ಹಳ್ಳಿಯನ್ನು ದತ್ತು ಪಡೆದ ನೀನಾಸಂ ಸತೀಶ್!

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹುಲ್ಲೆಗಾಲ ಎಂಬ ಗ್ರಾಮವನ್ನು ದತ್ತು ಪಡೆದಿರುವ ಅವರು, ಮಾದರಿ ಗ್ರಾಮವನ್ನಾಗಿಸಲು ಮುಂದಾಗಿದ್ದಾರೆ. 

Last Updated : Jun 18, 2018, 02:49 PM IST
ಹಳ್ಳಿಯನ್ನು ದತ್ತು ಪಡೆದ ನೀನಾಸಂ ಸತೀಶ್! title=

ಬೆಂಗಳೂರು: ಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ನೀನಾಸಂ ಸತೀಶ್ ಇದೀಗ ಮಹತ್ವದ ಯೋಜನೆಯೊಂದಕ್ಕೆ ಕೈ ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹುಲ್ಲೆಗಾಲ ಎಂಬ ಗ್ರಾಮವನ್ನು ದತ್ತು ಪಡೆದಿರುವ ಅವರು, ಮಾದರಿ ಗ್ರಾಮವನ್ನಾಗಿಸಲು ಮುಂದಾಗಿದ್ದಾರೆ. 

ಈ ಬಗ್ಗೆ ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿರುವ ಸತೀಶ್ ಅವರು, "ನಾನು ಹಳ್ಳಿಯಿಂದ ಬಂದವನು. ಹಾಗಾಗಿ ಅಲ್ಲಿನ ಅಭಿವೃದ್ಧಿಗೆ ನನ್ನ ಕೈಲಾದಷ್ಟು ಕೆಲಸ ಮಾಡಬೇಕು ಎಂಬ ಕನಸಿತ್ತು. ಹಾಗಾಗಿ ಹಲವಾರು ಹಳ್ಳಿಗಳನ್ನು ಸುತ್ತಿದೆ. ಹುಲ್ಲೆಗಾಲ ಗ್ರಾಮ ಅನೇಕ ಸಮಸ್ಯೆಗಳಿಂದ ಕೂಡಿತ್ತು. ದತ್ತು ಪಡೆದಿದ್ದೇನೆ. ನಮ್ಮ ಟೀಮ್‌ನ ನೂರಾರು ಸದಸ್ಯರು ಸೇರಿಕೊಂಡು ಈ ಹಳ್ಳಿಯನ್ನು ಮಾದರಿ ಗ್ರಾಮ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ" ಎಂದಿದ್ದಾರೆ.

ನೀನಾಸಂ ಸತೀಶ್ ನೇತೃತ್ವದ ಟೀಮ್ ಸತೀಶ್ ಪಿಕ್ಚರ್ಸ್ ಅಡಿಯಲ್ಲಿ ಹುಲ್ಲೆಗಾಲ ಹಳ್ಳಿಯನ್ನು ದತ್ತು ಪಡೆಯಲಾಗಿದ್ದು, ಸುಮಾರು 100 ರಿಂದ 150 ಸ್ವಯಂ ಸೇವಕರು ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ‘ಅಯೋಗ್ಯ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದ ನೀನಾಸಂ ಸತೀಶ ಅವರು, ಸದ್ಯ ಚಿತ್ರಿಕರ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ.

Trending News