ದುಬೈನಲ್ಲಿ ನರೇಶ್ ಪವಿತ್ರ ಹನಿಮೂನ್..! ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಟ್ಟ ಜೋಡಿ

ಟಾಲಿವುಡ್‌ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಮದುವೆಯಾಗಿದ್ದಾರೆ ಎನ್ನುವ ವಿಡಿಯೋ ಒಂದನ್ನು ಹಂಚಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಅವರಿಬ್ಬರೂ ಹೈದರಾಬಾದ್‌ನಲ್ಲಿ ಮದುವೆಯಾಗಿದ್ದು, ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ ಎಂದು ವಿಡಿಯೋ ಹಂಚಿಕೊಂಡು ಅಭಿಮಾನಿಗಳ ಆರ್ಶೀವಾದ ಕೇಳಿದ್ದರು. ಇದೀಗ ಅವರಿಬ್ಬರೂ ದುಬೈಗೆ ಹನಿಮೂನ್‌ಗೆ ತೆರಳಿದ್ದಾರೆ ಎನ್ನಲಾಗಿದೆ.

Written by - Krishna N K | Last Updated : Mar 10, 2023, 08:37 PM IST
  • ಟಾಲಿವುಡ್‌ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಮದುವೆಯಾಗಿದ್ದಾರೆ.
  • ವಿಡಿಯೋ ಮೂಲಕ ಮದುವೆ ವಿಚಾರ ಹಂಚಿಕೊಂಡಿರುವ ಸುದ್ದಿ ಎಲ್ಲರಿಗೂ ಗೊತ್ತೆ ಇದೆ.
  • ಇದೀಗ ಇಬ್ಬರು ಹನಿಮೂನ್‌ಗಾಗಿ ದುಬೈಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ದುಬೈನಲ್ಲಿ ನರೇಶ್ ಪವಿತ್ರ ಹನಿಮೂನ್..! ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಟ್ಟ ಜೋಡಿ title=

Naresh Pavitra Honeymoon : ಟಾಲಿವುಡ್‌ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಮದುವೆಯಾಗಿದ್ದಾರೆ ಎನ್ನುವ ವಿಡಿಯೋ ಒಂದನ್ನು ಹಂಚಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಅವರಿಬ್ಬರೂ ಹೈದರಾಬಾದ್‌ನಲ್ಲಿ ಮದುವೆಯಾಗಿದ್ದು, ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ ಎಂದು ವಿಡಿಯೋ ಹಂಚಿಕೊಂಡು ಅಭಿಮಾನಿಗಳ ಆರ್ಶೀವಾದ ಕೇಳಿದ್ದರು. ಇದೀಗ ಅವರಿಬ್ಬರೂ ದುಬೈಗೆ ಹನಿಮೂನ್‌ಗೆ ತೆರಳಿದ್ದಾರೆ ಎನ್ನಲಾಗಿದೆ.

ಮದುವೆ ವಿಡಿಯೋ ನಂತರ ಇಬ್ಬರೂ ಹನಿಮೂನ್‌ಗೆ ದುಬೈಗೆ ತೆರಳಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ವಿ.ಕೆ.ನರೇಶ್ ಮೂರು ಮದುವೆಯಾಗಿದ್ದು, ಮೂರೂ ಪತ್ನಿಯರಿಂದ ದೂರವಾಗಿದ್ದಾರೆ. ಪ್ರಸ್ತುತ ಅವರು ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇದನ ನೀಡಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪವಿತ್ರಾ ಲೋಕೇಶ್ ಗೆ ಹತ್ತಿರವಾಗುತ್ತಿದ್ದ ನರೇಶ್, ಆಕೆಯನ್ನು ಮದುವೆಯಾಗಲಿದ್ದಾರೆ ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿ ಬರುತ್ತಿವೆ.

ಇದನ್ನೂ ಓದಿ:ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಇಂಡಸ್ಟ್ರಿ ಹಿಟ್ಸ್ ಸಿನಿಮಾ ಮಾಡಿದ ನಟರಿವರು: ಕನ್ನಡದ ಈ ಒಬ್ಬರಿಗೆ ಮಾತ್ರ ಸ್ಥಾನ!

ಆದರೆ ಒಬ್ಬ ಪತ್ನಿಗೆ ವಿಚ್ಛೇದನ ನೀಡದೆ ಮದುವೆಯಾಗುವುದು ಕಾನೂನಿಗೆ ವಿರುದ್ಧವಾಗಿ ಅಪರಾಧ ಅದ್ದರಿಂದ ನರೇಶ್ ಇಷ್ಟು ವರ್ಷ ಮೌನವಾಗಿದ್ದರು ಎನ್ನಲಾಗಿದೆ. ಆದರೆ ಇದೀಗ ನರೇಶ್ ಮದುವೆಯಾಗಿ ದುಬೈನಲ್ಲಿ ಹನಿಮೂನ್‌ಗೆ ಹೋಗಿದ್ದಾರೆ ಎನ್ನುವ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ. ಅದ್ರೆ  ಈ ಸುದ್ದಿ ಸುಳ್ಳು ಅವರು ತಮ್ಮ ಪ್ರೇಮ ಕಥೆಗೆ ಸಂಬಂಧಿಸಿದ ಸಿನಿಮಾ ಮಾಡಲು ಹಾಗೂ ಚಿತ್ರೀಕರಣಕ್ಕಾಗಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಸತ್ಯಾಸತ್ಯತೆಯ ಬಗ್ಗೆ ಸ್ಪಷ್ಟತೆ ಇಲ್ಲ. ಇಂದು ಬೆಳಗ್ಗೆಯಿಂದ ನರೇಶ್ ಮತ್ತು ಪವಿತ್ರ ಮದುವೆ ವಿಚಾರ ದೊಡ್ಡ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ ಎಂದೇ ಹೇಳಬಹುದು. ಈ ವಿಚಾರದಲ್ಲಿ ನರೇಶ್ ಅಥವಾ ಪವಿತ್ರಾ ಲೋಕೇಶ್ ಇದುವರೆಗೂ ಒಂದು ಸ್ಪಷ್ಟನೆ ನೀಡಿಲ್ಲ. ಅಥವಾ ತಮ್ಮ ಸಿನಿಮಾ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರಾ ಎನ್ನುವ ಹಲವಾರು ವಿಚಾರಗಳಿಗೆ ಈ ಜೋಡಿ ಸ್ಪಷ್ಟತೆ ನೀಡಬೇಕಿದೆ. ಅಲ್ಲದೆ, ಹೊಸ ಸಿನಿಮಾದ ಟೈಟಲ್‌ ಸಹ ಘೋಷಣೆ ಮಾಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News