AR Rahman Mohini Dey : ಸಾಯಿರಾ ಭಾನು ಅವರು ಇತ್ತೀಚೆಗೆ ತಮ್ಮ ವಕೀಲ ವಂದನಾಶಾ ಮೂಲಕ ತಾವು ಎಆರ್ ರೆಹಮಾನ್ ಅವರಿಗೆ ಅಧಿಕೃತ ಡೈವರ್ಸ್ ನೀಡಿರುವುದಾಗಿ ಘೋಷಣೆ ಮಾಡಿದ್ದು ಗೊತ್ತೇ ಇದೆ. ಅಂದಿನಿಂದ, ಪ್ರತಿದಿನ ರೆಹಮಾನ್ ಅವರ ಸಂಬಂಧದ ಕುರಿತು ದಿನಕ್ಕೊಂಡು ವಿಚಾರಗಳು ಹೊರ ಬರುತ್ತಿವೆ..
ಅವುಗಳಲ್ಲಿ ರೆಹಮಾನ್ ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಬಾಸಿಸ್ಟ್ ವಾದಕಿ ಮೋಹಿನಿ ಡೇ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ.. ಅದಕ್ಕಾಗಿಯೇ ಅವರು ವಿಚ್ಛೇದನ ಪಡೆದರು ಎಂಬ ವದಂತಿ ಹಬ್ಬಿತ್ತು. ಆದರೆ ಇದನ್ನು ಮೊಹಿನಿ ಜೊತೆಗೆ ರೆಹಮಾನ್ ಕೂಡ ಖಂಡಿಸಿದ್ದಾರೆ. ರೆಹಮಾನ್ ಅವರು ನನ್ನ ತಂದೆ ಇದ್ದಂತೆ ಅಂತ ಮೋಹಿನಿ ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ ರೆಹಮಾನ್ ಪತ್ನಿ ಕೂಡ ತಮ್ಮ ಪತಿ ಒಳ್ಳೆಯವರು ಎಂದು ವಿಡಿಯೋ ಮೂಲಕ ವಂದತಿಗೆ ತೆರೆ ಏಳೆದಿದ್ದರು. ಅಲ್ಲದೆ, ದಯವಿಟ್ಟು ಇಂತಹ ಅಭಿಯಾನಗಳನ್ನು ಮಾಡಬೇಡಿ ಎಂದು ವಿನಂತಿಸಿದ್ದರು. ಅವರ ಮಕ್ಕಳು ಕೂಡ.. ಪೋಷಕರ ನಿರ್ಧಾರವನ್ನು ಗೌರವಿಸುವಂತೆ ಅಭಿಮಾನಿಗಳನ್ನು ಕೋರಿದ್ದರು.
ಈ ಹಿನ್ನಲೆಯಲ್ಲಿ ರೆಹಮಾನ್ ಸದ್ಯ ಡೈವರ್ಸ್ ನಿಂದ ತುಂಬಾ ಡಿಸ್ಟರ್ಬ್ ಆಗಿದ್ದು, ಒಂದು ವರ್ಷ ಸಂಗೀತ ಮತ್ತು ಸಿನಿಮಾಗಳಿಂದ ಬ್ರೇಕ್ ನೀಡಲು ಬಯಸಿದ್ದಾರೆ ಎಂಬ ಕೆಲವರು ವದಂತಿ ಹಬ್ಬಿವೆ. ಇತ್ತೀಚೆಗಷ್ಟೇ ರೆಹಮಾನ್ ಪುತ್ರಿ ಖತೀಜಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ತಂದೆಯ ಬಗ್ಗೆ ಇರುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಕ್ಲಾರಿಟಿ ನೀಡಿದ್ದಾರೆ.
ರೆಹಮಾನ್ ಸದ್ಯ ರಾಮ್ ಚರಣ್ #Rc16 ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.. ಮೊದಲ ಬಾರಿಗೆ ಜಾನ್ವಿ ಕಪೂರ್ ರಾಮ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶಿಸುತ್ತಿದ್ದಾರೆ. ಇದರ ನಡುವೆ ರೆಹಮಾನ್ ಅವರ ಕುರಿತು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.