Dasara OTT Release Date: ಒಟಿಟಿಯಲ್ಲೀಗ ನಾನಿ ಹವಾ.. ಈ ದಿನದಿಂದ ದಸರಾ ಸ್ಟ್ರೀಮಿಂಗ್‌ ಶುರು!

Dasara OTT Release Date: ಥಿಯೇಟರ್ ನಲ್ಲಿ ಹಿಟ್‌ ಪಡೆದ ಬಳಿಕ, ನಾನಿ ಒಟಿಟಿಯಲ್ಲಿ ಘರ್ಜಿಸಲು ನಾನಿ ಬರುತ್ತಿದ್ದಾರೆ. ನಾನಿ ನಟನೆಯ ದಸರಾ ಸಿನಿಮಾ OTT ಪ್ಲಾಟ್‌ಫಾರ್ಮ್ ನಲ್ಲಿ ಬಿಡುಗಡೆಯಾಗಲಿದೆ.  

Written by - Chetana Devarmani | Last Updated : May 20, 2023, 06:19 PM IST
  • ನಾನಿ ನಟನೆಯ ದಸರಾ ಸಿನಿಮಾ
  • ಒಟಿಟಿಯಲ್ಲೀಗ ನಾನಿ ಹವಾ
  • OTT ಪ್ಲಾಟ್‌ಫಾರ್ಮ್ ನಲ್ಲಿ ದಸರಾ
Dasara OTT Release Date: ಒಟಿಟಿಯಲ್ಲೀಗ ನಾನಿ ಹವಾ.. ಈ ದಿನದಿಂದ ದಸರಾ ಸ್ಟ್ರೀಮಿಂಗ್‌ ಶುರು! title=
Dasara

Dasara OTT Release Date: ದಕ್ಷಿಣದ ಅತ್ಯುತ್ತಮ ನಟರಲ್ಲಿ ಸೂಪರ್‌ಸ್ಟಾರ್ ನಾನಿ ಅವರ ಹೆಸರೂ ಸೇರಿದೆ. ಅವರ ದಸರಾ ಸಿನಿಮಾ ಕೆಲವು ತಿಂಗಳ ಹಿಂದೆ ಬಿಡುಗಡೆಯಾಐಇತು. ಅಲ್ಲದೇ, ಜನರ ಮನಸ್ಸನ್ನು ಸಹ ಗೆದ್ದಿತು. ಈ ಚಿತ್ರವನ್ನು ಅಲ್ಲು ಅರ್ಜುನ್ ಅವರ ಪುಷ್ಪಾಗೆ ಹೆಚ್ಚಿನ ಪ್ರಮಾಣದಲ್ಲಿ ಹೋಲಿಸಲಾಯಿತು ಮತ್ತು ಈಗ ಥಿಯೇಟರ್ ನಲ್ಲಿ ಹಿಟ್‌ ಪಡೆದ ಬಳಿಕ, ನಾನಿ ಒಟಿಟಿಯಲ್ಲಿ ಘರ್ಜಿಸುವುದನ್ನು ಕಾಣಬಹುದು. ಚಿತ್ರವು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಪುಷ್ಪ, ಕೆಜಿಎಫ್, ಕಾಂತಾರ ಚಿತ್ರಗಳ ನಂತರ ದಸರಾ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಬಾಕ್ಸ್ ಆಫೀಸ್ ನಲ್ಲೂ ಚಿತ್ರ ಉತ್ತಮ ಕಲೆಕ್ಷನ್ ಮಾಡಿದೆ. ಅಂದಿನಿಂದ ಹಿಂದಿ ಪ್ರೇಕ್ಷಕರು ದಸರಾ OTT ಬಿಡುಗಡೆಗಾಗಿ ಕಾಯುತ್ತಿದ್ದರು ಮತ್ತು ಈಗ ಅಂತಿಮವಾಗಿ ದಸರಾ ಒಟಿಟಿಗೆ ಬರಲಿದೆ.

ಇದನ್ನೂ ಓದಿ: ಟೊವಿನೋ ಥಾಮಸ್ ʼARMʼ ಟೀಸರ್ ರಿಲೀಸ್ ಮಾಡಿದ  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಇದು ಸಂಪೂರ್ಣ ಸೌತ್ ಚಿತ್ರವಾಗಿದ್ದು, ನೀವು ಎಲ್ಲೆಡೆ ದಕ್ಷಿಣ ಭಾರತದ ಝಲಕ್‌ಗಳನ್ನು ನೋಡುತ್ತೀರಿ. ಎರಡು ಗುಂಪುಗಳ ನಡುವೆ ಹಿಂದಿನಿಂದಲೂ ರಾಜಕೀಯ ನಡೆಯುತ್ತಿದ್ದ ಹಳ್ಳಿಯ ಕಥೆಯಿದು. ಅದೇ ಹೊತ್ತಿಗೆ ಊರಿನ ಜನರೆಲ್ಲ ದುಡಿದು ದಿನವಿಡೀ ನಶೆಯಲ್ಲಿಯೇ ಇರುತ್ತಾರೆ. ಆದರೆ ಹಳ್ಳಿಯ ರಾಜಕೀಯ ನಾನಿ ಬದುಕಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದರ ಮೇಲೆ ಇಡೀ ಚಿತ್ರ ಸಾಗುತ್ತದೆ. ಚಿತ್ರ ಬಿಡುಗಡೆಯಾದ ನಂತರ ತಾರಾ ಬಳಗದ ನಟನೆಗೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಲ್ಲೂ ನಾನಿ ಈ ಪಾತ್ರಕ್ಕೆ ಜೀವ ತುಂಬಿದ್ದರು.

ಅಂದಹಾಗೆ, ಈ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ಈ ಚಿತ್ರವನ್ನು ಅಲ್ಲು ಅರ್ಜುನ್ ಅವರ ಪುಷ್ಪಾ ಜೊತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೋಲಿಸಲಾಯಿತು. ಚಿತ್ರವಷ್ಟೇ ಅಲ್ಲ, ನಾನಿ ಅವರ ಇಂಟೆನ್ಸ್ ಲುಕ್ ಕೂಡ ಅಲ್ಲು ಅರ್ಜುನ್ ಅವರನ್ನು ಬಹಳ ಮಟ್ಟಿಗೆ ಹೋಲುತ್ತದೆ ಎಂದು ಅನೇಕರು ಹೇಳಿದ್ದರು. ದಸರಾ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಮೇ 25 ರಂದು ಸ್ಟ್ರೀಮ್ ಆಗಲಿದೆ.  

ಇದನ್ನೂ ಓದಿ: ನಿಕ್ ಜೋನಾಸ್‌ಗೆ ಹಿಂದಿಯ ಈ ಬೈಗುಳ ಕಲಿಸಿದ ಪ್ರಿಯಾಂಕಾ ಚೋಪ್ರಾ ಸ್ನೇಹಿತರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News