ಮುಂದಿನ ವರ್ಷ ಈ ದಿನಾಂಕದಂದು ಸಪ್ತಪದಿ ತುಳಿಯಲಿರುವ ರಣಬೀರ್ - ಆಲಿಯಾ ಭಟ್

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಊಹಾಪೋಹಗಳು ಎದ್ದಿದ್ದವು. ವರ್ಷಾಂತ್ಯದ ವೇಳೆಗೆ ಇಬ್ಬರೂ ವಿವಾಹ ಬಂಧನಕ್ಕೆ ಒಳಗಾಗುತ್ತಾರೆ ಎಂದು ಹೇಳಲಾಗುತ್ತಿದೆ. 

Written by - Ranjitha R K | Last Updated : Nov 9, 2021, 02:27 PM IST
  • ರಣಬೀರ್ ಆಲಿಯಾ ಮದುವೆ
  • ಮುಂದಿನ ವರ್ಷ ಮದುವೆಯಾಗಲಿರುವ ರಣಬೀರ್ ಆಲಿಯಾ
  • ಬ್ಯುಸಿ ಶೆಡ್ಯೂಲ್‌ನಿಂದಾಗಿ ಮದುವೆಯ ದಿನಾಂಕ ಮುಂದಿನ ವರ್ಷಕ್ಕೆ ಮುಂದೂಡಿಕೆ
ಮುಂದಿನ ವರ್ಷ ಈ ದಿನಾಂಕದಂದು ಸಪ್ತಪದಿ ತುಳಿಯಲಿರುವ ರಣಬೀರ್ - ಆಲಿಯಾ ಭಟ್  title=
ರಣಬೀರ್ ಆಲಿಯಾ ಮದುವೆ (file photo)

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಮದುವೆಗಳ (Bollywood maariage) ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಾಜ್‌ಕುಮಾರ್‌ ರಾವ್‌ ಮತ್ತು ಪತ್ರಲೇಖಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೌಶಲ್‌ ಕುಟುಂಬದಲ್ಲಿಯೂ ಶೀಘ್ರವೇ ಮಂಗಳ ವಾದ್ಯ ಮೊಳಗಲಿದೆ ಎನ್ನುವ ಮಾತು ಕೂಡಾ ಕೇಳಿಬರುತ್ತಿದೆ. ಆದರೆ ಬಾಲಿವುಡ್ ನ ಫೆವರಿಟ್ ಜೋಡಿ ರಣಬೀರ್ ಮತ್ತು ಆಲಿಯಾ ಮದುವೆ (Ranbir Alia Marriage) ಮುಂದಿನ ವರ್ಷ ನಡೆಯಲಿದೆ ಎನ್ನಲಾಗಿದೆ. 

ಮುಂದಿನ ವರ್ಷ ರಣಬೀರ್ - ಆಲಿಯಾ ವಿವಾಹ :
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Alia Bhatt) ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಊಹಾಪೋಹಗಳು ಎದ್ದಿದ್ದವು. ವರ್ಷಾಂತ್ಯದ ವೇಳೆಗೆ ಇಬ್ಬರೂ ವಿವಾಹ ಬಂಧನಕ್ಕೆ ಒಳಗಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈಗ ಇಬ್ಬರೂ ಮದುವೆಯ ದಿನಾಂಕವನ್ನು ಮುಂದಕ್ಕೆ ಹಾಕಿದ್ದಾರೆ. ಮುಂದಿನ ವರ್ಷ ಸಪ್ತಪದಿ ತುಳಿಯುವ ಬಗ್ಗೆ  ಯೋಚಿಸುತ್ತಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ : ಜೈಲಿನಿಂದ ಹೊರ ಬಂದ ನಂತರ ಮೊದಲ ಬಾರಿಗೆ ಪತ್ನಿ shilpa shetty ಜೊತೆ ಕ್ಯಾಮರಾ ಕಣ್ಣಿಗೆ ಬಿದ್ದ ರಾಜ್ ಕುಂದ್ರಾ

ವೈರಲ್ ಭಯಾನಿ ಪೋಸ್ಟ್ :
ವೈರಲ್ ಭಯಾನಿ ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ ರಣಬೀರ್ ಮತ್ತು ಆಲಿಯಾ ವಿವಾಹವನ್ನು (Ranbir Alia Marriage) ಏಪ್ರಿಲ್ 2022ಕ್ಕೆ ಮುಂದಕ್ಕೆ ಹಾಕಲಾಗಿದೆ ಎಂದು ಬರೆದಿದ್ದಾರೆ. ಈ ವರ್ಷದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಲ್ಲ, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ (katrina Kaif) ವಿವಾಹ. ಬ್ಯುಸಿ ಶೆಡ್ಯೂಲ್‌ನಿಂದಾಗಿ ಅವರ ಮದುವೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. 

 

ಆಲಿಯಾ ರಣಬೀರ್ ಸಿನಿಮಾ :
ಸೋನಮ್ ಕಪೂರ್ (Sonam Kapoor) ಅವರ ಮದುವೆಯ ಆರತಕ್ಷತೆಯಲ್ಲಿ ಒಟ್ಟಿಗೆ ಬಂದ ನಂತರ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಇಬ್ಬರೂ ಸುಮಾರು ಎರಡು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇಬ್ಬರ ಕೆಲಸದ ಬಗ್ಗೆ ಹೇಳುವುದಾದರೆ, ಈ ಜೋಡಿಯು 'ಬ್ರಹ್ಮಾಸ್ತ್ರ'ದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದೆ. ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದೆ. ಸಿನೆಮಾದಲ್ಲಿ (Cinema) ಅಮಿತಾಬ್ ಬಚ್ಚನ್ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : Janhvi Kapoor: ಸಹೋದರಿಯೊಂದಿಗೆ ಜಾಹ್ನವಿ ಕಪೂರ್ ಹಾಟ್ ಪೋಸ್, ನೆಟಿಜನ್‌ಗಳಿಂದ ಟ್ರೋಲ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News