Acharya: ಆಚಾರ್ಯ ಚಿತ್ರದಲ್ಲಿ ತಮ್ಮ ಹಾಗೂ ಚಿರಂಜೀವಿ ಪಾತ್ರ ಬಹಿರಂಗಪಡಿಸಿದ ರಾಮ್ ಚರಣ್!

Ram Charan and Chiranjeevi in Acharya: RRR ಬಿಡುಗಡೆಯ ಮೊದಲು, ಸಂದರ್ಶನವೊಂದರಲ್ಲಿ ನಟ ರಾಮ್ ಚರಣ್ ತಮ್ಮ ಮತ್ತು ತಂದೆ ಚಿರಂಜೀವಿ ಅವರ ಪಾತ್ರಗಳ ಬಗ್ಗೆ ಬಿಚ್ಚಿಟ್ಟಿದ್ದಾರೆ. 

Edited by - Chetana Devarmani | Last Updated : Jan 10, 2022, 10:32 AM IST
  • ಆಚಾರ್ಯ ಚಿತ್ರದಲ್ಲಿ ತಮ್ಮ ಹಾಗೂ ಚಿರಂಜೀವಿ ಪಾತ್ರ ಬಹಿರಂಗಪಡಿಸಿದ ರಾಮ್ ಚರಣ್
  • ಸಂದರ್ಶನವೊಂದರಲ್ಲಿ ನಟ ರಾಮ್ ಚರಣ್ ಮಾತು
Acharya: ಆಚಾರ್ಯ ಚಿತ್ರದಲ್ಲಿ ತಮ್ಮ ಹಾಗೂ ಚಿರಂಜೀವಿ ಪಾತ್ರ ಬಹಿರಂಗಪಡಿಸಿದ ರಾಮ್ ಚರಣ್!  title=
ಆಚಾರ್ಯ

ನವದೆಹಲಿ: ರಾಮ್ ಚರಣ್ (Ram Charan) ಅವರ ಮುಂದಿನ ಚಿತ್ರ ಆಚಾರ್ಯ (Acharya), ಈಗಾಗಲೇ ಹವಾ ಸೃಷ್ಟಿ ಮಾಡಿದೆ. ಏಕೆಂದರೆ ಅವರು ಮೊದಲ ಬಾರಿಗೆ ತಮ್ಮ ತಂದೆ ಸೂಪರ್ ಸ್ಟಾರ್ ಚಿರಂಜೀವಿ (Chiranjeevi) ಅವರೊಂದಿಗೆ ನಟಿಸಿದ್ದಾರೆ. 

ಇವರ ಮತ್ತೊಂದು ಬಹುನಿರೀಕ್ಷಿತ RRR ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ರಾಜಮೌಳಿ ನಿರ್ದೇಶಿಸಿದ್ದಾರೆ. ಜೂನಿಯರ್ NTR, ರಾಮ್ ಚರಣ್, ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೋವಿಡ್-19  ಕಾರಣದಿಂದ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಇತ್ತೀಚೆಗೆ ಮುಂದೂಡಲಾಯಿತು.

ಸಂದರ್ಶನವೊಂದರಲ್ಲಿ ರಾಮ್ ಚರಣ್ ಆಚಾರ್ಯ ಚಿತ್ರದಲ್ಲಿ ತಮ್ಮ ಮತ್ತು ತಂದೆ ಚಿರಂಜೀವಿ ಅವರ ಪಾತ್ರಗಳ ಬಗ್ಗೆ ಮಾತನಾಡಿದ್ದಾರೆ.  

"ಇದು ನನ್ನ ನಿರ್ಧಾರವಲ್ಲ. ಹೌದು, ನಾನು ಅದರಲ್ಲಿ ಒಂದು ಭಾಗ ನಿರ್ಮಾಪಕ, ಆದರೆ, ಆರಂಭದಲ್ಲಿ, ನಾವು ಅನೇಕ ಆಯ್ಕೆಗಳನ್ನು ಹೊಂದಿದ್ದೇವೆ. ಸಹಜವಾಗಿ ಕುಟುಂಬದ ಹೊರಗಿನವರಂತೆ ಮತ್ತು ನಾವು (ಅವರು ಮತ್ತು ಚಿರಂಜೀವಿ) ನಕ್ಸಲರ ಪಾತ್ರದಲ್ಲಿ ಕಾನಿಸಿಕೊಂಡಿದ್ದೇವೆ." ಎಂದು ಹೇಳಿದ್ದಾರೆ. 

"ಆದಾಗ್ಯೂ, ನಿರ್ದೇಶಕ ಕೊರಟಾಲ ಶಿವ ಸರ್ ನಿರ್ಧರಿಸಿದ್ದರು, ಒಂದು ದಿನ, ನನಗೆ ಕರೆ ಮಾಡಿ, 'ನೀವು RRR ನಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದು ನನಗೆ ತಿಳಿದಿದೆ, ನಾವು ರಾಜಮೌಳಿ ಅವರನ್ನು ಕೇಳಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಆದರೆ ಸ್ಕ್ರಿಪ್ಟ್ ವಿಷಯದಲ್ಲಿ ನಾನು ನಿಮ್ಮನ್ನು ಮೀರಿ ಯೋಚಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸ್ಕ್ರಿಪ್ಟ್ ಡಿಮ್ಯಾಂಡ್ ಮಾಡಿತ್ತು. ನಾವಿಬ್ಬರೂ (ಚಿರಂಜೀವಿ ಮತ್ತು ರಾಮ್ ಚರಣ್) ಬನ್ನಿ, ಒಟ್ಟಿಗೆ ಸಿನಿಮಾ ಮಾಡೋಣ." ಎಂದರು ಅಂತ ಹೇಳಿದ್ದಾರೆ.

"ರಾಜಮೌಳಿ ಸರ್ ಆಚಾರ್ಯ ಚಿತ್ರಕ್ಕಾಗಿ RRR ಸೆಟ್‌ಗಳಿಂದ ಸಮಯವನ್ನು ನೀಡಿದರು. ಅದು ಬಹಳಷ್ಟು ಅರ್ಥವನ್ನು ನೀಡುತ್ತದೆ" ಎಂದು ರಾಮ್ ಚರಣ್ ಹೇಳಿದ್ದಾರೆ. 

ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಗೆ ಕೋವಿಡ್ ದೃಢ.. ಆಸ್ಪತ್ರೆಗೆ ದಾಖಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News