Abhishek Bachhan: ಕರಿಷ್ಮಾ ಅಲ್ಲ.. ಐಶ್ವರ್ಯ ರೈಗಿಂತ ಮೊದಲು ನಟ ಅಭಿಷೇಕ್ ಬಚ್ಚನ್ ಮೊದಲು ಪ್ರೀತಿಸಿದ್ದು ಈಕೆಯನ್ನು!

Abhishek Bachchan Love Affairs: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ 2007 ರಲ್ಲಿ ಮಾಜಿ ವಿಶ್ವ ಸುಂದರಿ ಮತ್ತು ನಟಿ ಐಶ್ವರ್ಯಾ ರೈ ಅವರನ್ನು ವಿವಾಹವಾದರು. ಐಶ್ವಯಾ ರೈ ಅವರನ್ನು ಮದುವೆಯಾಗುವ ಮೊದಲು ಅಭಿಷೇಕ್ ಬಚ್ಚನ್ ಖ್ಯಾತ ಮಾಡೆಲ್‌ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರಂತೆ.. 

Written by - Savita M B | Last Updated : Mar 11, 2024, 02:42 PM IST
  • ಐಶ್ವಯಾ ರೈ ಅವರನ್ನು ಮದುವೆಯಾಗುವ ಮೊದಲು ಅಭಿಷೇಕ್ ಬಚ್ಚನ್ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಜೊತೆ ಡೇಟಿಂಗ್ ಮಾಡಿದ್ದರು.
  • ಬಚ್ಚನ್ ಹೆಸರು ಅನೇಕ ನಟಿಯರೊಂದಿಗೆ ತಳುಕು ಹಾಕಿಕೊಂಡಿದೆ.
  • ಇವುಗಳಲ್ಲಿ ಕರಿಷ್ಮಾ ಕಪೂರ್, ರಾಣಿ ಮುಖರ್ಜಿಯಂತಹ ದೊಡ್ಡ ನಾಯಕಿಯರ ಹೆಸರುಗಳಿವೆ
Abhishek Bachhan: ಕರಿಷ್ಮಾ ಅಲ್ಲ.. ಐಶ್ವರ್ಯ ರೈಗಿಂತ ಮೊದಲು ನಟ ಅಭಿಷೇಕ್ ಬಚ್ಚನ್ ಮೊದಲು ಪ್ರೀತಿಸಿದ್ದು ಈಕೆಯನ್ನು!  title=

Bollywood Actor Abhishek Bachchan: ಐಶ್ವಯಾ ರೈ ಅವರನ್ನು ಮದುವೆಯಾಗುವ ಮೊದಲು ಅಭಿಷೇಕ್ ಬಚ್ಚನ್ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಜೊತೆ ಡೇಟಿಂಗ್ ಮಾಡಿದ್ದರು. ಕರಿಷ್ಮಾ ಕಪೂರ್ ಅಭಿಷೇಕ್ ಬಚ್ಚನ್ ಅವರೊಂದಿಗೆ 5 ವರ್ಷಗಳ ಕಾಲ ಸಂಬಂಧ ಹೊಂದಿದ್ದಋು.. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡು ಕೆಲವು ವೈಯಕ್ತಿಕ ಕಾರಣಗಳಿಂದ ಸಂಭಂದವನ್ನು ಮುರಿದುಕೊಂಡರು.. 

ಬಚ್ಚನ್ ಹೆಸರು ಅನೇಕ ನಟಿಯರೊಂದಿಗೆ ತಳುಕು ಹಾಕಿಕೊಂಡಿದೆ. ಇವುಗಳಲ್ಲಿ ಕರಿಷ್ಮಾ ಕಪೂರ್, ರಾಣಿ ಮುಖರ್ಜಿಯಂತಹ ದೊಡ್ಡ ನಾಯಕಿಯರ ಹೆಸರುಗಳಿವೆ, ಆದರೆ ಒಂದು ಕಾಲದಲ್ಲಿ ಅಭಿಷೇಕ್ ಬಚ್ಚನ್ ಮಾಡೆಲ್ ಮತ್ತು ನಟಿ ದೀಪನ್ನಿತಾ ಶರ್ಮಾ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ?  

ಇದನ್ನೂ ಓದಿ-Sangeetha Sringeri: ಗ್ರ್ಯಾಂಡ್‌ ಲೆಹೆಂಗಾದಲ್ಲಿ ಮಹಾರಾಣಿಯಂತೆ ಕಣ್ಮನ ಸೆಳೆದ ಚಾರ್ಲಿ ಚೆಲುವೆ..!!

 1998 ರಲ್ಲಿ ಅಭಿಷೇಕ್ ಬಚ್ಚನ್ ಮತ್ತು ದೀಪಾನಿತಾ ಶರ್ಮಾ ಸ್ನೇಹಿತರಾದರು.. ಆಗ ರೂಪದರ್ಶಿಯಾಗಿದ್ದ ದೀಪನ್ನಿತಾ ಶರ್ಮಾ ಮಿಸ್ ಇಂಡಿಯಾ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ದೀಪನ್ನಿತಾ ಶರ್ಮಾ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರ ಉತ್ತಮ ಸ್ನೇಹಿತರಾಗಿದ್ದರು. ಸ್ವತಃ ಸೋನಾಲಿ ಬೇಂದ್ರೆ ಅಭಿಷೇಕ್ ಬಚ್ಚನ್ ಅವರನ್ನು ದೀಪಾನಿತಾಗೆ ಪರಿಚಯಿಸಿದ್ದರಂತೆ.. 

ಅಭಿಷೇಕ್ ಬಚ್ಚನ್ ದೀಪಿನಿತಾ ಶರ್ಮಾ ಅವರನ್ನು ಮೊದಲ ಬಾರಿಗೆ ನೋಡಿದ ಕೂಡಲೇ ಮನಸೋತಿದ್ದರು ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅಭಿಷೇಕ್ ಬಚ್ಚನ್ ಅವರು ತಮ್ಮ ಮೊದಲ ಭೇಟಿಯ ನಂತರ 2 ತಿಂಗಳ ಕಾಲ ನಿರಂತರವಾಗಿ ದೀಪನ್ನಿತಾ ಶರ್ಮಾಗೆ ಕರೆ ಮಾಡಿದ್ದಾರೆ ಮತ್ತು ಅವರನ್ನು ಭೇಟಿಯಾಗಲು ಕೇಳಿಕೊಂಡಿದ್ದಾರಂತೆ.. ಮಾಹಿತಿ ಪ್ರಕಾರ ದೀಪಾನಿತಾ ಶರ್ಮಾ ಕೂಡ ಕ್ರಮೇಣ ಅಭಿಷೇಕ್ ಬಚ್ಚನ್ ನನ್ನು ಪ್ರೀತಿಸತೊಡಗಿದಳು.. ಒಮ್ಮೆ ದೀಪಣ್ಣಿತಾ ತನ್ನ ಗೆಳೆಯ ಅಭಿಷೇಕ್ ಬಚ್ಚನ್ ಹುಟ್ಟುಹಬ್ಬಕ್ಕೆ ಪಾರ್ಟಿಯನ್ನು ಅರೇಂಜ್‌ ಮಾಡಿದ್ದರಂತೆ.. ಈ ವೇಳೆ ಅಭಿಷೇಕ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಮಯವಿಲ್ಲ ಅಷ್ಟೇ ಅಲ್ಲ, ತಂದೆ ಅಮಿತಾಬ್ ಬಚ್ಚನ್ ಅವರು ಅಸ್ವಸ್ಥರಾಗಿದ್ದಾರೆ.. ಆದರೆ ಅಭಿಷೇಕ್ ಬಚ್ಚನ್ ದೀಪಾನಿತಾಗೆ ಸುಳ್ಳು ಹೇಳಿ ತಮ್ಮ ಬಂಗಲೆ ಜಲ್ಸಾದಲ್ಲಿ ಅದ್ಧೂರಿ ಹುಟ್ಟುಹಬ್ಬದ ಪಾರ್ಟಿಯನ್ನುಮಾಡಿದ್ದರಂತೆ.. ಅದರಲ್ಲಿ ವಿಶೇಷ ಅತಿಥಿಯಾಗಿ ಐಶ್ವರ್ಯಾ ರೈ ಆಗಮಿಸಿದ್ದರು. ಆದರೆ ದೀಪಾನಿತಾ ಅವರನ್ನು ಈ ಪಾರ್ಟಿಗೆ ಆಹ್ವಾನಿಸಿರಲಿಲ್ಲ. ಹೀಗಾಗಿ ದೀಪಣ್ಣಿತಾ ಶರ್ಮಾ ಮಾಧ್ಯಮಗಳಿಗೆ ಸ್ಪಷ್ಟವಾಗಿ ತನಗೆ ಪಾರ್ಟಿಗೆ ಆಹ್ವಾನಿಸಲಾಗಿಲ್ಲ ಮತ್ತು ಅದಕ್ಕಾಗಿಯೇ ತಾನು ಅಭಿಷೇಕ್ ಬಚ್ಚನ್ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ.. 

ಇದನ್ನೂ ಓದಿ-Rashmika Mandanna: ನಟನೆ ಮಾತ್ರವಲ್ಲ.. ಶಿಕ್ಷಣದಲ್ಲಿಯೂ ಮುಂದಿದ್ದಾರೆ ನಟಿ ರಶ್ಮಿಕಾ.. ಹಾಗಾದ್ರೆ ನ್ಯಾಷನಲ್‌ ಕ್ರಶ್‌ ಓದಿದ್ದೇನು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News