Pushpa 2: ʻಪುಷ್ಪ 2ʼ ತಂಡದಿಂದ ಸರ್ಪ್ರೈಸ್: ಫಸ್ಟ್‌ ಸಾಂಗ್‌ ಅಪ್‌ಡೇಟ್‌ ರಿವೀಲ್!

Pushpa 2 Update: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ʻಪುಷ್ಪ: ದಿ ರೂಲ್ʼ ಸಿನಿಮಾದ ಫಸ್ಟ್‌ ಸಾಂಗ್‌ ಪ್ರೋಮೋ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಇದರ ಮತ್ತಷ್ಟು ಮಾಹಿತಿ ಇಲ್ಲಿದೆ.   

Written by - Zee Kannada News Desk | Last Updated : Apr 24, 2024, 09:45 AM IST
  • ಅದರಲ್ಲೂ ಕೆಲವು ದಿನಗಳ ಹಿಂದೆ ರಿಲೀಸ್ ಆಗಿರುವ ಚಿಕ್ಕದೊಂದು ಝಲಕ್‌ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿತ್ತು.
  • 2021 ರಲ್ಲಿ ತೆರೆಕಂಡ ʻಪುಷ್ಪ: ದಿ ರೈಸ್‌ʼ ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿ ಸಖತ್‌ ಸೌಂಡ್‌ ಮಾಡಿದ್ದವು.
  • 'ಪುಷ್ಪ 2: ದಿ ರೂಲ್'ಸಿನಿಮಾ ಎರಡು ವರ್ಷಗಳ ‌ ನಂತರ ರಿಲೀಸ್‌ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಈ ಚಿತ್ರದ ಕಥೆಯನ್ನು ಡೈರೆಕ್ಟರ್‌ ಸುಕುಮಾರ್ ತಿದ್ದಿ ತಿಡಿದ್ದರು.
Pushpa 2: ʻಪುಷ್ಪ 2ʼ ತಂಡದಿಂದ ಸರ್ಪ್ರೈಸ್: ಫಸ್ಟ್‌ ಸಾಂಗ್‌ ಅಪ್‌ಡೇಟ್‌ ರಿವೀಲ್! title=

Pushpa 2 First Song Update: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ 'ಪುಷ್ಪ 2' ಸಿನಿಮಾದ ಫಸ್ಟ್‌ ಸಾಂಗ್‌ ಅಪ್‌ಡೇಟ್‌ ಹೊರಬಂದಿದ್ದು. ಈಗಾಗಲೇ ಈ ಪ್ಯಾನ್ ಇಂಡಿಯಾ ಚಿತ್ರ ಜೋರಾಗಿ ಸದ್ದು ಮಾಡುತ್ತಿದ್ದು, ಇದರ ಬಗ್ಗೆ ನಿರೀಕ್ಷೆಗಳು ಕೂಡ ಹೆಚ್ಚಾಗಿದೆ. ಅದರಲ್ಲೂ ಕೆಲವು ದಿನಗಳ ಹಿಂದೆ  ರಿಲೀಸ್ ಆಗಿರುವ ಚಿಕ್ಕದೊಂದು ಝಲಕ್‌ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿತ್ತು. 

ಸದ್ಯ 'ಪುಷ್ಪ 2' ಚಿತ್ರತಂಡ ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ  ಸರ್ಪ್ರೈಸ್ ನೀಡಿದೆ. ಈ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದ ತಂಡ, ಇದೀಗ ಮೊದಲ  ಹಾಡಿನ ಪ್ರೋಮೊ ರಿಲೀಸ್ ಮಾಡುತ್ತಿದೆ. ಇಂದು ಸಂಜೆ (ಏಪ್ರಿಲ್ 24) 4.05ಕ್ಕೆ ಫಸ್ಟ್‌ ಸಾಂಗ್‌ ಪ್ರೋಮೋ ಬಿಡುಗಡೆ ಮಾಡಲಿದೆ. ಇದರಲ್ಲಿ ಫುಲ್‌ ಸಾಂಗ್‌ ಯಾವಾಗ ರಿಲೀಸ್‌ ಆಗುತ್ತದೆ ಅನ್ನೋದನ್ನು ಅನೌನ್ಸ್ ಮಾಡುವ ಚಾನ್ಸಸ್‌ ಇದೆ.

 
 
 
 

 
 
 
 
 
 
 
 
 
 
 

A post shared by Mythri Movie Makers (@mythriofficial)

ಇದನ್ನೂ ಓದಿ: ಮೇ 10ಕ್ಕೆ ಗ್ರೇ ಗೇಮ್ಸ್‌ ಸಿನಿಮಾ ರಿಲೀಸ್;‌ ಸಸ್ಪೆನ್ಸ್‌ ಡ್ರಾಮಾ ಜತೆಗೆ ನೋಡುಗನಿಗೂ ಥ್ರಿಲ್‌ ನೀಡಲಿದೆ ಈ ಚಿತ್ರ

2021 ರಲ್ಲಿ ತೆರೆಕಂಡ ʻಪುಷ್ಪ: ದಿ ರೈಸ್‌ʼ ಸಿನಿಮಾದ  ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿ ಸಖತ್‌ ಸೌಂಡ್‌ ಮಾಡಿದ್ದವು. ಮ್ಯೂಸಿಕ್‌ ಕಂಪೋಸರ್‌ ದೇವಿಶ್ರೀ ಪ್ರಸಾದ್ ಸಂಯೋಜಿಸಿದ  ಹಾಡುಗಳು ಭಾಷೆಯ ಗಡಿ ದಾಟಿ ಪ್ರೇಕ್ಷಕರ ಮನ ಗೆದ್ದಿತ್ತು. ಸದ್ಯಕ್ಕೆ ಎಲ್ಲರ ಕಣ್ಣು 'ಪುಷ್ಪ 2' ಚಿತ್ರದ ಮೇಲೆ ಇದೆ. ಈ ಸಂಗೀತ ನಿರ್ದೇಶಕನ ಟ್ಯೂನ್‌ಗಳಿಗೆ ಟಾಲಿವುಡ್‌ನಲ್ಲಿ ದೊಡ್ಡ ಅಭಿಮಾನಿಗಳ ಬಳಗವೇ ಇದೆ.

'ಪುಷ್ಪ 2: ದಿ ರೂಲ್'ಸಿನಿಮಾ ಎರಡು ವರ್ಷಗಳ ‌ ನಂತರ ರಿಲೀಸ್‌ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಈ ಚಿತ್ರದ ಕಥೆಯನ್ನು ಡೈರೆಕ್ಟರ್‌ ಸುಕುಮಾರ್ ತಿದ್ದಿ ತಿಡಿದ್ದರು. ಆದರಿಂದ ಸಿನಿಮಾ ಮೇಕಿಂಗ್‌ಗೆ ಮತ್ತಷ್ಟು ಟೈಮ್‌  ತೆಗೆದುಕೊಂಡಿತ್ತು. ಸದ್ಯ ಚಿತ್ರದ ಶೂಟಿಂಗ್ ಕಂಪ್ಲೀಟ್‌ ಆಗಿ, ಆಗಸ್ಟ್ 15ಕ್ಕೆ ಬೆಳ್ಳಿತೆರೆ ಮೇಲೆ ಅಬ್ಬರಿಸೋಕೆ ರೆಡಿಯಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

Trending News