ಸತಿ-ಪತಿಯಾದ 'ಮಜಾಭಾರತ' ಖ್ಯಾತಿಯ ಸುಶ್ಮಿತಾ-ಜಗಪ್ಪ: ಹಾಸ್ಯ ನವಜೋಡಿಗೆ ಸಿನಿತಾರೆಯರ ಶುಭಹಾರೈಕೆ!

Comedy Reality Show Pair: ಮಜಾ ಭಾರತ ಶೋ ಮೂಲಕ ಪರಿಚಯವಾದ ಸುಶ್ಮಿತಾ ಹಾಗೂ ಜಗಪ್ಪ ನವೆಂಬರ್ 19ರಂದು  ಭಾನುವಾರ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಹಲವಾರು ಕಿರುತೆರೆ ಹಾಗೂ ಹಿರಿತೆರೆ ಕಲಾವಿದರೂ ಶುಭ ಹಾರೈಸಿದ್ದಾರೆ.  

Written by - Zee Kannada News Desk | Last Updated : Nov 20, 2023, 12:23 PM IST
  • ಕಾಮಿಡಿ ರಿಯಾಲಿಟಿ ಶೋಗಳಿಂದ ಸುಶ್ಮಿತಾ ಹಾಗೂ ಜಗಪ್ಪ ಇಬ್ಬರು ತಮ್ಮ ನಟನೆಯಿಂದ ಕನ್ನಡಿಗರ ಮನಸ್ಸು ಗೆದ್ದ ಕಲಾವಿದರು.
  • ಸುಶ್ಮಿತಾ ಹಾಗೂ ಜಗಪ್ಪ ಪ್ರೀತಿಯಲ್ಲಿ ಬಿದ್ದಿರುವುದು ಎಲ್ಲರಿಗೂ ತಿಳಿದ್ದು, ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
  • ನವೆಂಬರ್ 19ರಂದು ಭಾನುವಾರ ಜಗಪ್ಪ ಹಾಗೂ ಸುಶ್ಮಿತಾ ಬೆಂಗಳೂರಿನ ಜೆಪಿ ನಗರದ ಸಿಂಧೂರ ಕನ್ವೆಷನ್ ಹಾಲ್‌ನಲ್ಲಿ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸತಿ-ಪತಿಯಾದ 'ಮಜಾಭಾರತ' ಖ್ಯಾತಿಯ ಸುಶ್ಮಿತಾ-ಜಗಪ್ಪ: ಹಾಸ್ಯ ನವಜೋಡಿಗೆ ಸಿನಿತಾರೆಯರ ಶುಭಹಾರೈಕೆ! title=

Jagappa And Sushmitha Married: ಕಾಮಿಡಿ ರಿಯಾಲಿಟಿ ಶೋಗಳಾದ ಮಜಾಭಾರತ, ಕಾಮಿಡಿ ಟಾಕೀಸ್‌ ಹಾಗೂ ಗಿಚ್ಚಿಗಿಲಿಗಿಲಿ ಕಾಣಿಸಿಕೊಂಡ ಸುಶ್ಮಿತಾ ಹಾಗೂ ಜಗಪ್ಪ ಇಬ್ಬರು ತಮ್ಮ ನಟನೆಯಿಂದ ಕನ್ನಡಿಗರ ಮನಸ್ಸು ಗೆದ್ದ ಕಲಾವಿದರು. ನಟಿ ಸುಶ್ಮಿತಾಗೆ ಒಂದು ಕಡೆ ಹಲವಾರು ಸೀರಿಯಲ್‌, ಸಿನಿಮಾಗಳ ಆಫರ್‌ ಪಡೆದು ತಮ್ಮ ನಟನೆ ಮೂಲಕ ಸೈ ಎನಿಸಿಕೊಂಡರೆ, ಇನ್ನೊಂದು ಕಡೆ ಜಗಪ್ಪ ಸಹ ಹಲವಾರು ಕಿರುಚಿತ್ರ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದಾರೆ. 

ಮಜಾ ಭಾರತ ಶೋ ಮೂಲಕ ಪರಿಚಯವಾದ ಈ ಜೋಡಿ ನವೆಂಬರ್ 18ರಂದು ಶನಿವಾರ ಈ ಜೋಡಿಯ ಮೆಹಂದಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು, ನವೆಂಬರ್ 19ರಂದು  ಭಾನುವಾರ ಜಗಪ್ಪ ಹಾಗೂ ಸುಶ್ಮಿತಾ ಬೆಂಗಳೂರಿನ ಜೆಪಿ ನಗರದ ಸಿಂಧೂರ ಕನ್ವೆಷನ್ ಹಾಲ್‌ನಲ್ಲಿ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಳಗ್ಗೆ 10 ಗಂಟೆಯ ಶುಭ ಮುಹೂರ್ತ ಈ ಜೋಡಿ ಸತಿ ಪತಿಗಳಾಗಿದ್ದು, ಮದುವೆಗೆ ಕಿರುತೆರೆ, ಹಿರಿತೆರೆ ಕಲಾವಿದರು ಸಾಕ್ಷಿಯಾಗಿದ್ದರು. 

ಇದನ್ನು ಓದಿ: ಉದ್ಯಮಿಯೊಂದಿಗೆ ಹಸೆಮಣೆ ಏರಿದ ಬೃಂದಾನವನ ನಟಿ: ಕಾರ್ತಿಕಾ ಮದ್ವೆಗೆ ತಾರೆಯರ ದಂಡು...

ಜಗಪ್ಪ ಹಾಗೂ ಸುಶ್ಮಿತಾ ಜೋಡಿಯ ಮದುವೆಗೆ ಕಿರುತೆರೆಯ ಹಲವು ನಟ, ನಟಿಯರಾದ  ನಿರಂಜನ್ ದೇಶಪಾಂಡೆ ದಂಪತಿ, ನಟಿ ಶೃತಿ ಮಗಳು ಗೌರಿ, ನಟಿ ಶೃತಿ ರಮೇಶ್, ಪಾವಗಡ ಮಂಜು, ಸಿತಾರಾ ಮಜ ಭಾರತ ರಿಯಾಲಿಟಿ ಶೋ ತಂಡ ಬಂದಿತ್ತು. ಇದಲ್ಲದೆ ನಟ ರವಿಚಂದ್ರನ್, ಪ್ರಜ್ವಲ್ ದೇವರಾಜ್ ಸೇರಿ ಕೆಲವು ಸಿನಿಮಾ ತಾರೆಯರು ನವಜೋಡಿಗೆ ಶುಭಹಾರೈಸಿದ್ದಾರೆ. ಈ ಜೋಡಿ ಜೊತೆಯಾಗಿಯೇ ಹಲವಾರು ಶೋಗಳಲ್ಲಿ  ಭಾಗಿಯಾಗಿದ್ದು, ಒಂದೇ ವೇದಿಕೆಯ ಮೇಲೆ ಅನೇಕ ಬಾರಿ ಗಂಡ ಹೆಂಡತಿಯಾಗಿಯೇ ಅಭಿನಯಿಸಿದ್ದಾರೆ. 

ಸುಶ್ಮಿತಾ ಹಾಗೂ ಜಗಪ್ಪ ಪ್ರೀತಿಯಲ್ಲಿ ಬಿದ್ದಿರುವುದು ಎಲ್ಲರಿಗೂ ತಿಳಿದ್ದು, ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದಲ್ಲಿ ತಮ್ಮ ಪ್ರೀತಿ ಬಗ್ಗೆ ರಿವೀಲ್ ಮಾಡಿದ್ದರು. ಇತ್ತೀಚೆಗೆ ಕುಟುಂಬಸ್ಥರು ಮತ್ತು ಗುರು ಹಿರಿಯ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, ಹಾಗೆಯೇ ಈ ಕಾರ್ಯಕ್ರಮದಲ್ಲಿ ಜಗಪ್ಪ 5 ಗುಲಾಬಿಗಳನ್ನು ಹಿಡಿದುಕೊಂಡು ಒಂದೊಂದಾಗಿ ಸುಶ್ಮಿತಾಗೆ ಕೊಡುತ್ತಾ ಪ್ರಪೋಸ್ ಮಾಡಿದ್ದರು. ಆ ಪ್ರೀತಿ ಇದೀಗ ಮದುವೆಯಲ್ಲಿ ಮತ್ತೆ ಪುನರಾರಂಭವಾಗಿ, ಜಗಪ್ಪ ಹಾಗೂ ಸುಶ್ಮಿತಾ ಜೋಡಿಯನ್ನು ನೋಡಿದ ಅಭಿಮಾನಿಗಳು ಕೂಡ ಇಬ್ಬರು ನಿಜ ಜೀವನದಲ್ಲಿ ಒಂದಾದರೇ ಚೆನ್ನಾಗಿರುತ್ತದೆ ಎಂದು ಆಶಿಸಿದ್ದರು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News