KGF Chapter 2: ಯಶ್ ಫ್ಯಾನ್ಸ್‌ಗೆ ಸಿಕ್ತು ಗುಡ್ ನ್ಯೂಸ್, ಬಾಕ್ಸ್ ಆಫೀಸ್ ಶೇಕ್ ಮಾಡಲು ‘ರಾಕಿ ಬಾಯ್’ ಸಜ್ಜು!

ಕೆಜಿಎಫ್- 2 ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿದೆ

Written by - YASHODHA POOJARI | Edited by - Puttaraj K Alur | Last Updated : Mar 26, 2022, 10:25 AM IST
  • ಕೆಜಿಎಫ್-2 ಸಿನಿಮಾ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ
  • ಮಾರ್ಚ್ 27ರಂದು ಕೆಜಿಎಫ್ ಚಾಫ್ಟರ್ 2 ಟ್ರೇಲರ್ ರಿಲೀಸ್ ಆಗಲಿದೆ
  • ಟ್ರೇಲರ್ ರಿಲೀಸ್ ಇವೆಂಟ್‍ ಗೆ ಹ್ಯಾಟ್ರಿಕ್ ಹೀರೋ ಶಿವಣ್ಣ, ಪ್ರಭಾಸ್ ಮುಖ್ಯ ಅತಿಥಿ
KGF Chapter 2: ಯಶ್ ಫ್ಯಾನ್ಸ್‌ಗೆ ಸಿಕ್ತು ಗುಡ್ ನ್ಯೂಸ್, ಬಾಕ್ಸ್ ಆಫೀಸ್ ಶೇಕ್ ಮಾಡಲು ‘ರಾಕಿ ಬಾಯ್’ ಸಜ್ಜು! title=
ಕೆಜಿಎಫ್-2 ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ

ಬೆಂಗಳೂರು: ಕೆಜಿಎಫ್- 2… ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಚಿತ್ರ. ತೆರೆಮೇಲೆ ರಾಕಿಂಗ್ ಸ್ಟಾರ್ ಯಶ್(Rocking Star Yash) ಆರ್ಭಟ ಕಣ್ತುಂಬಿಕೊಳ್ಳಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಚಾಪ್ಟರ್​​ 1​ ಬಂದ ಮೇಲೆ ಚಾಪ್ಟರ್ -2 ಸಹ ಬರುತ್ತೆ ಅನ್ನೋ ಸುದ್ದಿ ಜನರ ನಿದ್ದೆ ಕದ್ದಿತ್ತು. ಫೈನಲಿ ಏಪ್ರಿಲ್ 14 ರಂದು ಕೆಜಿಫ್- 2 ಕೂಡ ತೆರೆಗೆ ಅಪ್ಪಳಿಸಲು ಸಕಲ ರೀತಿಯಲ್ಲೂ ಸಜ್ಜಾಗಿದೆ. ಈಗ ಮ್ಯಾಟರ್ ಏನಪ್ಪಾ ಅಂದ್ರೆ ಕೆಜಿಎಫ್ ಚಾಪ್ಟರ್ -2 ನ ಟ್ರೇಲರ್(KGF Chapter 2 Trailer) ಮಾರ್ಚ್ 27ರಂದು ಬಿಡುಗಡೆಯಾಗುತ್ತಿದೆ.

ಒಂದಷ್ಟು ಪೋಸ್ಟರ್, ಫರ್ಸ್ಟ್ ಲುಕ್ ಬಿಡುಗಡೆಯಾಗಿ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಸಿದ ನಂತರ ಮೊನ್ನೆ ತಾನೆ ‘ತೂಫಾನ್’ ಸಾಂಗ್(Toofan Song) ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು.. ಈಗ ಟ್ರೇಲರ್ ಬಿಡುಗಡೆಗೆ ಕ್ಷಣ ಗಣನೆ ಶುರುವಾಗಿದೆ. ಹಾಗಾದ್ರೆ ಗೆಸ್ಟ್ ಯಾರಪ್ಪ ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಎಸ್.. ಶಿವಣ್ಣ ಮತ್ತು ಪ್ರಭಾಸ್ ಮುಖ್ಯ ಅತಿಥಿಗಳಾಗಿ ಇರ್ತಾರೆ ಅನ್ನೋ ಮಾಹಿತಿ ಕೂಡ ಹೊರಬಿದ್ದಿದೆ. ಜೊತೆಗೆ ದೊಡ್ಡ ದೊಡ್ಡ ಸ್ಟಾರ್ ಗಳು ಕೂಡ ಟ್ರೇಲರ್ ರಿಲೀಸ್ ಇವೆಂಟ್ನಲ್ಲಿ ಪಾಲ್ಗೊಳ್ಳುತ್ತಾರೆ ಅನ್ನೋದು ಸದ್ಯದ ಅಪ್ಡೇಟ್.

ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕರವೇ ಪ್ರತಿಭಟನೆ ; ಶಿವರಾಜ್ ಕುಮಾರ್ ಜೊತೆ ಮಾತುಕತೆ

ಟ್ರೇಲರ್ ರಿಲೀಸ್ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ವಿಷಯ ಏನಪ್ಪ ಅಂದ್ರೆ ಬಾಲಿವುಡ್​​​ನ ನಟ, ನಿರ್ದೇಶಕ, ನಿರ್ಮಾಪಕರಾದ ಕರಣ್ ಜೋಹರ್ ಈಗ ಕೆಜಿಎಫ್ ಚಾಪ್ಟರ್- 2 ತಂಡದ ಜೊತೆ ಕೈಜೋಡಿಸಿದ್ದಾರೆ. ಇದೇ ಕಾರಣದಿಂದಾಗಿ ಮಾರ್ಚ್ 27 ಅಂದ್ರೆ ನಾಳೆ ಸಂಜೆ ರಿಲೀಸ್ ಆಗಲಿರುವ ಕೆಜಿಎಫ್-2 ಚಿತ್ರ(KGF Chapter 2)ದ ಟ್ರೇಲರ್ ಕಾರ್ಯಕ್ರಮದ ನಿರೂಪಕರಾಗಿ ಕರಣ್ ಜೋಹರ್(Karan Johar) ಆಯ್ಕೆ ಆಗಿದ್ದಾರೆ. ಅದಕ್ಕಾಗಿಯೇ ಅವರು ಬೆಂಗಳೂರಿಗೆ ಬರ್ತಿದ್ದು, ನಾವು ಹೃದಯ ಪೂರ್ವಕವಾಗಿ ಕರಣ್ ಜೋಹರ್​​ರನ್ನ ಆಹ್ವಾನಿಸುತ್ತಿದ್ದೇವೆ ಅಂತಾ ಹೊಂಬಾಳೆ ಫಿಲ್ಮ್ಸ್​​ ಮಾಹಿತಿ ನೀಡಿದೆ.

ಕೆಜಿಎಫ್(KGF Cinema) ಮೊದಲ ಭಾಗ ಯಾವಾಗ ರಿಲೀಸ್ ಆಯ್ತೋ ಆವತ್ತೇ ನಮ್ಮ ಕನ್ನಡ ಚಿತ್ರರಂಗದ ಖದರ್ ಚೇಂಜ್ ಆಗಿದೆ. ಇನ್ನು ಚಾಪ್ಟರ್- 2 ತೆರೆಗೆ ಅಪ್ಪಳಿಸಿದ್ರೆ ಎಲ್ಲೆಡೆ ಸೌಂಡ್ ಮಾಡುವುದು ಕೂಡ ಪಕ್ಕಾ. ‘ತೂಫಾನ್’ ಸಾಂಗ್ ಈಗಾಗಲೇ ಸಿಕ್ಕಾಪಟ್ಟೆ ಥ್ರಿಲ್ ಕೊಟ್ಟಿದೆ. ಇನ್ನು ಟ್ರೇಲರ್ ಅಂತೂ ಭರ್ಜರಿ ಬಾಡೂಟ ಕೊಡೋದು ಕನ್ಫರ್ಮ್ ಅಂತಾನೇ ಹೇಳಬಹುದು.

ಇದನ್ನೂ ಓದಿ: The Kashmir Files Box Office Collection: ವಿವೇಕ್ ಅಗ್ನಿಹೊತ್ರಿಯ 200 ಕೋಟಿಯ ಘರ್ಜನೆ

ಏನೇ ಆಗಲಿ 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕೆಜಿಎಫ್ ಚಾಫ್ಟರ್-2 ಸಿನಿಮಾ(KGF Chapter 2 Film)ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಲಿದ್ದಾರೆ. ಕೆಜಿಎಫ್ ಮೊದಲ ದಿನದ ಕಲೆಕ್ಷನ್ 100 ಕೋಟಿ ರೂ. ಕ್ಲಬ್ ಸೇರಲಿದೆ ಅನ್ನೋ ಲೆಕ್ಕಾಚಾರ ಕೂಡ ಇದೆ. ನಾವೆಲ್ಲರೂ ಸೇರಿ ‘ಕಮ್ ಕಮ್ ರಾಕಿ ಬಾಯಿ…!’ ಅಂತಾ ಕೆಜಿಎಫ್-2 ಸಿನಿಮಾವನ್ನು ಸ್ವಾಗತಿಸೋಣ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News