ಯ ಹಾಟ್ ಟಾಪಿಕ್ ಆಗಿಬಿಟ್ಟಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News