ದರ್ಶನ್‌, ಯಶ್‌, ಸೇರಿದಂತೆ ಸೌತ್‌ ಸ್ಟಾರ್‌ ನಟರನ್ನು ಹಿಂದಿಕ್ಕಿ NO.1 ಸ್ಥಾನಕ್ಕೇರಿದ ಪ್ರಭಾಸ್..!

Prabhs record : ಬಾಹುಬಲಿ ನಂತರ ಬಿಡುಗಡೆಯಾದ ಪ್ರಭಾಸ್ ನಟನೆಯ ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ದವು. ಸಧ್ಯ ಸಲಾರ್‌ ಮೂಲಕ ಕಮ್‌ ಬ್ಯಾಕ್‌ ಮಾಡಿರುವ ಡಾರ್ಲಿಂಗ್‌ ಕ್ರೇಜ್‌ ಭಾರತದಾದ್ಯಂತ ಹೆಚ್ಚಾಗಿದೆ. ಅಲ್ಲದೆ, ಬಾಹುಬಲಿ ಮತ್ತು ಬಾಹುಬಲಿ 2 ಸಿನಿಮಾ ನಂತರ ಪ್ರಭಾಸ್ ಯಶಸ್ಸು ಕಾಣಲು ಸಾಧ್ಯವಿಲ್ಲ ಅಂತ ಹೇಳಲಾಗುತ್ತಿತ್ತು. ಆದರೆ ಇದೀಗ, ಈ ಮಾತನ್ನು ಅವರು ಸುಳ್ಳು ಮಾಡಿದ್ದಾರೆ.

Written by - Krishna N K | Last Updated : Dec 29, 2023, 02:04 PM IST
  • ಪ್ರಭಾಸ್ ನಟನೆಯ ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ದವು.
  • ಸಲಾರ್‌ ಮೂಲಕ ಡಾರ್ಲಿಂಗ್‌ ಕಮ್‌ ಬ್ಯಾಕ್‌ ಮಾಡಿದ್ದಾರೆ.
  • ಈಗ ಯಾರೂ ಮಾಡದ ಒಂದೇ ಒಂದು ದಾಖಲೆಯನ್ನು ಸಾಧಿಸಿದ್ದಾರೆ.
ದರ್ಶನ್‌, ಯಶ್‌, ಸೇರಿದಂತೆ ಸೌತ್‌ ಸ್ಟಾರ್‌ ನಟರನ್ನು ಹಿಂದಿಕ್ಕಿ NO.1 ಸ್ಥಾನಕ್ಕೇರಿದ ಪ್ರಭಾಸ್..! title=

Darling Prabhas : ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಬಾಹುಬಲಿ ಚಿತ್ರದ ಮೂಲಕ ವಿಶ್ವದಾದ್ಯಂತ ಫೇಮಸ್ ಆಗಿದ್ದು ಗೊತ್ತೇ ಇದೆ. ರಾಜಮೌಳಿ ನಿರ್ದೇಶನದ ಬಾಹುಬಲಿ: ದಿ ಬಿಗಿನಿಂಗ್ ಮತ್ತು ಬಾಹುಬಲಿ: ದಿ ಕನ್‌ಕ್ಲೂಷನ್‌ನೊಂದಿಗೆ ಪ್ರಭಾಸ್ ವಿಶ್ವಮಟ್ಟದಲ್ಲಿ ಮಿಂಚಿದ್ದರು. ಟಾಲಿವುಡ್‌ಗೆ ಮಾತ್ರ ಸೀಮಿತವಾಗಿದ್ದ ಪ್ರಭಾಸ್ ಹೆಸರು ಜಗತ್ತಿಗೆ ಕೇಳಿಸಿತ್ತು. ಆದರೆ ಈ ಸಿನಿಮಾಗಳ ನಂತರ ಪ್ರಭಾಸ್‌ಗೆ ಆ ರೇಂಜ್ ಸಕ್ಸಸ್ ಸಿಗಲಿಲ್ಲ.

ಸಾಹೋ ಮತ್ತು ರಾಧೆ ಶ್ಯಾಮ್ ಚಿತ್ರಗಳ ಮೂಲಕ ಪ್ರಭಾಸ್ ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಿದರು. ಎರಡೂ ಚಿತ್ರಗಳು ನಿರೀಕ್ಷೆಗೆ ತಕ್ಕಂತೆ ಹಿಟ್ ಆಗಲಿಲ್ಲ. ಅದರಲ್ಲೂ ರಾಧೆ ಶ್ಯಾಮ್ ಚಿತ್ರವು ಪ್ರಭಾಸ್ ವೃತ್ತಿಜೀವನದ ದೊಡ್ಡ ದುರಂತಗಳಲ್ಲಿ ಒಂದು. ಇದರಿಂದ ಪ್ರಭಾಸ್ ಕೆರಿಯರ್ ಕುಸಿದಿತ್ತು ಎಂದು ಹೇಳಲಾಗುತ್ತಿತ್ತು.

ಇದನ್ನೂ ಓದಿ:ಬಿಗ್‌ ಬಾಸ್‌ನಲ್ಲಿ ಪ್ರತಾಪ್ ಮದುವೆ ಮಾತುಕತೆ, ಯಾರು ಆ ಬೆಡಗಿ!?

ಅಲ್ಲದೆ, ಕೆಲ ಜ್ಯೋತಿಷಿಗಳು ಪ್ರಭಾಸ್ ಕೆರಿಯರ್ ಇಲ್ಲಿಗೆ ಮುಗಿಯಿತು ಅಂತ ಹೇಳಿದ್ದರು. ಆದರೆ ಪ್ರಭಾಸ್ ಈಗ ಯಾರೂ ಮಾಡದ ಒಂದೇ ಒಂದು ದಾಖಲೆಯನ್ನು ಸಾಧಿಸುವ ಮೂಲಕ ಟೀಕೆ ಮಾಡುತ್ತಿದ್ದ ಬಾಯಿ ಮುಚ್ಚಿಸಿದ್ದಾರೆ. ಆ ದಾಖಲೆ ಏನು ಅಂತ ನೋಡೋಣ.

ಸಾಲಾರ್ ಚಿತ್ರದ ಯಶಸ್ಸಿನೊಂದಿಗೆ ಪ್ರಭಾಸ್ ಅವರ ಬ್ಯಾಡ್‌ ಲಕ್‌ಗೆ ಬ್ರೇಕ್ ಬಿದ್ದಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದ ಮೇಲೆ ಮೊದಲಿನಿಂದಲೂ ಸಾಕಷ್ಟು ನಿರೀಕ್ಷೆ ಇತ್ತು. ಡಿಸೆಂಬರ್ 22 ರಂದು ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ ನಿರೀಕ್ಷೆಗಿಂತ ಹೆಚ್ಚು ಹಿಟ್ ಆಯಿತು. ಬಾಕ್ಸ್ ಆಫೀಸ್ ನಲ್ಲಿ ಕಾಸಿನ ಮಳೆ ಸುರಿಯುತ್ತಿದೆ. 

ಇದನ್ನೂ ಓದಿ:ನಾನು ಅಭಿಷೇಕ್ ಪತ್ನಿ ಎಂದು ಜಾಹ್ನವಿ ಕಪೂರ್ ಹಂಗಾಮ ! ಬಚ್ಚನ್ ನಿವಾಸದ ಎದುರೇ ನಡೆಯಿತು ಆತ್ಮಹತ್ಯೆ ಯತ್ನ !

ಬಿಡುಗಡೆಯಾದ ಆರು ದಿನಗಳಲ್ಲೇ ಈ ಚಿತ್ರ ರೂ.500 ಕೋಟಿ ಕ್ಲಬ್ ಸೇರಿದೆ. ಚಿತ್ರವು ಮುಂಗಡ ಬುಕ್ಕಿಂಗ್‌ನೊಂದಿಗೆ ದಾಖಲೆಗಳನ್ನು ಸೃಷ್ಟಿಸಿದೆ ಮತ್ತು ಬಿಡುಗಡೆಯಾದ ದಿನದಿಂದಲೂ ಭಾರಿ ಕಲೆಕ್ಷನ್‌ಗಳನ್ನು ದಾಖಲಿಸುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಮೂಲಕ ಪ್ರಭಾಸ್ ಮತ್ತೊಂದು ದಾಖಲೆ ಬರೆದಿದ್ದಾರೆ. ಒಂದಲ್ಲ ಎರಡಲ್ಲ ಮೂರು ಚಿತ್ರಗಳ ಮೂಲಕ 500 ಕೋಟಿ ಕಲೆಕ್ಷನ್ ಮಾಡಿದ ದಕ್ಷಿಣದ ಏಕೈಕ ನಟ ಪ್ರಭಾಸ್.

ಮೊದಲ ಪ್ರಭಾಸ್ ಅಭಿನಯದ ಬಾಹುಬಲಿ ಮತ್ತು ಬಾಹುಬಲಿ 2 ಕೂಡ 500 ಕೋಟಿ ಕಲೆಕ್ಷನ್ ಮಾಡಿತ್ತು. ಅದಾದ ನಂತರ 'ಸಾಲಾರ್' ಕೂಡ ಆ ಮಟ್ಟದ ಕಲೆಕ್ಷನ್ಸ್ ಅನ್ನು ತನ್ನದಾಗಿಸಿಕೊಂಡಿದೆ... ಎಲ್ಲಕ್ಕಿಂತ ಮಿಗಿಲಾಗಿ ಪ್ರಭಾಸ್ ತಮ್ಮ ಕೆರಿಯರ್ ನಲ್ಲಿ 500 ಕೋಟಿ ಸಿನಿಮಾಗಳ ಮೂಲಕ ಹೀರೋ ಆಗಿ ದಾಖಲೆ ಸೃಷ್ಟಿಸಿದ್ದಾರೆ. ಮೂರು 500 ಕೋಟಿ ಚಿತ್ರಗಳನ್ನು ಹೊಂದಿರುವ ದಕ್ಷಿಣ ಭಾರತದ ನಾಯಕರೇ ಇಲ್ಲ ಎಂಬುದು ಗಮನಾರ್ಹ. 

ಇದನ್ನೂ ಓದಿ:BBK 10 : ಈ ವಾರದ ಕ್ಯಾಪ್ಟನ್ ಪಟ್ಟ ಯಾರಿಗೆ..? ಸ್ಪರ್ಧಿಗಳ ಕುಟುಂಬಸ್ಥರು ಹೇಳಿದ್ದು ಈ ಒಬ್ಬ ವ್ಯಕ್ತಿ ಹೆಸರು ಮಾತ್ರ

ಮತ್ತೊಂದು ವಿಶೇಷ ಏನೆಂದರೆ ಪ್ರಭಾಸ್ ಸಾಲಾರ್ ಚಿತ್ರ ಆರು ದಿನದೊಳಗೆ 500 ಕೋಟಿ ಕಲೆಕ್ಷನ್ ಮಾಡಿದ್ದು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಟಾಲಿವುಡ್‌ನಲ್ಲಿ ಮೂರು 500 ಕೋಟಿ ಸಿನಿಮಾಗಳನ್ನು ಹೊಂದಿರುವ ಏಕೈಕ ನಾಯಕ ಪ್ರಭಾಸ್. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News