ರಾಧಿಕಾ ಪಂಡಿತ್ ಗೆ ಜನ್ಮದಿನದ ಸಂಭ್ರಮ: ಮುಂದಿನ ಸಿನಿಮಾ ಯಾವುದು..?

ಹತ್ತಾರು ಹಿಟ್‌ ಸಿನಿಮಾಗಳನ್ನು ಕನ್ನಡಿಗರ ಮುಂದೆ ಇಟ್ಟಿದ್ದ ರಾಧಿಕಾ ಪಂಡಿತ್‌ ಅವರು ಕೆಲ ವರ್ಷಗಳಿಂದ ನಟನೆಗೆ ಮರಳಲಿಲ್ಲ. ಆದರೆ 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಮೂಲಕ ರಾಧಿಕಾ ಪಂಡಿತ್ ಕಂಬ್ಯಾಕ್​ ಮಾಡಿ‌ದ್ದರೂ ಮತ್ತೆ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ.

Written by - Malathesha M | Edited by - Ranjitha R K | Last Updated : Mar 7, 2022, 11:56 AM IST
  • ರಾಧಿಕಾ ಪಂಡಿತ್ ಗೆ ಜನ್ಮದಿನದ ಸಂಭ್ರಮ
  • ತನ್ನ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿರುವ ರಾಧಿಕಾ
  • ರಾಧಿಕಾ ಮುಂದಿನ ಚಿತ್ರಕಾಗಿ ಕಾಯುತ್ತಿರುವ ಅಭಿಮಾನಿಗಳು
ರಾಧಿಕಾ ಪಂಡಿತ್ ಗೆ ಜನ್ಮದಿನದ ಸಂಭ್ರಮ: ಮುಂದಿನ ಸಿನಿಮಾ ಯಾವುದು..?   title=
ರಾಧಿಕಾ ಪಂಡಿತ್ ಗೆ ಜನ್ಮದಿನದ ಸಂಭ್ರಮ

ಬೆಂಗಳೂರು : ರಾಧಿಕಾ ಪಂಡಿತ್.. (Radhika Pandit)ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ಈ ಹೆಸರು ಚಿರಪರಿಚಿತ. ಯಾಕಂದ್ರೆ ತಮ್ಮ ನಟನಾ ಕೌಶಲ್ಯದಿಂದ ಕನ್ನಡಿಗರ ಮನಗೆದ್ದ ನಟಿ ರಾಧಿಕಾ ಪಂಡಿತ್ ದೊಡ್ಡ ದೊಡ್ಡ ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದರು. ಅದರಲ್ಲೂ ರಾಧಿಕಾ ಪಂಡಿತ್ ಅವರ ಸಿನಿಮಾಗಳು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿರುತ್ತಿದ್ದು ವಿಶೇಷ (Radhika Pandit Films). ಹೀಗೆ ಕನ್ನಡ ಚಿತ್ರರಂಗದ ಮಿನುಗು ತಾರೆ ರಾಧಿಕಾ ಪಂಡಿತ್ ಅವರಿಗೆ ಇಂದು ಜನ್ಮದಿನದ ಸಂಭ್ರಮ.

ಹತ್ತಾರು ಹಿಟ್‌ ಸಿನಿಮಾಗಳನ್ನು ಕನ್ನಡಿಗರ ಮುಂದೆ ಇಟ್ಟಿದ್ದ ರಾಧಿಕಾ ಪಂಡಿತ್‌ ಅವರು ಕೆಲ ವರ್ಷಗಳಿಂದ ನಟನೆಗೆ ಮರಳಲಿಲ್ಲ. ಆದರೆ 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಮೂಲಕ ರಾಧಿಕಾ ಪಂಡಿತ್ ಕಂಬ್ಯಾಕ್​ ಮಾಡಿ‌ದ್ದರೂ ಮತ್ತೆ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ( Radhika Pandit Films).

ಇದನ್ನೂ ಓದಿ : ವಿಶ್ವದಾದ್ಯಂತ 4500 ಪರದೆಗಳಲ್ಲಿ ಅಪ್ಪು ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆ

ಅಭಿಮಾನಿಗಳ ಬಯಕೆ :
ಹೀಗೆ ನಟಿ ರಾಧಿಕಾ (Radhika Pandit) ಅವರ ಗೈರು ಹಾಜರು ಕನ್ನಡ ಚಿತ್ರರಂಗವನ್ನು ಕಾಡುತ್ತಿದೆ. ಹೀಗಾಗಿ ರಾಧಿಕಾ ಅವರು ಯಾವಾಗ ಸಿನಿಮಾಗೆ ಮರಳುತ್ತಾರಾ ಅಂತಾ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ರಾಧಿಕಾ ಪಂಡಿತ್‌ ಬರ್ತ್‌ ಡೇ ಸಂಭ್ರಮದಲ್ಲೇ ಅಭಿಮಾನಿಗಳು ಈ ಬೇಡಿಕೆ ಇಟ್ಟಿದ್ದು, ಮತ್ತೆ ಚಿತ್ರರಂಗಕ್ಕೆ ಮರಳುವಂತೆ ನಟಿಗೆ ಮನವಿ ಮಾಡುತ್ತಿದ್ದಾರೆ (Radhika Pandit Birthday).

ರಾಕಿಂಗ್‌ ಸ್ಟಾರ್‌ ಯಶ್‌ (Rocking Star Yash) ಪತ್ನಿ ರಾಧಿಕಾ ಅವರು 2008ರಲ್ಲಿ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಹೆಜ್ಜೆ ಹಾಕಿದವರು. ಬಳಿಕ ಯಶ್‌ ಅವರನ್ನು ಮದುವೆಯಾದ ರಾಧಿಕಾ ಪಂಡಿತ್‌ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಹೀಗಾಗಿ ಮಕ್ಕಳ ಆರೈಕೆಯಲ್ಲೇ ನಟಿ ಬ್ಯುಸಿಯಾಗಿದ್ದಾರೆ. ಈ ಹೊತ್ತಲ್ಲೇ ಚಿತ್ರರಂಗಕ್ಕೆ ಮರಳುತ್ತಾರಾ ಅನ್ನೋ ಅನುಮಾನ ಕೂಡ ಅವರ ಅಭಿಮಾನಿ ಬಳಗವನ್ನು ಕಾಡುತ್ತಿದೆ. ಒಟ್ಟಾರೆ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಛಾಪು ಮೂಡಿಸಿದ್ದ ರಾಧಿಕಾ ಪಂಡಿತ್‌ ಅವರು ಮರಳಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟರೆ ಅಭಿಮಾನಿಗಳಿಗೆ ಖುಷಿಯೋ ಖುಷಿ.

ಇದನ್ನೂ ಓದಿ : ಪವರ್ ಸ್ಟಾರ್ ಪುನೀತ್ ಕೊನೆಯ ಸಿನಿಮಾಗೆ ಸಿಕ್ಕ ಸರ್ಟಿಫಿಕೇಟ್ ಯಾವುದು..,?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News