"ರಾಮ ಭಕ್ತ ಹನುಮ ದೇವರಲ್ಲ"..! ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ ʼಆದಿಪುರುಷʼ ಡೈಲಾಗ್ ರೈಟರ್

Manoj Muntashir : ʼಆದಿಪುರುಷʼ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದೆ. ಮನೋಜ್ ಮುಂತಾಶಿರ್ ಅವರು ಪ್ರಭಾಸ್ ಅಭಿನಯದ ಈ ಪೌರಾಣಿಕ ಮಹಾಕಾವ್ಯದ ಕಥಾಹಂದರ ಸಿನಿಮಾದಲ್ಲಿ ಸಂಭಾಷಣೆ ಬರೆದಿದ್ದಾರೆ. ಅಲ್ಲದೆ ಇತ್ತೀಚಿಗೆ  ಹನುಮಂತನ ಕುರಿತು ಮಾತನಾಡಿದ್ದ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದಾರೆ.

Written by - Krishna N K | Last Updated : Jul 8, 2023, 08:20 PM IST
  • ಜನರ ಕ್ಷಮೆಯಾಚಿಸಿದ ಆದಿಪುರುಷ ಚಿತ್ರದ ಸಂಭಾಷಣೆಕಾರ.
  • ಹುನಮನ ಕುರಿತು ಹೇಳಿಕೆ ನೀಡಿದ್ದ ಮನೋಜ್ ಮುಂತಾಶಿರ್.
  • ಓಂ ರಾವುತ್‌ ನಿರ್ದೇಶನ ಆದಿಪುರಷ ಸಿನಿಮಾದ ಡೈಲಾಗ್‌ ರೈಟರ್‌.
"ರಾಮ ಭಕ್ತ ಹನುಮ ದೇವರಲ್ಲ"..! ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ ʼಆದಿಪುರುಷʼ ಡೈಲಾಗ್ ರೈಟರ್ title=

Manoj Muntashir on Adipurush : ಓಂ ರಾವುತ್‌ ನಿರ್ದೇಶನ ಪ್ರಭಾಸ್‌ ಹಾಗೂ ಕೃತಿ ಸನೋನ್‌ ನಟನೆಯ ಆದಿಪುರಷ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದೆ. ಕಳಪೆ ಗ್ರಾಫಿಕ್ಸ್‌ ಮತ್ತು ಸಂಭಾಷಣೆ, ವೇಷಭೂಷಣದಿಂದ ಟೀಕೆಗೆ ಗುರಿಯಾಗಿತ್ತು. ಅಲ್ಲದೆ, ಇತ್ತೀಚಿಗೆ ಈ ಚಿತ್ರದ ಸಂಭಾಷಣೆ ಕಾರ ಮನೋಜ್‌ ಮುಂತಾಶಿರ್‌ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಆದಿಪುರಷ ಸಿನಿಮಾದಲ್ಲಿ ಪ್ರಭಾಸ್ ಭಗವಾನ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿದ್ದಾರೆ. ಆದಿಪುರುಷ ಜೂನ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಓಂ ರಾವುತ್ ನಿರ್ದೇಶಿಸಿದ ಮತ್ತು ಸಂಸ್ಕೃತ ಮಹಾಕಾವ್ಯ ರಾಮಾಯಣವನ್ನು ಆಧರಿಸಿ, ಚಿತ್ರದ ನಿರ್ಮಾಪಕರು ಚಿತ್ರದಲ್ಲಿ ಬಳಸಲಾದ ಭಯಾನಕ ದೃಶ್ಯ ಪರಿಣಾಮಗಳು, ಕಳಪೆ ಪಾತ್ರ ಮತ್ತು ಭಾಷೆಯಿಂದ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಇದನ್ನೂ ಓದಿ: ರಮ್ಯಾ ಅವತಾರ ನೋಡಿ.. "ಚಡ್ಡಿ ಹಾಕಿದಿಯೇನಮ್ಮಾ" ಎಂದ ನೆಟ್ಟಿಗರು..!

ಇನ್ನು ಸಂಭಾಷಣೆಕಾರ ಮನೋಜ್ ಮುಂತಾಶಿರ್ ಈ ಹಿಂದೆ ಹುನುಮ ದೇವರಲ್ಲ, ಆದಿಪುರುಷ ರಾಮಾಯಣವಲ್ಲ ಎಂದು ಹೇಳಿಕೆ ನೀಡಿದ್ದರು. ತಮ್ಮ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಕ್ಷಮೆಯಾಚಿಸಿದ್ದಾರೆ, ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, "ಜನರ ಭಾವನೆಗಳನ್ನು ನಾನು ಸ್ವೀಕರಿಸುತ್ತೇನೆ. ಆದಿಪುರುಷನಿಂದ ನೋವಾಗಿದೆ. ಕೈಮುಗಿದು ಕ್ಷಮೆಯಾಚಿಸುತ್ತೇನೆ. ಪ್ರಭು ಬಜರಂಗ ಬಲಿ ನಮ್ಮನ್ನು ಒಗ್ಗೂಡಿಸಿ ಮತ್ತು ನಮ್ಮ ಪವಿತ್ರ ಸನಾತನ ಹಾಗೂ ನಮ್ಮ ಮಹಾನ್ ರಾಷ್ಟ್ರದ ಸೇವೆ ಮಾಡಲು ನಮಗೆ ಶಕ್ತಿಯನ್ನು ನೀಡಲಿ ಎಂದು ಕೋರಿದ್ದಾರೆ.

600 ಕೋಟಿಗೂ ಹೆಚ್ಚು ಬಜೆಟ್‌ನಲ್ಲಿ ನಿರ್ಮಿಸಲಾದ ಓಂ ರಾವುತ್ ನಿರ್ದೇಶನದ ಆದಿಪುರುಷ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಿದೆ. ಈ ಕಾರಣಕ್ಕಾಗಿಯೇ ವಿಶ್ವಾದ್ಯಂತ 390 ಕೋಟಿ ರೂಪಾಯಿಗಳ ಒಟ್ಟು ಸಂಗ್ರಹಿಸಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News