Martin Teaser: ‘ಮಾರ್ಟಿನ್’ ಚಿತ್ರದ ಟೀಸರ್ ವೀಕ್ಷಣೆಗೆ ಪೇಯ್ಡ್ ಪ್ರೀಮಿಯರ್; ಗೋಶಾಲೆಗಳಿಗೆ ನೆರವು

ಶೂಟಿಂಗ್ ಕಂಪ್ಲೀಟ್ ಆಗ್ತಿದಂತೆ ‘ಮಾರ್ಟಿನ್’ ಬಳಗ ಆಕ್ಟೀವ್ ಆಗಿದ್ದು, ದ್ರುವ ವಿಐಪಿಗಳಿಗೆ ಭರ್ಜರಿ ಸುದ್ದಿ ಕೊಟ್ಟದೆ. ಇದೆ ತಿಂಗಳ 23ಕ್ಕೆ ಪಂಚ ಭಾಷೆಗಳಲ್ಲಿ ‘ಮಾರ್ಟಿನ್’ ಟೀಸರ್ ನ ಅಭಿಮಾನಿಗಳಿಗೆ ಅರ್ಪಿಸಲು ಚಿತ್ರತಂಡ ಅದ್ದೂರಿಯಾಗಿ ತಯಾರಿ ಮಾಡಿಕೊಂಡಿದೆ..

Written by - YASHODHA POOJARI | Edited by - Puttaraj K Alur | Last Updated : Feb 16, 2023, 03:43 PM IST
  • ಕೋಟಿ ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ‘ಮಾರ್ಟಿನ್’ ಟೀಸರ್ ಫೆ.23ಕ್ಕೆ ರಿಲೀಸ್
  • ಪಂಚ ಭಾಷೆಗಳಲ್ಲಿ ಅಭಿಮಾನಿಗಳಿಗೆ ‘ಮಾರ್ಟಿನ್’ ಟೀಸರ್‍ ಅರ್ಪಿಸಲು ಚಿತ್ರತಂಡದಿಂದ ಅದ್ದೂರಿ ತಯಾರಿ
  • ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಪೇಯ್ಡ್ ಟೀಸರ್ ಲಾಂಚ್ ಇವೆಂಟ್ ಆಯೋಜನೆ
Martin Teaser: ‘ಮಾರ್ಟಿನ್’ ಚಿತ್ರದ ಟೀಸರ್ ವೀಕ್ಷಣೆಗೆ ಪೇಯ್ಡ್ ಪ್ರೀಮಿಯರ್; ಗೋಶಾಲೆಗಳಿಗೆ ನೆರವು title=
‘ಮಾರ್ಟಿನ್’ ಟೀಸರ್ ಫೆ.23ಕ್ಕೆ ರಿಲೀಸ್

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಕೊನೆಗೂ ಅಂತಿಮ ಹಂತಕ್ಕೆ ಬಂದಿದೆ.. ಕೋಟಿ ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ‘ಮಾರ್ಟಿನ್’ ಟೀಸರ್ ಇದೇ ತಿಂಗಳ 23ಕ್ಕೆ ರಿಲೀಸ್ ಆಗಲಿದೆ. ವಿಶೇಷ ಅಂದ್ರೆ ಟೀಸರ್ ರಿಲೀಸ್ ಆಗೋ ದಿನ ಧ್ರುವ ಅಭಿಮಾನಿಗಳ ಜೊತೆ ಸೇರಿ ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ. ಅಷ್ಟಕ್ಕೂ ಧ್ರುವ ‘ಮಾರ್ಟಿನ್’ ಟೀಸರ್ ದಿನ ಕೈಗೆತ್ತಿಕೊಂಡ ಕೆಲಸ ಏನು ಅಂತೀರಾ? ಈ ಉತ್ತಮ ಕೆಲಸದಲ್ಲಿ ಧ್ರುವ ವಿಐಪಿಗಳ ಪಾಲೇನು? ಇಲ್ಲಿದೆ ಸಂಪೂರ್ಣ ಮಾಹಿತಿ

‘ಪೊಗರು’ ಸಿನಿಮಾ ಬಳಿಕ ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಕೈಗೆತ್ತಿಕೊಂಡಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 'ಮಾರ್ಟಿನ್'. ಟೈಟಲ್ ಜೊತೆಗೆ ಫಸ್ಟ್ ಲುಕ್​ನಿಂದಲೇ ಸೌತ್ ಸಿಸಿರಂಗದಲ್ಲಿ ಭರ್ಜರಿ  ಕ್ರೇಜ್ ಹುಟ್ಟಿಸಿರೋ ‘ಮಾರ್ಟಿನ್’ ಸಿನಿಮಾ ಬಗ್ಗೆ ಧ್ರುವ ವಿಐಪಿಗಳಲ್ಲಿ ಬೆಟ್ಟದಂತ ನಿರೀಕ್ಷೆ ಬೆಳೆದು ನಿಂತಿದೆ. ಇನ್ನು ನಿರ್ದೇಶಕ ಎ.ಪಿ.ಅರ್ಜುನ್ ಅಂದುಕೊಂಡಂತೆ ಅಗಿದ್ರೆ  ಮಾರ್ಟಿನ್ ಇಷ್ಟುಹೊತ್ತಿಗಾಗಲೇ  ಅಭಿಮಾನಿಗಳ ಅಂಗಳದಲ್ಲಿ ಚಿತ್ತಾರ  ಬಿಡಿಸಿ.. ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಬೇಕಿತ್ತು.. ಅದ್ರೆ ಟೆಕ್ನಿಕಲ್ ಕಾರಣಗಳಿಂದ ಕೊಂಚ ತಡವಾಗಿಯಾದ್ರು ಟಾಕಿ ಫೋಷನ್ ಶೂಟಿಂಗ್ ಕಂಪ್ಲೀಟ್ ಮಾಡಿ ಸದ್ಯ ಪೋಸ್ಟ್ ಪ್ರೊಡಕ್ಷನ್‍ನಲ್ಲಿ ಬ್ಯಸಿಯಾಗಿದೆ ‘ಮಾರ್ಟಿನ್’ ಬಳಗ.

ಯಾವಾಗ ‘ಮಾರ್ಟಿನ್’ ಶೂಟಿಂಗ್ ತಡವಾಯ್ತೋ ಚಿತ್ರದ ಬಗ್ಗೆ ಯಾವ ಅಪ್ಡೇಟ್ ಸಿಗದೆ ಧ್ರುವ ಅಭಿಮಾನಿಗಳು ನಿರಾಸೆ ಅನುಭವಿಸಿದ್ರು. ಅದರೆ ಶೂಟಿಂಗ್ ಕಂಪ್ಲೀಟ್ ಆಗ್ತಿದಂತೆ ‘ಮಾರ್ಟಿನ್’ ಬಳಗ ಆಕ್ಟೀವ್ ಆಗಿದ್ದು ದ್ರುವ ವಿಐಪಿಗಳಿಗೆ ಭರ್ಜರಿ ಸುದ್ದಿ ಕೊಟ್ಟದೆ. ಇದೆ ತಿಂಗಳ 23ಕ್ಕೆ ಪಂಚ ಭಾಷೆಗಳಲ್ಲಿ ‘ಮಾರ್ಟಿನ್’ ಟೀಸರ್ ನ ಅಭಿಮಾನಿಗಳಿಗೆ ಅರ್ಪಿಸಲು ಚಿತ್ರತಂಡ ಅದ್ದೂರಿಯಾಗಿ ತಯಾರಿ ಮಾಡಿಕೊಂಡಿದೆ..

ಇದನ್ನೂ ಓದಿ: ಹಿಂದಿ ಭಾಷೆಗೆ ಕನ್ನಡದ ಭಾಗ್ಯಲಕ್ಷ್ಮೀ ಧಾರವಾಹಿ ಡಬ್ ! ಹಿಂದಿಯಲ್ಲಿಯೂ ಮೇಳೈಸಲಿದೆ ಅಕ್ಕ - ತಂಗಿ ಪ್ರೀತಿ

ಇದಲ್ಲದೆ ಬೆಂಗಳೂರಿನಲ್ಲಿ ‘ಮಾರ್ಟಿನ್’ ಟೀಸರ್ ರಿಲೀಸ್ ಅಗೋಕು ಮುನ್ನ 2 ಗಂಟೆ ಮೊದಲು ನೋಡುವ ಸುವರ್ಣಾವಕಾಶವನ್ನು ಧ್ರುವ ವಿಐಪಿಗಳಿಗೆ ಕಲ್ಪಿಸಿದೆ ‘ಮಾರ್ಟಿನ್’ ಸಿನಿತಂಡ.. ವಿಶೇಷ ಅಂದ್ರೆ ‘ಮಾರ್ಟಿನ್’ ಟೀಸರ್ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಅದ್ರೆ ಇದು ಪೇಯ್ಡ್ ಟೀಸರ್ ಲಾಂಚ್ ಇವೆಂಟ್ ಅನ್ನೋದು ಹೈಲೆಟ್. ಅಲ್ಲದೆ ಈ ಶೋನಿಂದ ಬಂದಂತಹ ಸಂಪೂರ್ಣ ಹಣವನ್ನು ಗೋಶಾಲೆಗೆ ನೆರವು ನೀಡಲು ಚಿತ್ರತಂಡ ನಿರ್ಧರಿಸಿದೆ..

ಇನ್ನು ಟೀಸರ್ ಲಾಂಚ್ ಬಗ್ಗೆ ಒಂದಷ್ಟು ಮಾಹಿತಿ ಜೊತೆಗೆ ‘ಮಾರ್ಟಿನ್’ ಚಿತ್ರದ ಪವರ್ ಫುಲ್ ಪೋಸ್ಟರ್ ಲಾಂಚ್ ಮಾಡಿದ ‘ಮಾರ್ಟಿನ್’ ಸಿನಿ ಬಳಗ ಚಿತ್ರದ ಮೇಲಿ‌ನ ನಿರೀಕ್ಷೆಯನ್ನು ದುಪ್ಪಟ್ಟಾಗುವಂತೆ ಮಾಡಿದೆ. ಹೆಸರೇ ಸೂಚಿಸುವಂತೆ ‘ಮಾರ್ಟಿನ್’ ಔಟ್ ಅಂಡ್ ಔಟ್ ಮಾಸ್ ಸಿನಿಮಾವಾಗಿದ್ದು, ಅದರ ಒಂದು ಝಲಕ್ ಅನ್ನುವಂತಿಂದೆ ‘ಮಾರ್ಟಿನ್’ ಪೋಸ್ಟರ್.. ಪೋಸ್ಟರ್ ನಲ್ಲಿ  ‘ಪೊಗರು ಪೋರ ಕೆ.ಎಂ 232’ ಹೆಸರಿನ ಮಿಷನ್ ಗನ್ ಹಿಡಿದು ಶತ್ರುಗಳನ್ನು ಸಂಹಾರ ಮಾಡುವ ಪೋಸ್ಟರ್ ಧ್ರುವ ಅಭಿಮಾನಿಗಳ ಅಂಗಳದಲ್ಲಿ ಕಾಮ‌ನಬಿಲ್ಲು ಮೂಡಿಸಿದೆ..

100 ಕೋಟಿ ವೆಚ್ಚದಲ್ಲಿ ಮೂಡಿ ಬಂದಿರುವ ‘ಮಾರ್ಟಿನ್’ ಚಿತ್ರವನ್ನು ಬೆಂಗೂಳೂರು, ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿರಲಿದೆ. ‘ಮಾರ್ಟಿನ್’ ಚಿತ್ರದ ಕ್ಲೈಮ್ಯಾಕ್ಸ್‌ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮಾ ಹಾಗೂ ರಾಮ್‌-ಲಕ್ಷ್ಮಣ್‌ ಕಂಪೋಸ್‌ ಮಾಡಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್ ನಿತ್ಯ ಮಿಸ್ ಇಲ್ಲದೆ ಮಾಡೋ ಕೆಲಸ ಏನು ಗೊತ್ತಾ....?

ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿರೋದು ಚಿತ್ರದ ಮತ್ತೊಂದು ಹೈಲೇಟ್ ಆಗಿದೆ. ಫೆ.23ಕ್ಕೆ ಚಿತ್ರದ ಟೀಸರ್ ಜೊತೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಪ್ಲಾನ್ ಮಾಡಿರುವ ‘ಮಾರ್ಟಿನ್’ ಚಿತ್ರತಂಡ ಈ ಸಮ್ಮರ್ ಗೆ ಸಿನಿಮಾವನ್ನು ಬೆಳ್ಳಿತೆರೆ ಮೇಲೆ ಮೂಡಿಸಲು ಪ್ಲಾನ್ ಮಾಡಿಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News