ʼರಾಷ್ಟ್ರ ಪ್ರಶಸ್ತಿʼ ಬಳಿಕ ನಟ ಅಲ್ಲು ಅರ್ಜುನ್‌ಗೆ ಒಲಿದು ಬಂತು ಅಪರೂಪದ ಗೌರವ..!

Allu Arjun : ಸದ್ಯ ಅಲ್ಲು ಅರ್ಜುನ್ ಪುಷ್ಪ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ಇದೇ ವೇಳೆ ಬನ್ನಿಗೆ ಅಪರೂಪದ ಗೌರವ ಒಲಿದು ಬಂದಿದೆ. ಈ ಕುರಿತು ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ..

Written by - Krishna N K | Last Updated : Sep 19, 2023, 06:52 PM IST
  • ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಮತ್ತೊಂದು ಅಪರೂಪದ ಗೌರವ ಸಿಗಲಿದೆ.
  • ಇತ್ತೀಚೆಗಷ್ಟೇ ಪುಷ್ಪಾ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.
  • ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಅಲ್ಲು ಅರ್ಜುನ್‌ ಮೇಣದ ಪ್ರತಿಮೆ ಸ್ಥಾಪಿಸಲು ಹೊರಟಿದೆ.
ʼರಾಷ್ಟ್ರ ಪ್ರಶಸ್ತಿʼ ಬಳಿಕ ನಟ ಅಲ್ಲು ಅರ್ಜುನ್‌ಗೆ ಒಲಿದು ಬಂತು ಅಪರೂಪದ ಗೌರವ..! title=

Allu Arjun wax statue : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಮತ್ತೊಂದು ಅಪರೂಪದ ಗೌರವ ಸಿಗಲಿದೆ. ಇತ್ತೀಚೆಗಷ್ಟೇ ಪುಷ್ಪಾ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಇದೀಗ ಮತ್ತೊಂದು ಅಪರೂಪದ ಸಾಧನೆಗೆ ಬನ್ನಿ ಸಾಕ್ಷಿಯಾಗಲಿದ್ದಾರೆ.

ಹೌದು.. ಲಂಡನ್‌ನ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಅಲ್ಲು ಅರ್ಜುನ್‌ ಮೇಣದ ಪ್ರತಿಮೆಯನ್ನು ಸ್ಥಾಪಿಸಲು ಹೊರಟಿದೆಯಂತೆ. ಈ ಸುದ್ದಿ ನಿಜವಾದರೆ ಪುಷ್ಪರಾಜ್ ಈ ಸಾಧನೆ ಮಾಡಿದ ಮೂರನೇ ಟಾಲಿವುಡ್ ಹೀರೋ ಆಗಲಿದ್ದಾರೆ. ಈಗಾಗಲೇ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮೇಣದ ಪ್ರತಿಮೆಗಳಿವೆ. ಸದ್ಯದಲ್ಲೇ ಅಲ್ಲು ಅರ್ಜುನ್ ಲಂಡನ್‌ಗೆ ತೆರಳಲಿದ್ದು, ಈ ಪ್ರತಿಮೆಯನ್ನು ತಯಾರಿಸಲು ಅಗತ್ಯ ಅಳತೆಗಳನ್ನು ನೀಡಲಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಬನ್ನಿ ಅಭಿಮಾನಿಗಳಿಗೆ ಖುಷಿ ತಂದಿದೆ.

ಇದನ್ನೂ ಓದಿ:  ಉಪೇಂದ್ರ ಸ್ಟೈಲ್ ನಲ್ಲಿ 'UI' ಟೀಸರ್.. ನೋ ವಿಶುವಲ್ ಓನ್ಲೀ ಆಡಿಯೋ!

ಸದ್ಯ ಅಲ್ಲು ಅರ್ಜುನ್ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪುಷ್ಪ ಚಿತ್ರದ ಮುಂದುವರಿದ ಭಾಗವಾಗಿ ತಯಾರಾಗುತ್ತಿರುವ ಈ ಚಿತ್ರವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ಪುಷ್ಪ ಭಾಗ 1 ದೇಶಾದ್ಯಂತ ಭಾರೀ ಹಿಟ್ ಆಗಿತ್ತು. ಈ ಸಿನಿಮಾದಿಂದ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಕ್ರೇಜ್ ಹೆಚ್ಚಾಯಿತು.

ಇನ್ನು ಪುಷ್ಪ 2 ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಫಹಾದ್ ಫಾಜಿಲ್ ವಿಲನ್ ಆಗಿ ನಟಿಸುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಇತ್ತೀಚೆಗಷ್ಟೇ ಓರ್ಮ್ಯಾಕ್ಸ್ ಎಂಬ ಮಾಧ್ಯಮ ಸಂಸ್ಥೆ ಬಾಲಿವುಡ್ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಸಿನಿಮಾಗಳ ಬಗ್ಗೆ ಸಮೀಕ್ಷೆ ನಡೆಸಿತ್ತು, ಅದರಲ್ಲಿ ಪುಷ್ಪ 2 ಅಗ್ರಸ್ಥಾನದಲ್ಲಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News