ಪರಿಣಿತಿ- ರಾಘವ್ ಚಡ್ಡಾ ಮದುವೆ ಡೇಟ್‌ ಫಿಕ್ಸ್‌ : ಉದಯಪುರದಲ್ಲಿ ಅದ್ಧೂರಿ ವಿವಾಹ

ಆಮ್ ಆದ್ಮಿ ಪಕ್ಷದ (AAP) ಸಂಸದ ರಾಘವ್ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಈ ತಿಂಗಳ ಕೊನೆಯಲ್ಲಿ ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಸೆಪ್ಟೆಂಬರ್ 17 ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ.

Written by - Krishna N K | Last Updated : Sep 6, 2023, 03:28 PM IST
  • ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಮದುವೆ.
  • ಸೆಪ್ಟೆಂಬರ್‌ 17 ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ.
  • ಸೆ.23 ಮತ್ತು 24 ರಂದು ಸ್ಟಾರ್‌ ಜೊಡಿ ಅದ್ಧೂರಿ ವಿವಾಹ ಜರುಗಲಿದೆ.
ಪರಿಣಿತಿ- ರಾಘವ್ ಚಡ್ಡಾ ಮದುವೆ ಡೇಟ್‌ ಫಿಕ್ಸ್‌ : ಉದಯಪುರದಲ್ಲಿ ಅದ್ಧೂರಿ ವಿವಾಹ title=

Raghav Chadha Parineeti Chopra marriage : ಬಾಲಿವುಡ್‌ ಖ್ಯಾತ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಸೆಪ್ಟೆಂಬರ್‌ 17 ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ ಎಂದು ತಿಳಿದು ಬಂದಿದೆ.

ಹೌದು.. ಆಮ್ ಆದ್ಮಿ ಪಕ್ಷದ (AAP) ಸಂಸದ ರಾಘವ್ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಈ ತಿಂಗಳ ಕೊನೆಯಲ್ಲಿ ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಸೆಪ್ಟೆಂಬರ್ 17 ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಸೆಪ್ಟೆಂಬರ್ 23 ಮತ್ತು 24 ರಂದು ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ವಿವಾಹ ಜರುಗಲಿದೆ.

ಇದನ್ನೂ ಓದಿ : ʼಶ್ರೀಕೃಷ್ಣ ಜನ್ಮಾಷ್ಟಮಿʼ ಪ್ರಯುಕ್ತ ಪ್ರೇಕ್ಷಕರಿಗೆ ʼಜೀ ಕನ್ನಡʼ ಬಿಗ್‌ ಗಿಫ್ಟ್‌ : 1 ಗಂಟೆ, 5 ಧಾರಾವಾಹಿಗಳ ಮಹಾಸಂಚಿಕೆ ನೋಡಿ

200 ಕ್ಕೂ ಹೆಚ್ಚು ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. 50 ಕ್ಕೂ ಹೆಚ್ಚು ವಿವಿಐಪಿ ಅತಿಥಿಗಳು ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ವಿವಾಹದಲ್ಲಿ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಹಲವರು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.

ಪರಿಣಿತಿ ಚೋಪ್ರಾ ಅವರ ಸೋದರಸಂಬಂಧಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಸೇರಿದಂತೆ ಬಾಲಿವುಡ್‌ ಸಿನಿ ಮಂದಿ ಭಾಗಿಯಾಗಲಿದ್ದಾರೆ. ಲೀಲಾ ಪ್ಯಾಲೇಸ್ ಮತ್ತು ಉದಯವಿಲಾಸ್ ಹೊರತುಪಡಿಸಿ ಹತ್ತಿರದ ಮೂರು ಹೋಟೆಲ್‌ಗಳಲ್ಲಿ ಅತಿಥಿಗಳಿಗಾಗಿ ರೂಂ ಬುಕ್ಕಿಂಗ್ ಮಾಡಲಾಗಿದೆ. ವಿವಿಐಪಿ ಅತಿಥಿಗಳ ಪ್ರಾಮುಖ್ಯತೆಯನ್ನು ಪರಿಗಣಿಸಿ ಗುಪ್ತಚರ ಅಧಿಕಾರಿಗಳು ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಿದ್ದಾರೆ.

ಇದನ್ನೂ ಓದಿ : ರಮ್ಯಾ ಸಾವಿನ ಸುದ್ದಿ ಸುಳ್ಳು : ಸ್ಯಾಂಡಲ್‌ವುಡ್‌ ಕ್ವೀನ್‌ ಜಿನೀವಾದಲ್ಲಿ ಕ್ಷೇಮ

ಕಳೆದ ಮೇ 13 ರಂದು ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಜೋಡಿಯ ನಿಶ್ಚಿತಾರ್ಥ ನಡೆಯಿತು. ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಮಾಜಿ ಕೇಂದ್ರ ಸಚಿವರಾದ ಪಿ ಚಿದಂಬರಂ ಮತ್ತು ಕಪಿಲ್ ಸಿಬಲ್, ಮತ್ತು ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಸೇರಿದಂತೆ ಹಲವಾರು ರಾಜಕಾರಣಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News