Bigg Boss Kannada 11 Winner: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ಬಾರಿ ಇಬ್ಬರು ಸ್ಪರ್ಧಿಗಳು ವಿನ್ನರ್ ಆಗಲಿದ್ದಾರಾ ಎಂಬ ಅನುಮಾನವೊಂದು ವೀಕ್ಷಕರನ್ನು ಕಾಡುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣವೂ ಇದೆ. ಈ ಎಲ್ಲದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Bigg Boss Kannada 11 Winner: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ಬಾರಿ ಇಬ್ಬರು ಸ್ಪರ್ಧಿಗಳು ವಿನ್ನರ್ ಆಗಲಿದ್ದಾರಾ ಎಂಬ ಅನುಮಾನವೊಂದು ವೀಕ್ಷಕರನ್ನು ಕಾಡುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣವೂ ಇದೆ. ಈ ಎಲ್ಲದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ..
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಫಿನಾಲೆ ವೀಕ್ ಆರಂಭವಾಗಿದೆ. ಈ ಸಲ ಆರು ಜನರು ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಹನುಮಂತ, ಮಂಜು, ಮೋಕ್ಷಿತಾ, ರಜತ್, ಭವ್ಯಾ ಮತ್ತು ತ್ರಿವಿಕ್ರಮ್ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಫಿನಾಲೆ ವಾರಕ್ಕೆ ತಲುಪಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಫಿನಾಲೆ ವಾರಕ್ಕೂ ಮುನ್ನ ನಡೆದ ಕೊನೆಯ ಕಿಚ್ಚನ ಪಂಚಾಯ್ತಿಯಲ್ಲಿ ಬಿಗ್ ಬಾಸ್ ಗೆದ್ದವರಿಗೆ ಸಿಗುವ ಟ್ರೋಫಿಯನ್ನು ರಿವೀಲ್ ಮಾಡಲಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಯಾರು ವಿನ್ನರ್ ಆಗಬಹುದೆಂಬ ಕುತೂಹಲದ ನಡುವೆ ಈ ಬಾರಿ ಇಬ್ಬರ ಪಾಲಿಗೆ ಗೆಲುವು ಸಿಗಲಿದೆ ಎಂಬ ಅನುಮಾನ ಕೂಡ ಪ್ರೇಕ್ಷಕರಲ್ಲಿ ಮೂಡಿದೆ.
ಇದಕ್ಕೆ ಒಂದಿಷ್ಟು ಕಾರಣಗಳಿವೆ. ಬಿಗ್ ಬಾಸ್ ಕನ್ನಡ ಸೀಸನ್ 11 ಅನ್ನು ಸಂಪೂರ್ಣವಾಗಿ ಅನಲೈಸಿಸ್ ಮಾಡಿದಾಗ ಕೆಲವೊಂದಿಷ್ಟು ಸುಳಿವುಗಳು ಸಿಗುತ್ತವೆ. ಬಿಗ್ ಬಾಸ್ ಕನ್ನಡ ಸೀಸನ್ 11 ರ ಆರಂಭದಲ್ಲೇ ಬಿಟ್ಟ ಪ್ರೋಮೋದಲ್ಲಿ ಈ ಬಾರಿ ಎಲ್ಲವೂ ಎರಡೆರಡು ಇರಲಿವೆ ಎಂಬ ಸಂಗತಿಯನ್ನು ತಿಳಿಸಿದ್ದರು.
ಈ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ಬಾರಿ ನರಕ ಮತ್ತು ಸ್ವರ್ಗ ಎಂಬ ಎರಡು ಮನೆಗಳನ್ನು ಮಾಡಲಾಗಿತ್ತು. ಎರಡಲ್ಲೂ ಸ್ಪರ್ಧಿಗಳನ್ನು ಹಾಕಲಾಗಿತ್ತು. ಇಬ್ಬರಿಗೂ ಟಾಸ್ಕ್‌ಗಳನ್ನು ಮತ್ತು ಮನೆಯ ಕೆಲಸಗಳಲ್ಲಿಯೂ ವ್ಯತ್ಯಾಸವಿತ್ತು.
ಆರಂಭದಲ್ಲಿ ಬಿಗ್ ಬಾಸ್ ಎರಡು ಮನೆಗಳಿಂದ ಶುರುವಾದ ಕಾರಣ ಈ ಸಲ ವಿನ್ನರ್ ಕೂಡ ಇಬ್ಬರು ಆಗಬಹುದೆಂಬ ಅನುಮಾನ ಹೆಚ್ಚಾಗುತ್ತಿದೆ. ನರಕವಾಸಿಗಳಲ್ಲಿ ಒಬ್ಬರನ್ನು ಮತ್ತು ಸ್ವರ್ಗ ವಾಸಿಗಳಲ್ಲಿ ಒಬ್ಬರನ್ನು ಸೇರಿ ಇಬ್ಬರು ಸ್ಪರ್ಧಿಗಳನ್ನು ವಿನ್ನರ್ ಮಾಡಬಹುದು ಎಂಬ ಅನುಮಾನ ಮೂಡುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ನರಕವಾಸಿಗಳಲ್ಲಿ ಮೋಕ್ಷಿತಾ ಪೈ ಒಬ್ಬರೇ ಈಗ ಫಿನಾಲೆ ಹಂತಕ್ಕೆ ಬಂದು ನಿಂತಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್ ಮತ್ತು ಭವ್ಯಾ ಫಿನಾಲೆ ಹಂತದಲ್ಲಿದ್ದಾರೆ. ಇನ್ನುಳಿದ ರಜತ್ ಮತ್ತು ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿಗಳಾಗಿದ್ದಾರೆ.
ಬಿಗ್ ಬಾಸ್ ಸೀಸನ್ 3 ರಲ್ಲಿ ನಟಿ ಶೃತಿ ಹೊರತು ಪಡಿಸಿದರೆ ಬೇರೆ ಯಾವ ಸೀನಸ್ ನಲ್ಲೂ ಲೇಡಿ ಕಂಟೆಸ್ಟಂಟ್ ವಿನ್ನರ್ ಆಗಿರಲಿಲ್ಲ. ಹೀಗಾಗಿ ಈ ಬಾರಿ ನರಕವಾಸಿಗಳಲ್ಲಿ ಫಿನಾಲೆ ಹಂತಕ್ಕೆ ಬಂದ ಒನ್ ಆಂಡ್ ಓನ್ಲಿ ಸ್ಪರ್ಧಿ ಮೋಕ್ಷಿತಾ ಅವರಿಗೆ ಗೆಲುವಿನ ಸಿಹಿ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ.
ಇನ್ನೂ ಸ್ವರ್ಗವಾಸಿಗಳಲ್ಲಿ ಉಗ್ರಂ ಮಂಜು, ತ್ರಿವಿಕ್ರಮ್ ಮತ್ತು ಭವ್ಯಾ ಈ ಮೂವರಲ್ಲಿ ಮಂಜು ಅವರನ್ನು ವಿನ್ನರ್ ಮಾಡಬಹುದು ಎಂಬ ಅನುಮಾನ ಮೂಡುತ್ತಿದೆ ಎಂಬ ಬಿಬಿಕೆ11 ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಒಂದು ಕಾರಣವಿದೆ.
ಬಿಗ್ ಬಾಸ್ ಸೀಸನ್ 11 ರಲ್ಲಿ ಉಗ್ರಂ ಮಂಜು ಕ್ಯಾಪ್ಟನ್ ಆದ ವೇಳೆ ರಾಜನ ಟಾಸ್ಕ್ ಒಂದನ್ನು ನೀಡಲಾಗಿತ್ತು. ಅಲ್ಲಿ ಮಂಜು ರಾಜನಾಗಿದ್ದರು. ಇವರಿಗೆ ತಂಗಿಯಾಗಿದ್ದ ಮೋಕ್ಷಿತಾ ಯುವರಾಣಿಯಾಗಿದ್ದರು. ಈ ಟಾಸ್ಕ್ ಮೂಲಕ ಇವರಿಬ್ಬರು ವಿನ್ನರ್ ಎಂಬ ಸುಳಿವನ್ನು ಮೊದಲೇ ನೀಡಿದ್ದರಾ ಎಂಬ ಡೌಟ್ ವೀಕ್ಷಕರ ಮನದಲ್ಲಿ ಮೂಡಿದೆಯಂತೆ.
ಈ ಬಾರಿಯ ಬಿಗ್ ಬಾಸ್ ಟ್ರೋಫಿ ಕೂಡ ತುಂಬಾ ಡಿಫರೆಂಟ್ ಆಗಿದೆ. ಪ್ರತಿ ಬಾರಿ ಕಣ್ಣನ್ನು ಹೊಂದಿರುತ್ತಿದ್ದ ಬಿಗ್ ಬಾಸ್ ಟ್ರೋಫಿ ಈ ಸಹ ಎರಡು ರೆಕ್ಕೆಗಳನ್ನು ಹೊಂದಿದೆ. ಎರಡು ರೆಕ್ಕೆಗಳ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ನರ್ ಎಂದು ಬರೆದಿದ್ದು, ಇದು ಡಬಲ್ ವಿನ್ನರ್ ಸುಳಿವಿರಬಹುದು ಎನ್ನಲಾಗ್ತಿದೆ.
ಈ ಕಾರಣದಿಂದ ಮೋಕ್ಷಿತಾ ಮತ್ತು ಮಂಜು ಇಬ್ಬರೂ ಬಿಗ್ ಬಾಸ್ ವಿನ್ನರ್ ಆಗಬಹುದು ಎನ್ನಲಾಗ್ತಿದೆ. ಅಥವಾ ಉಗ್ರಂ ಮಂಜು ವಿನ್ನರ್ ಆಗಿ ಮೋಕ್ಷಿತಾ ರನ್ನರ್ ಆಗಬಹುದು ಇಲ್ಲವೇ ಮೋಕ್ಷಿತಾ ವಿನ್ನರ್ ಆಗಿ ಮಂಜು ರನ್ನರ್ ಆಗಬಹುದು ಎಂಬ ಸುದ್ದಿ ವೈರಲ್ ಆಗುತ್ತಿದೆ.
ಹಾಗಾದ್ರೆ ಎಲ್ಲರ ಮನಗೆದ್ದ ಹನುಮಂತನ ಕತೆ ಏನು? ಎಂಬ ಪ್ರಶ್ನೆ ಮೂಡಬಹುದು. ಮಂಜು ಮತ್ತು ಮೋಕ್ಷಿತಾ ಇಬ್ಬರೂ ವಿನ್ನರ್ ಆದರೆ ಹನುಮಂತ ಫಸ್ಟ್ ರನ್ನರ್ ಅಪ್ ಆಗಬಹುದು ಅಥವಾ ಹನುಮಂತ ಟಾಪ್ 3 ಸ್ಥಾನದಲ್ಲಿ ಸೆಕೆಂಡ್ ರನ್ನರ್ ಆಗಬಹುದು ಎಂಬ ಸುದ್ದಿ ವೈರಲ್ ಆಗುತ್ತಿದೆ.
ಗಮನಿಸಬೇಕಾದ ಸಂಗತಿ - ಇದು ವರದಿಗಳನ್ನು ಮತ್ತು ವೈರಲ್ ಸಂಗತಿಗಳನ್ನು ಆಧರಿಸಿ ಬರೆದ ಸುದ್ದಿಯಾಗಿದೆ. ನಿಖರ ಮಾಹಿತಿಯಲ್ಲ. ಜೀ ಕನ್ನಡ ನ್ಯೂಸ್ ಹೊಣೆಗಾರನಲ್ಲ. ಈ ಎಲ್ಲದಕ್ಕೂ ಉತ್ತರ ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಫಿನಾಲೆಯಲ್ಲಿ ದೊರೆಯಲಿದೆ.