Rakhi Sawant: ರಾಖಿ ಸಾವಂತ್ ಅವರನ್ನು ಸಾರ್ವಜನಿಕವಾಗಿ ಬಲವಂತವಾಗಿ ಕಿಸ್ ಮಾಡಿದ ಆರೋಪವನ್ನು ಖ್ಯಾತ ಸಿಂಗರ್ ಒಬ್ಬರು ಎದುರಿಸುತ್ತಿದ್ದಾರೆ. ವಿವಾದಗಳ ರಾಣಿ ರಾಖಿ ಸಾವಂತ್ ಅವರ ಜನ್ಮದಿನದ ಪಾರ್ಟಿಯಲ್ಲಿ ಮಿಕಾ ಸಿಂಗ್ ಅವರನ್ನು ಬಲವಂತವಾಗಿ ಚುಂಬಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಇದೀಗ ಸಿಂಗರ್ ಮಿಕಾ ಅವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲದೇ, ಈ ಕೇಸ್ ಕ್ಲೋಸ್ ಮಾಡುವಂತೆ ಮನವಿ ಮಾಡಿದ್ದಾರೆ.
ರಾಖಿ ಸಾವಂತ್ ಅವರಿಗೆ ಮಿಕಾ ಸಿಂಗ್ ಬಲವಂತವಾಗಿ ಚುಂಬಿಸಿದ ವಿಡಿಯೋ ಆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದರಿಂದ ಕೋಪಗೊಂಡ ರಾಖಿ ಸಾವಂತ್ ಪೊಲೀಸರ ಮೊರೆ ಹೋಗಿದ್ದು, ಮಿಕಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅದೇ ಸಮಯದಲ್ಲಿ, 17 ವರ್ಷಗಳ ನಂತರ, ಈ ವಿಷಯವು ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ಮಿಕಾ ಸಿಂಗ್ ಮುಂಬೈ ಹೈಕೋರ್ಟ್ ಮೊರೆ ಹೋಗಿರುವುದು.
ಇದನ್ನೂ ಓದಿ: Highest Paid actors: ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಕನ್ನಡ ಹೀರೋಗಳು ಇವರೇ!
ಇದು 2006 ರ ಕಥೆ. ಈ ಸಂದರ್ಭ ಮಿಕಾ ಸಿಂಗ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಅವರು ತಮ್ಮ ಸ್ನೇಹಿತರೆಲ್ಲರನ್ನು ಆಹ್ವಾನಿಸಿದ್ದರು. ಪಾರ್ಟಿಯು ಭರದಿಂದ ಸಾಗುತ್ತಿದ್ದು, ಕೇಕ್ ಕತ್ತರಿಸುವ ಸಮಾರಂಭದಲ್ಲಿ ಮಿಕಾ ಬಲವಂತವಾಗಿ ರಾಖಿ ತುಟಿಗಳಿಗೆ ಮುತ್ತಿಟ್ಟರು. ಇದನ್ನು ಕಂಡು ಅಲ್ಲಿ ನಿಂತಿದ್ದವರೆಲ್ಲ ಬೆಚ್ಚಿಬಿದ್ದರು. ಆಗ ಈ ವಿಷಯ ದೊಡ್ಡ ತಿರುವು ಪಡೆಯುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. ಸಾಕಷ್ಟು ಕೂಗಾಡಿ ಮತ್ತು ಕೋಪಗೊಂಡ ರಾಖಿ ಪೊಲೀಸ್ ಠಾಣೆಗೆ ತಲುಪಿದರು ಮತ್ತು ಮಿಕಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ ಇದೀಗ 17 ವರ್ಷಗಳ ನಂತರ ಮಿಕಾ ವಿಶೇಷ ಮನವಿಯೊಂದಿಗೆ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣವನ್ನು ಈಗಲೇ ಮುಕ್ತಾಯಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಮಿಕಾ ಸಲ್ಲಿಸಿರುವ ಮೇಲ್ಮನವಿಯಲ್ಲಿ ರಾಖಿ ಮತ್ತು ಮಿಕಾ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಷಯವನ್ನು ಇತ್ಯರ್ಥಪಡಿಸಿಕೊಂಡಿರುವುದರಿಂದ ಈಗ ಈ ಅರ್ಜಿಯನ್ನು ವಜಾಗೊಳಿಸಬಹುದು. ಈಗ ಅವರ ನಡುವೆ ಯಾವುದೇ ವಿವಾದವಿಲ್ಲ ಎಂದು ಹೇಳಲಾಗಿದೆ. ಈ ವಿಷಯವು 17 ವರ್ಷಗಳಿಂದ ನಿಶ್ಚಲವಾಗಿದೆ. ರಾಖಿ ಸಾವಂತ್ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಮಿಕಾ ಅವರನ್ನು ಕಿರುಕುಳದ ಆರೋಪದಲ್ಲಿ ಬಂಧಿಸಲಾಗಿತ್ತು.
ಇದನ್ನೂ ಓದಿ: Salman Khan Death Threat: "ಏಪ್ರಿಲ್ 30 ರಂದು ಸಲ್ಮಾನ್ ಖಾನ್ ಕತೆ ಮುಗಿಸುತ್ತೇವೆ"
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.