ರಾಣಾ, ದಿಲ್‌ ಪಸಂದ್‌, ಯಶೋದಾ : ನಾಳೆ ಬಿಡುಗಡೆಯಾಗಲಿವೆ 8 ಕ್ಕೂ ಹೆಚ್ಚು ಸಿನಿಮಾಗಳು..!

ಸಿನಿ ಪ್ರೇಕ್ಷಕರು ಶುಕ್ರವಾರ ಯಾವಾಗ ಬರ್ತಪ್ಪಾ.. ಯಾವ ಹೊಸ ಸಿನಿಮಾ ರಿಲೀಸ್‌ ಆಗುತ್ತಪ್ಪಾ.. ಅಂತ ಕಾಯ್ದು ಕುಳಿತಿರುತ್ತಾರೆ. ಈ ವಾರವೂ ಸಹ ಸಿನಿಮಾ ಅಭಿಮಾನಿಗಳಿಗೆ ಭರ್ಜರಿ ಸಿನಿ ಭೋಜನ ಕಾಯ್ದಿದ್ದು, ಒಂದೇ ದಿನ ಹಲವು ಸಿನಿಮಾಗಳು ಒಟ್ಟಿಗೆ ಚಿತ್ರಮಂದಿರಕ್ಕೆ ಕಾಲಿಡಲಿವೆ.

Written by - Krishna N K | Last Updated : Nov 10, 2022, 05:14 PM IST
  • ನಾಳೆ ಬಿಡುಗಡೆಯಾಗಲಿವೆ 8 ಕ್ಕೂ ಹೆಚ್ಚು ಸಿನಿಮಾಗಳು
  • ರಾಣಾ, ದಿಲ್‌ ಪಸಂದ್‌, ಯಶೋದಾ ಸೇರಿದಂತೆ ಬಾಲಿವುಡ್‌ ಸಿನಿಮಾಗಳು ತೆರೆಗೆ
  • ಕಾಂತಾರ ಅಬ್ಬರದ ನಡುವೆಯೂ ಮೋಡಿ ಮಾಡ್ತಾವಾ ಹೊಸ ಸಿನಿಮಾಗಳು
ರಾಣಾ, ದಿಲ್‌ ಪಸಂದ್‌, ಯಶೋದಾ : ನಾಳೆ ಬಿಡುಗಡೆಯಾಗಲಿವೆ 8 ಕ್ಕೂ ಹೆಚ್ಚು ಸಿನಿಮಾಗಳು..! title=

ಬೆಂಗಳೂರು : ಸಿನಿ ಪ್ರೇಕ್ಷಕರು ಶುಕ್ರವಾರ ಯಾವಾಗ ಬರ್ತಪ್ಪಾ.. ಯಾವ ಹೊಸ ಸಿನಿಮಾ ರಿಲೀಸ್‌ ಆಗುತ್ತಪ್ಪಾ.. ಅಂತ ಕಾಯ್ದು ಕುಳಿತಿರುತ್ತಾರೆ. ಈ ವಾರವೂ ಸಹ ಸಿನಿಮಾ ಅಭಿಮಾನಿಗಳಿಗೆ ಭರ್ಜರಿ ಸಿನಿ ಭೋಜನ ಕಾಯ್ದಿದ್ದು, ಒಂದೇ ದಿನ ಹಲವು ಸಿನಿಮಾಗಳು ಒಟ್ಟಿಗೆ ಚಿತ್ರಮಂದಿರಕ್ಕೆ ಕಾಲಿಡಲಿವೆ.

ಹೌದು, ನಾಳೆ ಶುಕ್ರವಾರ ಸಿನಿಪ್ರೇಮಿಗಳಿಗೆ ಹಬ್ಬದ ದಿನ. ಹೊಸ ಸಿನಿಮಾಗಳನ್ನು ನೋಡುವ ಕಾತರತೆಯಿಂದ ಪ್ರೇಕ್ಷಕರು ಕಾಯುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ʼಕಾಂತಾರ’ದ ಹವಾ ಕಡಿಮೆಯಾಗಿಲ್ಲ. ಇದರ ನಡುವೆ ಕನ್ನಡದಲ್ಲಿ ರಾಣಾ, ದಿಲ್‌ ಪಸಂದ್‌, ಓ, ಹುಬ್ಬಳ್ಳಿ ಡಾಬಾ, ಯೆಲ್ಲೋ ಗ್ಯಾಂಗ್ಸ್​ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

ಇದನ್ನೂ ಓದಿ: ವಯಸ್ಸು ಹೆಚ್ಚಿದಂತೆ ಮೀರಾ ಅಂದವೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ..!

ಡಾರ್ಲಿಂಗ್‌ ಕೃಷ್ಣ, ಮೇಘಾ ಶೆಟ್ಟಿ ಅಭಿನಯದ ದಿಲ್‌ ಪಸಂದ್‌ ಟ್ರೈಲರ್‌ ಮೂಲಕವೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಣಾ ಸಿನಿಮಾ ಕೂಡಾ ನಾಳೆ ಅಂದ್ರೆ, ನ.11ರಂದು ಬಿಡುಗಡೆಯಾಗಲಿದೆ. ಶ್ರೇಯಸ್‌ ಮಂಜು ಮತ್ತು ರೀಷ್ಮಾ ಈ ಚಿತ್ರದಲ್ಲಿದ್ದಾರೆ. ಇನ್ನು ಲವ್‌ ಸಿನಿಮಾಗಳ ನಡುವೆ ವಿಶಿಷ್ಟ ಶೀರ್ಷಿಕೆ ಮೂಲಕ ಓ ಎಂಬ ಸಿನಿಮಾ ಬಿಡುಗಡೆಯಾಗಲಿದೆ. ಮಿಲನಾ ನಾಗರಾಜ್​ ಮತ್ತು ಅಮೃತಾ ಅಯ್ಯಂಗಾರ್​ ಈ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾದಲ್ಲಿದ್ದಾರೆ. ʼಯೆಲ್ಲೋ ಗ್ಯಾಂಗ್ಸ್​ʼ ಕೂಡ ನಾಳೆ ಬಿಡುಗಡೆಯಾಗಲಿದೆ.

ಇನ್ನು ಕನ್ನಡ ಸಿನಿಮಾಗಳ ಜೊತೆಗೆ ಅಮಿತಾಭ್​ ಬಚ್ಚನ್​ ನಟನೆಯ ʼಊಂಚಾಯಿʼ ಚಿತ್ರ ರಿಲೀಸ್‌ ಆಗಲಿದೆ. ಹಾಲಿವುಡ್‌ನ ʼಬ್ಲ್ಯಾಕ್​ ಪ್ಯಾಂಥರ್​ʼ ಸಿನಿಮಾ ಕೂಡ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲಿ ತೆರೆಗೆ ಬರತ್ತಿದೆ. ಇನ್ನು ಬಹು ನಿರೀಕ್ಷಿತ ಸಿನಿಮಾ ಯಶೋದಾ ಸಹ ನಾಳೆ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಅಬ್ಬರಿಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News