Mrunal Thakur: ಮದುವೆಗೂ ಮೊದಲೇ ಮಗುವಿನ ಬಯಕೆ ವ್ಯಕ್ತಪಡಿಸಿದ ಸೀತಾ ರಾಮಂ ಸುಂದರಿ!

Actress Mrunal Thakur: ಬಾಲಿವುಡ್‌ ನಟಿ ಮೃಣಾಲ್ ಠಾಕೂರ್ ವೈಯಕ್ತಿಕ ವಿಚಾರಗಳ ಬಗ್ಗೆ ಅಷ್ಟಾಗಿ ಮಾತನಾಡದ ನಟಿ, ಇದೀಗ ಮದುವೆ ಹಾಗೂ ಮಕ್ಕಳನ್ನು ಹೊಂದುವ ವಿಚಾರದ ಬಗ್ಗೆ ಹಂಚಿಕೊಂಡಿದ್ದಾರೆ. ಹಾಗಿದ್ರೇ ಈ ನಟಿ ಹೇಳಿದ್ದಾದರೂ ಏನು? ಇಲ್ಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Apr 25, 2024, 04:46 PM IST
  • ಮದುವೆ ಆದರೂ ಕೂಡ ಅನೇಕ ಸೆಲೆಬ್ರಿಟಿಗಳು ಕೆಲವು ವರ್ಷಗಳ ಕಾಲ ಮಗುವನ್ನು ಪಡೆಯಲು ಮುಂದೂಡುತ್ತಾರೆ.
  • ಮೃಣಾಲ್ ಠಾಕೂರ್‌ ಮದುವೆ ಹಾಗೂ ಮಕ್ಕಳನ್ನು ಹೊಂದುವ ವಿಚಾರದ ಬಗ್ಗೆ ಮಾತಾಡಿದ್ದಾರೆ.
  • ನಟಿ ಮೃಣಾಲ್‌ ಠಾಕೂರ್‌ ʻಸಂಬಂಧಗಳನ್ನು ಹೊಂದುವುದು ಕಷ್ಟದ ವಿಚಾರವಾಗಿದೆ. ನನ್ನ ಸಿನಿಮಾ ಕೆಲಸವನ್ನು ಅರ್ಥ ಮಾಡಿಕೊಳ್ಳಬೇಕು.
Mrunal Thakur: ಮದುವೆಗೂ ಮೊದಲೇ ಮಗುವಿನ ಬಯಕೆ ವ್ಯಕ್ತಪಡಿಸಿದ ಸೀತಾ ರಾಮಂ ಸುಂದರಿ! title=

Mrunal Thakur Talks About Baby: ಬಾಲಿವುಡ್‌ ನಟಿ ಮೃಣಾಲ್ ಠಾಕೂರ್ ವೈಯಕ್ತಿಕ ವಿಚಾರಗಳ ಬಗ್ಗೆ ಹಂಚಿಕೊಳ್ಳೋದು ತೀರ ಕಡಿಮೆಯಾಗಿದ್ದರೂ, ಈ ನನಟಿ ಮದುವೆಗೂ ಮುನ್ನವೇ ಮಗುವಿನ ಬಯಕೆ ಬಗ್ಗೆ ಮಾತನಾಡಿದ್ದಾರೆ. ಹಲವಾರು ನಟಿಮಣಿಯರು ಸಿನಿ ಕೆರಿಯರ್ ಕಾರಣದಿಂದಾಗ ತಡವಾಗಿ ಮದುವೆ ಆಗುತ್ತಾರೆ. ಮತ್ತೆ ಮದುವೆ ಆದರೂ ಕೂಡ ಅನೇಕ ಸೆಲೆಬ್ರಿಟಿಗಳು ಕೆಲವು ವರ್ಷಗಳ ಕಾಲ ಮಗುವನ್ನು ಪಡೆಯಲು ಮುಂದೂಡುತ್ತಾರೆ. ಇನ್ನು ಹಲವರು  ಎಗ್ ಫ್ರೀಜಿಂಗ್ ತಂತ್ರಜ್ಞಾನದ ಮೊರೆ ಹೋಗುತ್ತಾರೆ.

ಈ ಹಿಂದೆ ನಟಿ ಮೋನಾ ಸಿಂಗ್ ತಮ್ಮ 34ನೇ ವಯಸ್ಸಿನಲ್ಲಿ ಎಗ್ ಫ್ರೀಜ್ ಮಾಡಿದ್ದಾಗಿ ಹೇಳಿದ್ದರು. ಇದೀಗ ಈ ನಟಿಗೆ  42 ವರ್ಷ ಆಗಿದೆ. ಇವರಂತೆಯೇ ನಟಿ ಮೃಣಾಲ್ ಠಾಕೂರ್ ಕೂಡ ಇದೇ ಆಲೋಚನೆಯಲ್ಲಿ ಇದ್ದಾರೆ. ನಟಿ ಮೃಣಾಲ್ ಠಾಕೂರ್‌ ಮದುವೆ ಹಾಗೂ ಮಕ್ಕಳನ್ನು ಹೊಂದುವ ವಿಚಾರದ ಬಗ್ಗೆ ಮಾತಾಡಿದ್ದು, ಈಕೆ  ಶೀಘ್ರವೇ ಮದುವೆಯಾದರೂ ಸಹ ಮಗು ಪಡೆಯೋ ಆಲೋಚನೆ ತಮಗೆ ಇಲ್ಲವೆಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Keerthy Suresh: ಸೌತ್‌ ಸುಂದರಿ ಕೀರ್ತಿ ಸುರೇಶ್‌ ಉಟ್ಟಿರುವ ಡಿಸೈನರ್ ಸೀರೆಯ ಬೆಲೆಯೆಷ್ಟು ಗೊತ್ತೇ?

ನಟಿ ಮೃಣಾಲ್‌ ಠಾಕೂರ್‌ ʻಸಂಬಂಧಗಳನ್ನು ಹೊಂದುವುದು ಕಷ್ಟದ ವಿಚಾರವಾಗಿದೆ. ನನ್ನ ಸಿನಿಮಾ ಕೆಲಸವನ್ನು ಅರ್ಥ ಮಾಡಿಕೊಳ್ಳಬೇಕು. ಮದುವೆಗೂ ಮುನ್ನವೇ ನಾನು ಕೂಡ ನನ್ನ ಎಗ್‌ಗಳನ್ನು ಫ್ರೀಜ್ ಮಾಡುವ ವಿಚಾರದ ಬಗ್ಗೆ ಆಲೋಚಿಸುತ್ತಿದ್ದೇನೆʼ ಎಂದು ಹೇಳಿದ್ದಾರೆ. ಈ ನಟಿ ಹಲವಾರು ಬಾರಿ ಬಾಡಿ ಶೇಮಿಂಗ್ ಒಳಗಾಗಿದ್ದಾರೆ. ಹಾಗೆಯೇ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದಕ್ಕೆ  ಟ್ರೋಲ್‌ಗೂ ಓಳಗಾಗಿದ್ದಾರೆ. ಅಂತಹ ಸಂದರ್ಭಗಳಲ್ಲಿ ಈ ನಟಿ ಕುಗ್ಗಿದ್ದಾಗ ತನಗೆ ಬೆಂಬಲವಾಗಿ ನಿಂತ ತಮ್ಮ ಕುಟುಂಬದ ಬಗ್ಗೆಯೂ ಹೇಳಿಕೊಂಡಿದ್ದರು.

ಸಾಲು ಸಾಲು ಟಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಮೃಣಾಲ್ ಠಾಕೂರ್, ಸದ್ಯ ಹೈದಾರಾಬಾದ್‌ಗೆ  ಶಿಫ್ಟ್ ಆಗಿ ಅಲ್ಲಿಯೇ, ಈಕೆ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗ್ತಿದೆ. ಈ ನಟಿ ಸೀತಾ ರಾಮಂ ಚಿತ್ರದಲ್ಲಿ ರಾಮನ ಪ್ರೀತಿಯ ಸೀತಾ ಮಹಾಲಕ್ಷ್ಮೀಯಾಗಿ ತನ್ನ ಅತ್ಯದ್ಭುತ ಅಭಿನಯದಿಂದ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಅಷ್ಟು ಮಾತ್ರವಲ್ಲದೇ ಈ ನಟಿ ಇದೇ ವರ್ಷ ತೆರೆಕಂಡ ಫ್ಯಾಮಿಲಿ ಸ್ಟಾರ್‌ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News