Chiranjeevi: ಚಲನಚಿತ್ರ ನಿರ್ಮಾಣದ ಹಂತಗಳೆಲ್ಲವೂ ಯಾವಾಗಲೂ ನಾಯಕನ ಸುತ್ತ ಸುತ್ತುತ್ತದೆ. ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಅದು ಆ್ಯಕ್ಷನ್ ಅಥವಾ ರೊಮ್ಯಾಂಟಿಕ್ ಸಿನಿಮಾ ಆಗಿರಲಿ ಆ ಸಿನಿಮಾದ ನಟನ ಹೆಸರನ್ನು ಬಳಸಿ ಮಾರಾಟ ಮಾಡುತ್ತಾರೆ. ಭಾರತದಲ್ಲಿ ನಟರು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವುದಕ್ಕೆ ಇದು ಮುಖ್ಯ ಕಾರಣ.
ಭಾರತದ ದೊಡ್ಡ ಸೂಪರ್ಸ್ಟಾರ್ಗಳು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸುತ್ತಾರೆ. ಆದರೆ ಪ್ರತಿ ಚಿತ್ರಕ್ಕೆ ರೂ. 1 ಕೋಟಿ ಸಂಭಾವನೆ ಕನಸಿನಂತೆ ಕಾಣುತ್ತಿದ್ದ ಕಾಲವೊಂದಿತ್ತು.
ಇದನ್ನೂ ಓದಿ-ಆಕ್ಷನ್ ಫಿನ್ಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್.. ಹೊಂಬಾಳೆ ಪ್ರೊಡಕ್ಷನ್ನಲ್ಲಿ ಧ್ರುವ ಮುಂದಿನ ಸಿನಿಮಾ!
ಹೌದು, 1992 ರಲ್ಲಿ. ಅಮಿತಾಬ್ ಬಚ್ಚನ್ ಬಾಲಿವುಡ್ ನ ಸೂಪರ್ ಸ್ಟಾರ್ ಆಗಿದ್ದರು. ದಕ್ಷಿಣ ಭಾರತದಲ್ಲಿ ರಜನಿಕಾಂತ್ ಸೂಪರ್ ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ. ಆದರೆ, ಅಲ್ಲಿಯವರೆಗೆ ಇವರಿಬ್ಬರು ಚಿತ್ರವೊಂದಕ್ಕೆ 1 ಕೋಟಿ ಸಂಭಾವನೆ ಪಡೆದಿರಲಿಲ್ಲ.
ಆದರೆ ತೆಲುಗು ಚಿತ್ರರಂಗದಲ್ಲಿ ಪ್ರಥಮ ಬಾರಿಗೆ ನಾಯಕನೊಬ್ಬ 1 ಕೋಟಿ ಸಂಭಾವನೆ ಪಡೆದಿದ್ದನು. ಅವರು ಬೇರೆ ಯಾರೂ ಅಲ್ಲ ನಟ ಚಿರಂಜೀವಿ. ಆಪದ್ಬಾಂಧವಡು ಚಿತ್ರಕ್ಕಾಗಿ ಮೆಗಾಸ್ಟಾರ್ ಚಿರಂಜೀವಿ 1.25 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ. ಆ ವೇಳೆ ಅಮಿತಾಬ್ ಬಚ್ಚನ್ ಸುಮಾರು 90 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ.
2008 ರಲ್ಲಿ, ಚಿರಂಜೀವಿ ರಾಜಕೀಯದ ಮೇಲೆ ಕೇಂದ್ರೀಕರಿಸಲು ಚಲನಚಿತ್ರಗಳಿಂದ ನಿವೃತ್ತಿ ಘೋಷಿಸಿದರು. ಈ ಘೋಷಣೆ ಅವರ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿತ್ತು.. ಅದರಂತೆ ಸುಮಾರು ಒಂದು ದಶಕದ ಕಾಲ ನಟನೆಯಿಂದ ದೂರವೇ ಉಳಿದರು. ನಂತರ ಅವರು 2017 ರಲ್ಲಿ ಹಿಟ್ ಚಿತ್ರದೊಂದಿಗೆ ಪುನರಾಗಮನ ಮಾಡಿದರು. ಅಂದಿನಿಂದ ಅವರು ಅನೇಕ ಬ್ಲಾಕ್ಬಸ್ಟರ್ಗಳನ್ನು ನೀಡಿದ್ದಾರೆ.
ಇದನ್ನೂ ಓದಿ-ನನ್ನಮ್ಮ ಸೂಪರ್ ಸ್ಟಾರ್ ಸೀಸನ್-3: ಮತ್ತೆ ಬರ್ತಾಯಿದೆ ತಾಯಿ-ಮಕ್ಕಳ ಗೇಮ್ ಶೋ!
ಇನ್ನು 80 ಮತ್ತು 90 ರ ದಶಕದಲ್ಲಿ ಉತ್ತುಂಗದಲ್ಲಿದ್ದ ನಟ ಕಮಲ್ ಹಾಸನ್ ಅವರು 1994 ರಲ್ಲಿ ರೂ. 1 ಕೋಟಿ ಸಂಭಾವನೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ನಟ ರಜನಿ ಕೂಡ ಶೀಘ್ರದಲ್ಲೇ ರೂ. 1 ಕೋಟಿ ಸಂಭಾವನೆ ಅಮಿತಾಬ್ ಬಚ್ಚನ್ 1996 ರಲ್ಲಿ ಪ್ರತಿ ಚಿತ್ರಕ್ಕೆ ರೂ 1 ಕೋಟಿ ಗಳಿಸಲು ಪ್ರಾರಂಭಿಸಿದರು.
ಆಮೇಲೆ ಮುಂದಿನ ಕೆಲವು ವರ್ಷಗಳಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಕೂಡ ಬಾಲಿವುಡ್ನಲ್ಲಿ ಪ್ರತಿ ಚಿತ್ರಕ್ಕೆ 1 ಕೋಟಿ ರೂಪಾಯಿಗಳನ್ನು ಗಳಿಸಲು ಪ್ರಾರಂಭಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews