ಅಪಘಾತದಲ್ಲಿ ನಟ ರಾಮ್ ಚರಣ್‌ ಮುಖಕ್ಕೆ ಗಾಯ...! ʼಗೇಮ್ ಚೇಂಜರ್ʼ ಶೂಟಿಂಗ್ ಮುಂದೂಡಿಕೆ

Ram Charan injury : ಪ್ಯಾನ್‌ ವರ್ಲ್ಡ್‌ ಸ್ಟಾರ್‌ ರಾಮ್ ಚರಣ್ ಅವರ ಬಹುನಿರೀಕ್ಷಿತ ಸಿನಿಮಾ ಗೇಮ್ ಚೇಂಜರ್. ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಶೂಟಿಂಗ್ ಮುಂದೂಡಲಾಗಿದೆ. ಈ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ ನೋಡಿ..

Written by - Krishna N K | Last Updated : Sep 25, 2023, 05:57 PM IST
  • ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ಗೇಮ್ ಚೇಂಜರ್.
  • ಶಂಕರ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಶೂಟಿಂಗ್ ಮುಂದೂಡಲಾಗಿದೆ.
  • ಗೇಮ್‌ ಚೇಂಜರ್‌ ಶೂಟಿಂಗ್ ನಿಲ್ಲಿಸಲು ನಿಜವಾದ ಕಾರಣ ಸಧ್ಯ ತಿಳಿದು ಬಂದಿದೆ.
ಅಪಘಾತದಲ್ಲಿ ನಟ ರಾಮ್ ಚರಣ್‌ ಮುಖಕ್ಕೆ ಗಾಯ...! ʼಗೇಮ್ ಚೇಂಜರ್ʼ ಶೂಟಿಂಗ್ ಮುಂದೂಡಿಕೆ title=

Game changer Movie : ಮೆಗಾ ಪವರ್ ಸ್ಟಾರ್ ರಾಮ್ ಚರಣ್-ಸ್ಟಾರ್ ಡೈರೆಕ್ಟರ್ ಶಂಕರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್'. ಇತ್ತೀಚೆಗಷ್ಟೇ ಈ ಸಿನಿಮಾದ ಶೂಟಿಂಗ್ ನಿಲ್ಲಿಸಲಾಗಿದೆ ಎನ್ನುವ ಮಾತು ಹೇಳಿ ಬಂದಿತ್ತು. ನಿರ್ಮಾಣ ಸಂಸ್ಥೆ ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಟ್ವಿಟರ್ ಮೂಲಕ ಸೆಪ್ಟೆಂಬರ್ ಶೆಡ್ಯೂಲ್ ಅನ್ನು ರದ್ದುಗೊಳಿಸುತ್ತಿರುವಾದಿ ಮಾಹಿತಿ ನೀಡಿತ್ತು. ಕೆಲವು ನಟರು ಲಭ್ಯವಿಲ್ಲದ ಕಾರಣ, ಚಿತ್ರೀಕರಣವನ್ನು ಮುಂದೂಡಬೇಕಾಯಿತು. ಅಕ್ಟೋಬರ್ ಎರಡನೇ ವಾರದಿಂದ ಚಿತ್ರೀಕರಣವನ್ನು ಪುನರಾರಂಭಿಸುವುದಾಗಿ ನಿರ್ಮಾಣ ಸಂಸ್ಥೆ ಘೋಷಿಸಿತು. ಆದರೆ ಶೂಟಿಂಗ್ ನಿಲ್ಲಿಸಲು ನಿಜವಾದ ಕಾರಣ ಬೇರೆ ಇದೆ. 

ಹೌದು.. ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ರಾಮಚರಣ್ ಅವರ ಮುಖಕ್ಕೆ ಹಾನಿಯಾಗಿದೆ. ಗಾಯ ಚಿಕ್ಕದಾಗಿದ್ದರೂ ಹತ್ತು ದಿನಗಳ ಕಾಲ ವಿಶ್ರಾಂತಿ ಬೇಕು ಅಂತ ವೈದ್ಯರು ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ಗೇಮ್‌ ಚೇಂಜರ್‌ ಶೂಟಿಂಗ್‌ ಶೆಡ್ಯೂಲ್‌ ಅನ್ನು ಮುಂದೂಡಲಾಗಿದೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿರುವ ರಾಮಚರಣ್ ಅಕ್ಟೋಬರ್ 6 ರಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. 

ಇದನ್ನೂ ಓದಿ : ಕೆಂಬಣ್ಣದ ಹೊಳಪಲ್ಲಿ ಮಿಂಚಿದ ಅನುಪಮಾ ಗೌಡ: ಫೋಟೋಸ್ ವೈರಲ್

ಸದ್ಯ ಡೈರೆಕ್ಟರ್‌ ಶಂಕರ್ ಈ ಸಿನಿಮಾದಲ್ಲಿ ಅದ್ಧೂರಿ ಸಾಹಸ ದೃಶ್ಯಗಳನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಕೆಜಿಎಫ್ ಖ್ಯಾತಿಯ ಅನ್ಬು ಅರಿವು ಇದನ್ನು ನಿರ್ದೇಶಿಸಲಿದ್ದಾರೆ. ಪೊಲಿಟಿಕಲ್ ಆ್ಯಕ್ಷನ್ ಎಂಟರ್ ಟೈನರ್ ಆಗಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ರಾಮ್ ಚರಣ್‌ಗೆ ಜೊತೆಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ದಿಲ್ ರಾಜ್ ರು.200 ​​ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ಶ್ರೀಕಾಂತ್, ಸುನೀಲ್, ಅಂಜಲಿ, ಎಸ್.ಜೆ.ಸೂರ್ಯ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ತಮನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News