ಕಲ್ಕಿ ಅಬ್ಬರಕ್ಕೆ ʼಬಾಕ್ಸ್ ಆಫೀಸ್‌ʼ ಪುಡಿ ಪುಡಿ..! ಇಷ್ಟು ದಿನಗಳ ದಾಖಲೆ, ರೆಬಲ್‌ ಅಬ್ಬರಕ್ಕೆ ಧ್ವಂಸ ಗ್ಯಾರಂಟಿ..

Kalki 2898 AD first day collection: ನಾಗ್‌ ಅಶ್ವೀನ್‌ ನಿರ್ದೇಶನದ ಪ್ರಭಾಸ್‌ ನಟನೆಯ Kalki 2898 ad ಸಿನಿಮಾ ಎಲ್ಲೆಡೆ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ಅಲ್ಲದೆ, ಮೊದಲ ದಿನವೇ ಬಾಕ್ಸ್‌ ಆಪೀಸ್‌ನಲ್ಲಿ ಹಲವು ದಾಖಲೆಗಳನ್ನು ಈ ಚಿತ್ರ ನಿರ್ಮಿಸಲಿದೆ.. ಈ ಕುರಿತು ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ..

Written by - Krishna N K | Last Updated : Jun 27, 2024, 03:34 PM IST
    • ಪ್ರಭಾಸ್‌ ಕಲ್ಕಿ 2898 ಎಡಿ ಹೌಸ್‌ ಫುಲ್‌ ಪ್ರದರ್ಶನ
    • ಮೊದಲ ದಿನವೇ ಬಾಕ್ಸ್‌ ಆಪೀಸ್‌ನಲ್ಲಿ ದಾಖಲೆ ಸಾಧ್ಯತೆ
    • ಇಂದು ಮಧ್ಯರಾತ್ರಿಯಿಂದ ತೆರೆ ಕಂಡ ಕಲ್ಕಿ 28998 ಎಡಿ
ಕಲ್ಕಿ ಅಬ್ಬರಕ್ಕೆ ʼಬಾಕ್ಸ್ ಆಫೀಸ್‌ʼ ಪುಡಿ ಪುಡಿ..! ಇಷ್ಟು ದಿನಗಳ ದಾಖಲೆ, ರೆಬಲ್‌ ಅಬ್ಬರಕ್ಕೆ ಧ್ವಂಸ ಗ್ಯಾರಂಟಿ.. title=
Prabhas, Kalki 2898 ad,

Kalki 2898 AD 1st Day Box Office Collections: ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ 'ಕಲ್ಕಿ 2898 AD' ಚಿತ್ರ ಇಂದು ತೆರೆ ಕಂಡಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಇತರ ದಿಗ್ಗಜ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಬಿಡುಗಡೆಯಾದಾಗಿನಿಂದ ಹೌಸ್ ಫುಲ್ ಕಲೆಕ್ಷನ್ ಮಾಡುತ್ತಿದೆ. ಅಲ್ಲದೆ, ಸಿನಿಮಾ ಪಾಸಿಟಿವ್‌ ಟಾಕ್‌ ಪಡೆದಿದ್ದು, ಒಂದೇ ದಿನಕ್ಕೆ ಎಲ್ಲಾ ದಾಖಲೆಗಳನ್ನು ಮುರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. 

ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಅಭಿನಯದ ಕಲ್ಕಿ ಸಿನಿಮಾ ಹಲವು ನಿರೀಕ್ಷೆಗಳ ನಡುವೆ ಇಂದು ಮಧ್ಯರಾತ್ರಿಯಿಂದ ತೆರೆ ಕಂಡಿದೆ. ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ದಿನವೇ ಸುಮಾರು 5 ಮಿಲಿಯನ್ ಯುಎಸ್ ಡಾಲರ್ ಕಲೆಕ್ಷನ್ ಮಾಡಿದರೂ ಅಚ್ಚರಿಪಡಬೇಕಿಲ್ಲ. ಚಿತ್ರ ಬಿಡುಗಡೆಯಾದಲ್ಲೆಲ್ಲಾ ಹೌಸ್ ಫುಲ್ ಕಲೆಕ್ಷನ್ ಮಾಡುತ್ತಿದೆ.

ಇದನ್ನೂ ಓದಿ: ಕಲ್ಕಿ ಸಿನಿಮಾದಲ್ಲಿ ವಿಜಯ್‌ ದೇವರಕೊಂಡ ಕಂಡೀರಾ..! ಗೆಸ್ಟ್‌ ಆಗಿ ಬಂದು ಹಿಟ್‌ ಪಡೆದ ನಟ

ಈ ಸಿನಿಮಾದಲ್ಲಿ ಪ್ರಭಾಸ್ ಭೈರವನಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ವಿಜಯ್ ದೇವರಕೊಂಡ (Vijay Devarakonda) ಕೂಡ ಪ್ರಭಾಸ್‌ಗೆ ಸರಿ ಸಮಾನವಾದ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ, ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅಶ್ವಥಾಮನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಸುಪ್ರೀಂ ಯಾಸ್ಕಿನ್ ಆಗಿ ಕಮಲ್ ಹಾಸನ್ ಅಭಿನಯ ಸಿನಿಮಾಗೆ ಪ್ಲಸ್‌ ಪಾಯಿಂಟ್‌. 

ಈ ಸಿನಿಮಾ ಸುಮಾರು ರೂ. 230 ಕೋಟಿ ಕಲೆಕ್ಷನ್ ಮಾಡಬಹುದು ಎನ್ನಲಾಗಿದೆ. ತೆಲುಗು ರಾಜ್ಯಗಳಲ್ಲಿ ಸುಮಾರು ರೂ. 70 ರಿಂದ 80 ಕೋಟಿ ಗ್ರಾಸ್ ಕಲೆಕ್ಷನ್ ಸಾಧ್ಯತೆ ಇದೆ. ವಿದೇಶದಲ್ಲಿ ಸುಮಾರು ರೂ. 90 ಕೋಟಿಯವರೆಗೂ ಗಳಿಕೆ ಕಾಣುವ ಸಾಧ್ಯತೆ ಇದೆ ಎನ್ನುತ್ತಿವೆ ಟ್ರೇಡ್ ವರದಿಗಳು. ಒಟ್ಟಿನಲ್ಲಿ ರೆಸ್ಟ್ ಆಫ್ ಇಂಡಿಯಾ ಮತ್ತು ಹಿಂದಿ ಒಂದಾದರೆ ಈ ಸಿನಿಮಾ ಮೊದಲ ದಿನವೇ ಹಲವು ದಾಖಲೆಗಳನ್ನು ಮುರಿಯುವ ಸಾಧ್ಯತೆಗಳು ಸಾಕಷ್ಟಿವೆ. ಜಸ್ಟ್‌ ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News