ಬೆಂಗಳೂರು: ಎಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾದ ಯಶ್ ಅಭಿನಯದ ಕೆಜಿಎಫ್ ೨ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ, ಈಗ ಜಾಗತಿಕವಾಗಿ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ರೂ.ಗಡಿ ದಾಟಿದ ನಂತರ 1100 ಕೋಟಿ ರೂ ಗಡಿಯತ್ತ ಕಣ್ಣಿಟ್ಟಿದೆ.
Live TV
ಈಗಾಗಲೇ ಭಾರತೀಯ ಸಿನಿರಂಗದ ಇತಿಹಾಸದಲ್ಲಿ ಬಾಹುಬಲಿ ಹೊರತುಪಡಿಸಿ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಈಗಾಗಲೇ ಹಿಂದಿ ಬೆಲ್ಟ್ ನಿಂದಲೇ 391 ಕೋಟಿ ರೂ ಗಳಿಸುವ ಮೂಲಕ ದಂಗಲ್ ದಾಖಲೆಯನ್ನು ಅಳಿಸಿ ಹಾಕಿದೆ, ಅಷ್ಟೇ ಅಲ್ಲದೆ ಅದು ಶೀಘ್ರದಲ್ಲೇ 400 ಕೋಟಿಯನ್ನು ತಲುಪುವ ಮೂಲಕ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಲಿದೆ.
#KGFChapter2 WW Box Office
REFUSES to slow down
Week 1 - ₹ 720.31 cr
Week 2 - ₹ 223.51 cr
Week 3
Day 1 - ₹ 15.28 cr
Day 2 - ₹ 12.42 cr
Day 3 - ₹ 24.30 cr
Day 4 - ₹ 29.79 cr
Day 5 - ₹ 9.24 cr
Day 6 - ₹ 30.67 cr
Day 7 - ₹ 18.85 cr
Total - ₹ 1084.37 cr— Manobala Vijayabalan (@ManobalaV) May 5, 2022
ಬಾಹುಬಲಿ ಚಿತ್ರವು ಹಿಂದಿ ಬೆಲ್ಟ್ ನಲ್ಲಿ 510 ಕೋಟಿ ರೂ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ಕೆಜಿಎಫ್ 2 ಚಿತ್ರವಿದೆ.ಈಗ ಸಿನಿ ಮಾರುಕಟ್ಟೆ ವಿಶ್ಲೇಷಕ ಮನೋಬಾಲಾ ವಿಜಯ್ ಬಾಲನ್ ಅವರು ನೀಡಿರುವ ಮಾಹಿತಿ ಪ್ರಕಾರ ಇದುವರೆಗೆ ಕೆಜಿಎಫ್ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ 1084 ಕೋಟಿ ರೂ ಗಳಿಸಿದೆ.
ಇದಿಷ್ಟೇ ಅಲ್ಲದೆ ನಾಲ್ಕು ಭಾಷೆಗಳಲ್ಲಿ 100 ಕೋಟಿ ರೂ ಗಡಿ ದಾಟಿದ ಮೊದಲ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಯೂ ಕೂಡ ಕೆಜಿಎಫ್ 2 ಚಿತ್ರದ್ದಾಗಿದೆ.ಇನ್ನೊಂದೆಡೆಗೆ ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ಸಿನಿಮಾವೊಂದು ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ.ಗಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.