ಅಣ್ಣಾವ್ರ ʼಗಂಧದಗುಡಿʼ ಎಂಟ್ರಿಗೆ ನಡುಗಿತ್ತು ಭಾರತೀಯ ಚಿತ್ರರಂಗ..!

ಸದ್ಯ ಎಲ್ಲಾ ಕನ್ನಡಿಗರು ನೋಡಲೇಬೇಕು ಎಂದು ಕುತೂಹಲದಿಂದ ಕಾಯುತ್ತಿರುವ ಸಿನಿಮಾ ಅಂದ್ರೆ ಪುನೀತ್‌ ರಾಜ್‌ಕುಮಾರ್‌ ಅವರ ʼಗಂಧದಗುಡಿʼ. ಬಿಡುಗಡೆಗೂ ಮುನ್ನವೇ ಅಪ್ಪು ಕನಸಿನ ಕೂಸಿಗೆ ಭಾರತದಾದ್ಯಂತ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ಅದರಂತೆ ನಟಸಾರ್ವಭೌಮ ಡಾ. ರಾಜ್‌ಕುಮಾರ್‌ ಅವರ ಗಂಧದಗುಡಿ ಸಿನಿಮಾ ಕೂಡಾ ಅಂದಿನ ಕಾಲದಲ್ಲಿಯೇ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿತ್ತು. ಅಲ್ಲದೆ, ಸಿನಿರಂಗದ ದಿಗ್ಗಜರ ನಿದ್ದೆ ಕೆಡುವಂತೆ ಮಾಡಿತ್ತು.

Written by - Krishna N K | Last Updated : Oct 26, 2022, 06:11 PM IST
  • ಅಣ್ಣಾವ್ರ ʼಗಂಧದಗುಡಿʼ ಎಂಟ್ರಿಗೆ ನಡುಗಿತ್ತು ಭಾರತೀಯ ಚಿತ್ರರಂಗ
  • ಗಂಧದಗುಡಿ ಸಿನಿಮಾ ಬಿಡುಗಡೆಯಾಗಿ ಸುಮಾರು 50 ವರ್ಷಗಳೇ ಕಳೆದಿವೆ
  • ಸಿನಿಮಾದ ಮೇಲಿನ ಕ್ರೇಜ್‌ ಮಾತ್ರ ಇದುವರೆಗೂ ಕಡಿಮೆಯಾಗಿಲ್ಲ
ಅಣ್ಣಾವ್ರ ʼಗಂಧದಗುಡಿʼ ಎಂಟ್ರಿಗೆ ನಡುಗಿತ್ತು ಭಾರತೀಯ ಚಿತ್ರರಂಗ..! title=

ಬೆಂಗಳೂರು : ಸದ್ಯ ಎಲ್ಲಾ ಕನ್ನಡಿಗರು ನೋಡಲೇಬೇಕು ಎಂದು ಕುತೂಹಲದಿಂದ ಕಾಯುತ್ತಿರುವ ಸಿನಿಮಾ ಅಂದ್ರೆ ಪುನೀತ್‌ ರಾಜ್‌ಕುಮಾರ್‌ ಅವರ ʼಗಂಧದಗುಡಿʼ. ಬಿಡುಗಡೆಗೂ ಮುನ್ನವೇ ಅಪ್ಪು ಕನಸಿನ ಕೂಸಿಗೆ ಭಾರತದಾದ್ಯಂತ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ಅದರಂತೆ ನಟಸಾರ್ವಭೌಮ ಡಾ. ರಾಜ್‌ಕುಮಾರ್‌ ಅವರ ಗಂಧದಗುಡಿ ಸಿನಿಮಾ ಕೂಡಾ ಅಂದಿನ ಕಾಲದಲ್ಲಿಯೇ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿತ್ತು. ಅಲ್ಲದೆ, ಸಿನಿರಂಗದ ದಿಗ್ಗಜರ ನಿದ್ದೆ ಕೆಡುವಂತೆ ಮಾಡಿತ್ತು.

ಹೌದು.. ಗಂಧದಗುಡಿ ಸಿನಿಮಾ ಬಿಡುಗಡೆಯಾಗಿ ಸುಮಾರು 50 ವರ್ಷಗಳೇ ಕಳೆದಿವೆ. ಅದ್ರೂ ಸಿನಿಮಾದ ಮೇಲಿನ ಕ್ರೇಜ್‌ ಮಾತ್ರ ಇದುವರೆಗೂ ಕಡಿಮೆಯಾಗಿಲ್ಲ. ನಾವಾಡುವ ನುಡಿಯೇ ಗಂಧದಗುಡಿ ಎನ್ನುವ ಹಾಡು.. ಅದೇಷ್ಟೋ ಯುಗ ಯುಗಳು ಕಳೆದರೂ ಜನಮಾನಸದಿಂದ ಮಾತ್ರ ದೂರವಾಗುವ ಮಾತೇ ಇಲ್ಲ. ಅಷ್ಟು ಇಷ್ಟ ಈ ಹಾಡು ಅಂದ್ರೆ. ಡಾ. ರಾಜ್‌ಕುಮಾರ್‌ ಅವರ ಅಭಿನಯ, ಅದ್ಭುತ ಕಥೆ, ಅಂದಿನ ಕಾಲದಲ್ಲೇ ಕಾಡಿನ ಸುಂದರ ದೃಶ್ಯಗಳನ್ನು ಬಲು ಸೊಗಸಾಗಿ ಸೆರೆ ಹಿಡಿಯಲಾಗಿತ್ತು. ಅವತ್ತಿನ ಕಾಲಕ್ಕೆ ಗಂಧದಗುಡಿ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಒಂದಾಗಿತ್ತು.

ಇದನ್ನೂ ಓದಿ: Urfi Javed in legal trouble : ಮನಸೋ ಇಚ್ಛೆ ಬಟ್ಟೆ ಧರಿಸುವ ಉರ್ಫಿ ಜಾವೇದ್​ ಮೇಲೆ ಬಿತ್ತು ಕೇಸ್

ಡಾ. ರಾಜ್‌ಕುಮಾರ್‌ ಅವರ 150ನೇ ಸಿನಿಮಾ ಗಂಧದಗುಡಿ ರಾಜ್‌ ಬದುಕಿನ ಬಹುದೊಡ್ಡ ಮೈಲಿಗಲ್ಲು. ಕಾಡನ್ನು ಸಂರಕ್ಷಿಸುವ ಹಾಗೂ ಕಾಡು ಪ್ರಾಣಿಗಳನ್ನು ಉಳಿಸುವ ಉತ್ತಮ ಸಂದೇಶ ಹೊತ್ತಿದ್ದ ಸಿನಿಮಾ ದೇಶಾದ್ಯಂತ ಜನರ ಗಮನ ಸೆಳೆದಿತ್ತು. ಅಲ್ಲದೆ, ಗಂಧದಗುಡಿ ಹವಾ ಎಷ್ಟಿತ್ತು ಅಂದ್ರೆ ತಮಿಳು, ತೆಲುಗು, ಹಿಂದಿ ಚಿತ್ರರಂಗ ಅಣ್ಣಾವ್ರ ಗಂಧದಗುಡಿ ಎಂಟ್ರಿಗೆ ಶಾಕ್‌ಗೆ ಒಳಗಾಗಿತ್ತು. ಎಲ್ಲಿನೋಡಿದರೂ ಗಂಧದಗುಡಿಯದ್ದೇ ಸುದ್ದಿ. ಅಷ್ಟು ಸೌಂಡ್‌ ಮಾಡಿತ್ತು. ಕನ್ನಡ ಕಂಠೀರವ ಮುತ್ತುರಾಜ್‌ ಸಿನಿಮಾ. ಇನ್ನು ಈ ಚಿತ್ರಕ್ಕೆ ಅವರಿಗೆ 44 ಸಾವಿರ ರೂ. ಸಂಭಾವನೆ ಸಿಕ್ಕಿತ್ತು ಎನ್ನಲಾಗಿದೆ. ಸದ್ಯ ಅಪ್ಪು ʼಗಂಧದಗುಡಿʼ ಬಿಡುಗಡೆಗೆ ಸಿದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News