'ಮದುವೆ ಯಾವಾಗ ಆಗಬೇಕು ಎನ್ನುವುದು ಕೆ.ಎಲ್.ರಾಹುಲ್ ಮತ್ತು ಅಥಿಯಾಗೆ ಬಿಟ್ಟ ವಿಷಯ..!

ಮಗಳು ಅಥಿಯಾ ಮತ್ತು ಆಕೆಯ ಗೆಳೆಯ ಕೆಎಲ್ ರಾಹುಲ್ ಇಬ್ಬರಿಗೂ ನನ್ನ ಹಾರೈಕೆ ಇದೆ, ಆದರೆ ಯಾವಾಗ ಮದುವೆಯಾಗಬೇಕು ಎನ್ನುವುದು ಅವರಿಗೆ ಬಿಟ್ಟದ್ದು ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದ್ದಾರೆ.ಇದುವರೆಗೂ ಈ ದಂಪತಿಗಳು ತಮ್ಮ ಡೇಟಿಂಗ್ ಬಗ್ಗೆ ಅಧಿಕೃತವಾಗಿ ದೃಢಪಡಿಸದಿದ್ದರೂ,ಈ ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ವರದಿಗಳು ಕೇಳಿ ಬರುತ್ತಿವೆ.

Written by - Zee Kannada News Desk | Last Updated : May 12, 2022, 04:46 PM IST
  • ಮಗಳು ಅಥಿಯಾ ಮತ್ತು ಆಕೆಯ ಗೆಳೆಯ ಕೆಎಲ್ ರಾಹುಲ್ ಇಬ್ಬರಿಗೂ ನನ್ನ ಹಾರೈಕೆ ಇದೆ, ಆದರೆ ಯಾವಾಗ ಮದುವೆಯಾಗಬೇಕು ಎನ್ನುವುದು ಅವರಿಗೆ ಬಿಟ್ಟದ್ದು ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದ್ದಾರೆ.
  • ಇದುವರೆಗೂ ಈ ದಂಪತಿಗಳು ತಮ್ಮ ಡೇಟಿಂಗ್ ಬಗ್ಗೆ ಅಧಿಕೃತವಾಗಿ ದೃಢಪಡಿಸದಿದ್ದರೂ,ಈ ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ವರದಿಗಳು ಕೇಳಿ ಬರುತ್ತಿವೆ.
 'ಮದುವೆ ಯಾವಾಗ ಆಗಬೇಕು ಎನ್ನುವುದು ಕೆ.ಎಲ್.ರಾಹುಲ್ ಮತ್ತು ಅಥಿಯಾಗೆ ಬಿಟ್ಟ ವಿಷಯ..! title=

ಮುಂಬೈ: ಮಗಳು ಅಥಿಯಾ ಮತ್ತು ಆಕೆಯ ಗೆಳೆಯ ಕೆಎಲ್ ರಾಹುಲ್ ಇಬ್ಬರಿಗೂ ನನ್ನ ಹಾರೈಕೆ ಇದೆ, ಆದರೆ ಯಾವಾಗ ಮದುವೆಯಾಗಬೇಕು ಎನ್ನುವುದು ಅವರಿಗೆ ಬಿಟ್ಟದ್ದು ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದ್ದಾರೆ.ಇದುವರೆಗೂ ಈ ದಂಪತಿಗಳು ತಮ್ಮ ಡೇಟಿಂಗ್ ಬಗ್ಗೆ ಅಧಿಕೃತವಾಗಿ ದೃಢಪಡಿಸದಿದ್ದರೂ,ಈ ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ವರದಿಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ- PM Awas Yojana:ಪಿಎಂ ಆವಾಸ್ ಯೋಜನೆಯಲ್ಲಿ ಸರ್ಕಾರ ಮಾಡಿರುವ ಈ ಬದಲಾವಣೆ ನಿಮಗೆ ತಿಳಿದಿರಲಿ, ಇಲ್ದಿದ್ರೆ...!

ಬುಧವಾರದಂದು ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸುನಿಲ್ ಶೆಟ್ಟಿ ಅವರು ರಾಹುಲ್ ಮತ್ತು ಅತಿಯಾ ರ ಮದುವೆ ವಿಚಾರವಾಗಿ ಖಚಿತವಾಗಿ ಏನೂ ಹೇಳಲಿಲ್ಲ.ಅವರ ಮದುವೆಯ ವಿಚಾರವಾಗಿ ಮಾತನಾಡುತ್ತಾ "ಅವಳು ನನ್ನ ಮಗಳು, ಅವಳು ಯಾವಾಗಲಾದರೂ ಮದುವೆಯಾಗುತ್ತಾಳೆ.ನನ್ನ ಮಗನಿಗೂ ಸಹ ನಾನು ಮದುವೆ ಆಗಬೇಕೆಂದು ಬಯಸುತ್ತೇನೆ.ಎಷ್ಟು ಬೇಗ ಆಗುತ್ತೋ ಅಷ್ಟು ಒಳ್ಳೆಯದು..! ಆದರೆ ಇದು ಅವರ ಆಯ್ಕೆಯಾಗಿದೆ.ರಾಹುಲ್‌ಗೆ ಸಂಬಂಧಿಸಿದಂತೆ, ನಾನು ಆ ಹುಡುಗನನ್ನು ಇಷ್ಟಪಟ್ಟಿದ್ದೇನೆ.ಆದರೆ ಮದುವೆ ವಿಚಾರವಾಗಿ ಅವರು ನಿರ್ಧರಿಸುತ್ತಾರೆ, ಏಕೆಂದರೆ ಈಗ ಸಮಯ ಬದಲಾಗಿದೆ.ಅಂತಿಮವಾಗಿ ಅವರೇ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ.ನನ್ನ ಆಶೀರ್ವಾದ ಯಾವಾಗಲೂ ಇರುತ್ತದೆ" ಎಂದು ಸುನಿಲ್ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ಸಿನಿಪ್ರಿಯರಿಗೆ ವೀಕೆಂಡ್ ಧಮಾಕಾ..ಮೇ 13ಕ್ಕೆ ಜೀ5 ಒಟಿಟಿಯಲ್ಲಿ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳು ರಿಲೀಸ್..!

ಅಥಿಯಾ ಮತ್ತು ಕೆಎಲ್ ರಾಹುಲ್ ಒಂದು ವಿಷಯ ಮತ್ತು ಕಳೆದ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.ಅಷ್ಟೇ ಅಲ್ಲದೆ ರಾಹುಲ್ ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವಾಸಗಳಲ್ಲಿ ಅವರೊಂದಿಗೆ ಪ್ರಯಾಣಿಸುತ್ತಾರೆ ಎಂದು ವರದಿಯಾಗಿದೆ.ಇತ್ತೀಚಿಗೆ ಅತಿಯಾ ಸಹೋದರ ಅಹಾನ್ ಶೆಟ್ಟಿ ಅವರ 'ತಡಪ್' ಚಲನಚಿತ್ರದ ವಿಶೇಷ ಚಲನಚಿತ್ರ ಪ್ರದರ್ಶನದಲ್ಲಿ,ರಾಹುಲ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.ಅಥಿಯಾ 2015 ರಲ್ಲಿ 'ಹೀರೋ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು 'ಮುಬಾರಕನ್', 'ನವಾಬ್ಜಾದೆ' ಮತ್ತು 'ಮೋತಿಚೂರ್ ಚಕ್ನಾಚೂರ್' ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News